ಪ್ರಧಾನಿ ಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್‌ಬರೇಲಿಯಲ್ಲಿ ಗೆಲ್ಲಿ, ರಾಹುಲ್​​​ಗೆ ರಷ್ಯಾ ರಾಜಕೀಯ ವಿಮರ್ಶಕ ಗ್ಯಾರಿ ಕ್ಯಾಸ್ಪರೋವ್ ಸಲಹೆ

|

Updated on: May 04, 2024 | 4:54 PM

ರಷ್ಯಾ ರಾಜಕೀಯ ವಿಮರ್ಶಕ ಗ್ಯಾರಿ ಕಾಸ್ಪರೋವ್ ಅವರು ತಮ್ಮ ಎಕ್ಸ್​​​ ಖಾತೆಯಲ್ಲಿ ರಾಹುಲ್​​​ ಗಾಂಧಿ ಅವರ ಬಗ್ಗೆ ಒಂದು ಪೋಸ್ಟ್​​​ನ್ನು ಹಾಕಿಕೊಂಡಿದ್ದಾರೆ. ರಾಹುಲ್​​ ಗಾಂಧಿ ಅವರೇ ನೀವು ಪ್ರಧಾನಿ ಆಗುವ ಕನಸು ಕಾಣುವ  ಮೊದಲು  ಹೆಚ್ಚಿನ ಸ್ಥಾನದಲ್ಲಿ ರಾಯ್ ಬರೇಲಿಯಿಂದ ಗೆಲ್ಲಬೇಕು ಎಂದು ಗ್ಯಾರಿ ಅವರು ಎಕ್ಸ್​​​​​​  ವ್ಯಂಗ್ಯವಾಗಿ ಟ್ವೀಟ್​​​​​ ಮಾಡಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್‌ಬರೇಲಿಯಲ್ಲಿ ಗೆಲ್ಲಿ, ರಾಹುಲ್​​​ಗೆ ರಷ್ಯಾ ರಾಜಕೀಯ ವಿಮರ್ಶಕ ಗ್ಯಾರಿ ಕ್ಯಾಸ್ಪರೋವ್ ಸಲಹೆ
Follow us on

ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ (rahul gandhi) ಅವರು ಅಮೇಥಿ ಬದಲಿಗೆ ರಾಯ್ ಬರೇಲಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಇದೀಗ ಅದರಂತೆ ನೆನ್ನೆ (ಮೇ3) ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್​​​ ರಾಜಕೀಯದಲ್ಲಿ ರಾಹುಲ್​​ ಇಟ್ಟಿರುವ ಬಹುದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಲಾಗಿತ್ತು. ಇವರ ಈ ನಡೆಯಿಂದ ಬಿಜೆಪಿಯನ್ನು ಅಲ್ಲಿ ಸೋಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಅವರ ಈ ನಿರ್ಧಾರಕ್ಕೆ ರಷ್ಯಾ ಚೆಸ್ ಚಾಂಪಿಯನ್ ಆಗಿರುವ ಗ್ಯಾರಿ ಕ್ಯಾಸ್ಪರೋವ್ (garry kasparov) ಅವರು ಸಲಹೆ ನೀಡಿದ್ದಾರೆ.

ಮಾಜಿ ವಿಶ್ವ ಚೆಸ್ ಚಾಂಪಿಯನ್, ಬರಹಗಾರ, ರಾಜಕೀಯ ತಜ್ಞ, ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಕೀಯ ವಿಮರ್ಶಕರು. ಇವರು ಒಂದು ಸಂಧರ್ಭದಲ್ಲಿ ಪುಟಿನ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಕರೆದಿದ್ದರು. ಇದೀಗ ರಾಹುಲ್​​ ಗಾಂಧಿ ರಾಜಕೀಯ ಭವಿಷ್ಯದ ಬಗ್ಗೆ ಹೇಳಿದ್ದಾರೆ.

