ಭಾರತೀಯ ವಾಯುಪಡೆಗೆ ಬಾಹುಬಲಿ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು, ಸೆಪ್ಟೆಂಬರ್ 10 ರಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದು, ಅವರ ಸಮ್ಮುಖದಲ್ಲಿ ರಫೇಲ್ ಯುದ್ಧ ವಿಮಾನಗಳು ವಾಯುಪಡೆಯಲ್ಲಿ ವಿಲೀನಗೊಳ್ಳಲಿವೆ.
ಜುಲೈ 29 ರಂದು ಭಾರತಕ್ಕೆ ಬಂದಿರುವ ಐದು ರಫೇಲ್ ಜೆಟ್ ವಿಮಾನಗಳ ಈ ಸೇರ್ಪಡೆ ಕಾರ್ಯಕ್ರಮಕ್ಕೆ, ರಫೇಲ್ ಯುದ್ಧ ವಿಮಾನಗಳ ಜನಕ ದೇಶ ಫ್ರಾನ್ಸ್ನ ರಕ್ಷಣಾ ಸಚಿವ ಪ್ಲೋರೆನ್ಸ್ ಪಾರ್ಲೆಗೂ ಆಹ್ವಾನ ನೀಡಲಾಗಿದೆ.