ದೆಹಲಿ: ಇಂದು ಕ್ವಾಡ್ ರಾಷ್ಟ್ರ ನಾಯಕರು ವರ್ಚ್ಯುವಲ್ ಸಭೆ (Quad Leaders) ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಫೂಮಿಯೋ ಕಿಶಿಡಾ ಪಾಲ್ಗೊಳ್ಳಲಿದ್ದಾರೆ. ಕ್ವಾಡ್ ನಾಯಕರು 2021ರ ಸೆಪ್ಟೆಂಬರ್ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದರು. ಅದಾದ ಬಳಿಕ ಇಂದು ವರ್ಚ್ಯುವಲ್ ಆಗಿ ಸಭೆ ಸೇರಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಹಾಗೇ, ಇಂದಿನ ವರ್ಚ್ಯುವಲ್ ಶೃಂಗಸಭೆಯಲ್ಲಿ ಇಂಡೋ-ಪೆಸಿಫಿಕ್ ಬೆಳವಣಿಗೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದೂ ತಿಳಿಸಿದೆ. ರಷ್ಯಾ-ಉಕ್ರೇನ್ ಮಧ್ಯೆ ನಡೆಯುತ್ತಿರುವ ಕ್ವಾಡ್ ನಾಯಕರ ವರ್ಚ್ಯುವಲ್ ಸಭೆ ಮಹತ್ವ ಪಡೆದುಕೊಂಡಿದೆ.
PM @narendramodi will participate along with President of USA @POTUS @JoeBiden, Prime Minister of Australia @ScottMorrisonMP, and Prime Minister of Japan @kishida230 in a Quad Leaders’ virtual meeting today.
Press Release ➡️ https://t.co/jEFRFrOiGH
— Arindam Bagchi (@MEAIndia) March 3, 2022
ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿದೆ. ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಕ್ಕೆ ಮತದಾನದಿಂದ ದೂರವೇ ಉಳಿದಿದೆ. ಅಂದರೆ ಪರವಾಗಿಯೂ ಮತ ಹಾಕಲಿಲ್ಲ. ವಿರುದ್ಧವಾಗಿಯೂ ಮತ ಹಾಕಲಿಲ್ಲ. ಆದರೆ ಕ್ವಾಡ್ನ ಉಳಿದ ಮೂರು ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ಗಳು ಉಕ್ರೇನ್ಗೆ ಬೆಂಬಲ ವ್ಯಕ್ತಪಡಿಸಿವೆ. ರಷ್ಯಾವನ್ನು ದುರ್ಬಲಗೊಳಿಸು ಯುಎಎಸ್ ಆ ದೇಶದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಜಪಾನ್ ಕೂಡ ಇದೇ ನೀತಿ ಮುಂದುವರಿಸಿದ್ದು, ಆಸ್ಟ್ರೇಲಿಯಾವೂ ಸಹ ರಷ್ಯಾದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಆದರೆ ಭಾರತ ರಷ್ಯಾದೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದೆ. ಹಾಗೇ, ಇನ್ನೊಂದೆಡೆ ರಷ್ಯಾ ವಿರುದ್ಧ ಪ್ರಬಲವಾಗಿ ನಿಂತಿರುವ ಯುಎಸ್ ಜತೆಗೂ ಒಳ್ಳೆಯ ಬಾಂಧವ್ಯ ಹೊಂದಿದೆ. ಈ ಎಲ್ಲ ಕಾರಣಗಳಿಂದ ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ತುಂಬ ಜಾಣತನದಿಂದ ವರ್ತಿಸುತ್ತಿದೆ.
ಇದನ್ನೂ ಓದಿ: Video: ಸೊಯುಜ್ ರಾಕೆಟ್ ಮೇಲಿದ್ದ ಭಾರತದ ಧ್ವಜವೊಂದನ್ನು ಹಾಗೇ ಬಿಟ್ಟು, ಉಳಿದ ಯುಎಸ್, ಯುಕೆ ಧ್ವಜ ತೆಗೆದು ಹಾಕಿದ ರಷ್ಯಾ
Published On - 12:50 pm, Thu, 3 March 22