ರಾಯ್ ಬರೇಲಿಯಿಂದ ಗೆಲ್ಲಬೇಕು

ಗ್ಯಾರಿ ಕಾಸ್ಪರೋವ್ ಅವರು ತಮ್ಮ ಎಕ್ಸ್​​​ ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್​​​ನ್ನು ಹಾಕಿಕೊಂಡಿದ್ದಾರೆ. ರಾಹುಲ್​​ ಗಾಂಧಿ ಅವರೇ ನೀವು ಪ್ರಧಾನಿ ಆಗುವ ಕನಸು ಕಾಣುವ  ಮೊದಲು  ಹೆಚ್ಚಿನ ಸ್ಥಾನದಲ್ಲಿ ರಾಯ್ ಬರೇಲಿಯಿಂದ ಗೆಲ್ಲಬೇಕು ಎಂದು ಗ್ಯಾರಿ ಅವರು ಎಕ್ಸ್​​​​​​  ವ್ಯಂಗ್ಯವಾಗಿ ಟ್ವೀಟ್​​​​​ ಮಾಡಿದ್ದಾರೆ. ಇದರ ಜತೆಗೆ ಎಕ್ಸ್​​​ ಬಳಕೆದಾರರೊಬ್ಬರು ಒಂದು ವಿಡಿಯೋವನ್ನು ಈ ಪೋಸ್ಟ್​​​​ಗೆ ಕಮೆಂಟ್​​​ ಮಾಡಿದ್ದಾರೆ. ಅದರಲ್ಲಿ ಒಂದು ಸಂದರ್ಶದಲ್ಲಿ ರಾಹುಲ್​​ ಅವರನ್ನು ಭಾರತೀಯ ರಾಜಕಾರಣಿದಲ್ಲಿ ಯಾರು ಉತ್ತಮ ಚೆಸ್ ಆಟಗಾರ ಯಾರು ಎಂದು ಕೇಳಲಾಗಿತ್ತು. ಅದಕ್ಕೆ ಅವರು ನಾನು ನಾನು ಹಾಸ್ಯವಾಗಿ ತೋರಿಸಲಾಗಿದೆ.

ಪೋಸ್ಟ್​​​ ಬಗ್ಗೆ ಸ್ಪಷ್ಟನೆ ನೀಡಿದ ಗ್ಯಾರಿ ಕಾಸ್ಪರೋವ್

ರಾಹುಲ್​​​ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಗಿ ಎಕ್ಸ್​​ನಲ್ಲಿ ಟ್ವೀಟ್​​​ ಮಾಡಿದ ನಂತರ ಗ್ಯಾರಿ ಕಾಸ್ಪರೋವ್ ಅವರು ತಮ್ಮ ಪೋಸ್ಟ್​​​ಗೆ ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ರಾಜಕೀಯದ ಕುರಿತಾದ ತಮ್ಮ “ಚಿಕ್ಕ ಜೋಕ್” ಇದಾಗಿದ್ದು, ನಾನು ರಾಜಕೀಯ ಪಂಡಿತನಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಹೇಳಿದ ಹೇಳಿಕೆಯನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 

ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು

ರಾಹುಲ್​​ ಗಾಂಧಿ ಅವರು ನೆನ್ನೆ (ಮೇ3) ರಾಯ್ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್​​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಉಪಸ್ಥಿತರಿದರು.

ಇದನ್ನೂ ಓದಿ: ಅಮ್ಮನಿಂದಾಗಿ ನಮ್ಮ ಕುಟುಂಬದ ಕರ್ಮಭೂಮಿಗೆ ಸೇವೆ ಸಲ್ಲಿಸುವ ಪುಣ್ಯ ಸಿಕ್ಕಿದೆ; ರಾಹುಲ್ ಗಾಂಧಿ

2019ರಲ್ಲಿ ಅಮೇಥಿಯಲ್ಲಿ ರಾಹುಲ್​​ ಗಾಂಧಿಯನ್ನು ಸೋಲಿಸಿದ ಸ್ಮೃತಿ ಇರಾನಿ

2004 ರಲ್ಲಿ, ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬಂದರು. ಇಲ್ಲಿ ರಾಹುಲ್​​ ಅವರು 10 ವರ್ಷಗಳ ಕಾಲ ಕಾಂಗ್ರಸ್​​​​ ಅಧಿಕಾರದಲ್ಲಿ ಇದ್ದ ಕಾರಣ ಇಲ್ಲಿ ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಕಳೆದ 10 ವರ್ಷಗಳು ಅವರಿಗೆ ಈ ಕ್ಷೇತ್ರ ತುಂಬಾ ಸವಾಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ನಂತರ 2019ರಲ್ಲಿ ಸ್ಮೃತಿ ಕಾಂಗ್ರೆಸ್​​ನ ಭದ್ರಕೋಟೆಯಲ್ಲಿ 55,000 ಮತಗಳಿಂದ ಗೆಲುವು ಸಾಧಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 am, Sat, 4 May 24