ಮೋದಿ ಸರ್ಕಾರದ ಕೊವಿಡ್​ ಲಸಿಕೆ ನೀತಿ ಭಾರತ ಮಾತೆಯ ಎದೆಗೆ ಚೂರಿ ಹಾಕಿದಂತಿದೆ: ರಾಹುಲ್ ಗಾಂಧಿ

|

Updated on: Jun 01, 2021 | 12:34 AM

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಭಾರತದಲ್ಲಿ ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನು ಮುಂದಿವರೆಸಿದ್ದಾರೆ. ಕೇಂದ್ರ ಸರ್ಕಾರವು ಶೂನ್ಯ ಲಸಿಕಾ ನೀತಿಯನ್ನು ಅನುಸರಿಸುತ್ತಿದ್ದು ಅದು ಭಾರತ ಮಾತೆಯ ಎದೆಗೆ ಚೂರಿ ಇರಿದಂತಾಗುತ್ತಿದೆ ಎಂದು ಅವರು ತಮ್ಮ ಟ್ವೀಟ್​ ಒಂದರಲ್ಲಿ ಹೇಳಿದ್ದಾರೆ. ಕೋವಿಡ್-19 ಭಾರತವನ್ನು ಅಪ್ಪಳಿಸಿದ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಈ ವರ್ಷದ ಮೇ ತಿಂಗಳಿನಲ್ಲಿ ಎರಡಂಕಿ ತಲುಪಿದೆ ಎಂಬ ಮಾಧ್ಯಮದ ವರದಿಗಳನ್ನು […]

ಮೋದಿ ಸರ್ಕಾರದ ಕೊವಿಡ್​ ಲಸಿಕೆ ನೀತಿ ಭಾರತ ಮಾತೆಯ ಎದೆಗೆ ಚೂರಿ ಹಾಕಿದಂತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಭಾರತದಲ್ಲಿ ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನು ಮುಂದಿವರೆಸಿದ್ದಾರೆ. ಕೇಂದ್ರ ಸರ್ಕಾರವು ಶೂನ್ಯ ಲಸಿಕಾ ನೀತಿಯನ್ನು ಅನುಸರಿಸುತ್ತಿದ್ದು ಅದು ಭಾರತ ಮಾತೆಯ ಎದೆಗೆ ಚೂರಿ ಇರಿದಂತಾಗುತ್ತಿದೆ ಎಂದು ಅವರು ತಮ್ಮ ಟ್ವೀಟ್​ ಒಂದರಲ್ಲಿ ಹೇಳಿದ್ದಾರೆ. ಕೋವಿಡ್-19 ಭಾರತವನ್ನು ಅಪ್ಪಳಿಸಿದ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಈ ವರ್ಷದ ಮೇ ತಿಂಗಳಿನಲ್ಲಿ ಎರಡಂಕಿ ತಲುಪಿದೆ ಎಂಬ ಮಾಧ್ಯಮದ ವರದಿಗಳನ್ನು ಉಲ್ಲೇಖಿಸಿರುವ ರಾಹುಲ್ ಅವರು ಆ ವಿಷಯವಾಗಿಯೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.

‘ಮೋದಿ ಸರ್ಕಾರದ ಲಸಿಕೆ-ರಕಿತ ಯೋಜನೆಯು ಭಾರತ ಮಾತೆಯ ಹೃದಯಕ್ಕೆ ನಾಟಿರುವ ಚೂರಿಯಾಗಿದೆ, ಇದು ದುರಂತ ಸತ್ಯ,’ ಎಂದು ರಾಹುಲ್ ಅವರು ಟ್ವೀಟ್​ ಮಾಡಿದ್ದಾರೆ

ಮತ್ತೊಂದು ಟ್ವೀಟ್​ನಲ್ಲಿ ಅವರು, ಕೊವಿಡ್​ ನಂತರ ಶೇಕಡಾ 97ರಷ್ಟು ಜನ ಬಡವರಾಗಿದ್ದಾರೆ ಎಂದು ಹೇಳಿರುವ ವರದಿಯನ್ನು ಉಲ್ಲೇಖಿಸುತ್ತಾ ರಾಹುಲ್, ‘ಒಬ್ಬ ವ್ಯಕ್ತಿ ಮತ್ತು ಆತನ ದುರಹಂಕಾರ + ಒಂದು ವೈರಸ್ ಮತ್ತು ಅದರ ರೂಪಾಂತರಿಗಳು’ ಅಂತ ಟ್ವೀಟ್​ ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕೋವಿಡ್-19 ಪಿಡುಗಿನ ನಿರ್ವಹಣೆ ಹಾಗೂ ಲಸಿಕೆ ನೀತಿಯನ್ನು ರಾಹುಲ್ ಅರಂಭದಿಂದಲೂ ಟೀಕಿಸುತ್ತಾ ಬಂದಿದ್ದಾರೆ
ಇದಕ್ಕೆ ಉತ್ತರವಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಾ ಲಸಿಕೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿ ಜನರಲ್ಲಿ ಭೀತಿ ಮೂಡಿಸುತ್ತಿದೆ ಎಂದು ಆರೋಪಿಸಿದೆ.

ರಾಹುಲ್ ಗಾಂದಿಯವರು ಮೋದಿ ಸರ್ಕಾರವನ್ನು ಟೀಕಿಸುವ ಬದಲು ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳ ಬಗ್ಗೆ ಕಾಳಜಿ ಹೊಂದಿರಬೇಕು ಯಾಕೆಂದರೆ ಆ ರಾಜ್ಯಗಳು ತಮ್ಮ ಕೋಟಾದ ಲಸಿಕೆಗಳನ್ನು ತಯಾರಕರಿಂದ ಖರೀದಿಸಲು ಹೆಣಗಾಡುತ್ತಿವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

ಇದನ್ನೂ ಓದಿ: Rahul Gandhi ಬಹುತೇಕ ಸರ್ವಾಧಿಕಾರಿಗಳ ಹೆಸರು M ನಿಂದಲೇ ಶುರುವಾಗುತ್ತದೆ ಎಂದ ರಾಹುಲ್ ಗಾಂಧಿ; ಟಾರ್ಗೆಟ್ ಮಿಸ್​ ಆಯ್ತಲ್ಲ ಅಂದ್ರು ನೆಟ್ಟಿಗರು!