ನರೇಂದ್ರ ಮೋದಿ ಸರ್ಕಾರದ 7 ವರ್ಷದ ಸಾಧನೆಯನ್ನು ಜನರಿಗೆ ಹೇಳಲು ಆರಂಭವಾಯ್ತು ವಿಕಾಸ ಯಾತ್ರಾ
ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ಮರಾಠಿ, ಮಣಿಪುರಿ, ಗುಜರಾತಿ, ಬಂಗಾಳಿ, ಮಲಯಾಳಂ, ತಮಿಳು, ಅಸ್ಸಾಮೀ, ಒಡಿಶಾ ಭಾಷೆಗಳಲ್ಲಿ ಈ ಮಾಹಿತಿ ಲಭ್ಯವಿದ್ದು ದೇಶದ ಎಲ್ಲಾ ಭಾಗಗಳ ಜನರನ್ನು ತಲುಪಲು ಪ್ರಯತ್ನಿಸಿದೆ.
ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಯ ಎರಡು ವರ್ಷಗಳನ್ನೂ ಸೇರಿ ಒಟ್ಟು ಏಳು ವರ್ಷಗಳ ಅಧಿಕಾರವಧಿ ಪೂರೈಸಿ ಮುನ್ನಡೆಯುತ್ತಿದೆ. ಮೊದಲ ಐದು ವರ್ಷಗಳಿಗಿಂತಲೂ ಎರಡನೇ ಅವಧಿಯಲ್ಲಿ ಸರ್ಕಾರದ ಮುಂದಿರುವ ಸವಾಲುಗಳು ಬೆಟ್ಟದಷ್ಟಾಗಿದ್ದು ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುವಂತಾಗಿದೆ. ಈ ಸಂದರ್ಭದಲ್ಲಿ ಏಳನೇ ವರ್ಷ ಪೂರೈಸುತ್ತಿರುವ ಸರ್ಕಾರ ಜನರನ್ನು ಇಷ್ಟು ಕಾಲ ಹೇಗೆ ತಲುಪಿತು? ಜನರಿಗಾಗಿ ಏನೆಲ್ಲಾ ಕಾರ್ಯ ಕೈಗೊಂಡಿತು? ಎನ್ನುವುದನ್ನು ತಿಳಿಸುವ ಸಲುವಾಗಿ ನರೇಂದ್ರಮೋದಿ.ಇನ್ ವೆಬ್ಸೈಟ್ ಮೂಲಕ ಭಾರತದ ವಿಕಾಸ ಯಾತ್ರಾ ಎನ್ನುವ ಸರಣಿ ಆರಂಭಿಸಲಾಗಿದೆ.
ವಿಕಾಸ ಯಾತ್ರಾ ಪರಿಕಲ್ಪನೆಯಡಿಯಲ್ಲಿ ವಾಣಿಜ್ಯ, ಉದ್ಯಮ, ಆಡಳಿತ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ ಏನೇನು ಬದಲಾವಣೆ ತಂದಿದೆ ಎನ್ನುವುದನ್ನು ಪರಿಚಯಿಸಲಾಗುತ್ತಿದೆ. ಪ್ರಸ್ತುತ ಕೊರೊನಾ ವಿರುದ್ಧ ಹೋರಾಡುತ್ತಿರುವುದನ್ನೂ ಸೇರಿಸಿ ಮುಖಪುಟದಲ್ಲೇ ಸುಮಾರು 15 ವಿವಿಧ ವಿಚಾರಗಳನ್ನು ನೀಡಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೊಳಿಸಲಾದ ಹೊಸ ಯೋಜನೆಗಳ ಬಗ್ಗೆಯೂ ತಿಳಿಸಲಾಗಿದೆ.
ಈ ವಿಚಾರಗಳನ್ನು ನರೇಂದ್ರಮೋದಿ.ಇನ್ ಜಾಲತಾಣ ಹಾಗೂ ನರೇಂದ್ರ ಮೋದಿ ಆ್ಯಪ್ಗಳಲ್ಲಿ ಲಭ್ಯವಾಗುವಂತೆ ರೂಪಿಸಲಾಗಿದ್ದು, ಜನ ಸಾಮಾನ್ಯರು ಅಲ್ಲಿಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಲೇಖನಮಾಲೆ, ವಿಡಿಯೋ, ಗ್ರಾಫಿಕ್ಸ್ ಹಾಗೂ ಮಾಧ್ಯಮಗಳ ವರದಿ ಇವೆಲ್ಲವನ್ನೂ ಒಳಗೊಂಡು ಜನರಿಗೆ ಸರ್ಕಾರದ ಹೆಜ್ಜೆಗಳ ಬಗ್ಗೆ ತಿಳಿಸಲು ಪ್ರಯತ್ನಿಸಲಾಗಿದೆ.
ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ಮರಾಠಿ, ಮಣಿಪುರಿ, ಗುಜರಾತಿ, ಬಂಗಾಳಿ, ಮಲಯಾಳಂ, ತಮಿಳು, ಅಸ್ಸಾಮೀ, ಒಡಿಶಾ ಭಾಷೆಗಳಲ್ಲಿ ಈ ಮಾಹಿತಿ ಲಭ್ಯವಿದ್ದು ದೇಶದ ಎಲ್ಲಾ ಭಾಗಗಳ ಜನರನ್ನು ತಲುಪಲು ಪ್ರಯತ್ನಿಸಿದೆ. ಇನ್ನು ಸರ್ಕಾರದ ಮೊದಲ ಅವಧಿ ಕಾರ್ಯ ವೈಖರಿ ಹಾಗೂ ಎರಡನೇ ಅವಧಿಯ ಕಾರ್ಯ ವೈಖರಿ ಬಗ್ಗೆ ಪ್ರತ್ಯೇಕವಾಗಿ ನೀಡಲಾಗಿದ್ದು, ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆಯೂ ಕೇಳಬಹುದಾಗಿದೆ.
(Narendra Modi Government celebrating 7th year of power with 7 years of seva agenda and several programs)
ಇದನ್ನೂ ಓದಿ: ಮೋದಿ ಸರ್ಕಾರದ ಕೊವಿಡ್ ಲಸಿಕೆ ನೀತಿ ಭಾರತ ಮಾತೆಯ ಎದೆಗೆ ಚೂರಿ ಹಾಕಿದಂತಿದೆ: ರಾಹುಲ್ ಗಾಂಧಿ
ಮೋದಿ ಸರ್ಕಾರದ ಕೊವಿಡ್ ಲಸಿಕೆ ನೀತಿ ಭಾರತ ಮಾತೆಯ ಎದೆಗೆ ಚೂರಿ ಹಾಕಿದಂತಿದೆ: ರಾಹುಲ್ ಗಾಂಧಿ