ಹರೀಶ್ ರಾವತ್ ಭೇಟಿಯಾದ ರಾಹುಲ್ ಗಾಂಧಿ; ಉತ್ತರಾಖಂಡ್ ಚುನಾವಣಾ ಪ್ರಚಾರಕ್ಕೆ ರಾವತ್ ನೇತೃತ್ವ

ಹರೀಶ್ ರಾವತ್ ಭೇಟಿಯಾದ ರಾಹುಲ್ ಗಾಂಧಿ; ಉತ್ತರಾಖಂಡ್ ಚುನಾವಣಾ ಪ್ರಚಾರಕ್ಕೆ ರಾವತ್ ನೇತೃತ್ವ
ಹರೀಶ್ ರಾವತ್

ಮುಖ್ಯಮಂತ್ರಿ ಆಯ್ಕೆಯನ್ನು ಕಾಂಗ್ರೆಸ್ ಶಾಸಕಾಂಗ ಮಂಡಳಿ ನಿರ್ಧರಿಸಲಿದೆ ಎಂದು ಹರೀಶ್ ರಾವತ್ ಹೇಳಿದ್ದಾರೆ.ಹರೀಶ್ ರಾವತ್ ಅವರು ಉತ್ತರಾಖಂಡ ಚುನಾವಣೆಗೆ ಪಕ್ಷದ ಮುಖವಾಗಿದ್ದಾರೆ ಮತ್ತು ಅವರಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಪಡೆಯುತ್ತಾರೆ

TV9kannada Web Team

| Edited By: Rashmi Kallakatta

Dec 24, 2021 | 4:10 PM

ದೆಹಲಿ:  ತಮ್ಮ “ಕೈಗಳನ್ನು ಕಟ್ಟಲಾಗಿದೆ” ನಾನು ವಿಶ್ರಾಂತಿ ಪಡೆಯಲು ಬಯಸುತ್ತಿದ್ದೇನೆ ಚುನಾವಣೆಗೆ ಮುನ್ನ ಉತ್ತರಾಖಂಡದ ಕಾಂಗ್ರೆಸ್ ನಾಯಕ ಹರೀಶ್ ರಾವತ್ (Harish Rawat)  ಟ್ವೀಟ್‌ ಮಾಡಿದ್ದು ಈ ಹಿನ್ನೆಲೆಯಲ್ಲಿ  ಶುಕ್ರವಾರ  ರಾಹುಲ್ ಗಾಂಧಿ (Rahul Gandhi) ದೆಹಲಿಯಲ್ಲಿ ರಾವತ್ ಅವರನ್ನು ಭೇಟಿಯಾದರು. ಹರೀಶ್ ರಾವತ್ ಅವರು ಉತ್ತರಾಖಂಡದಲ್ಲಿ(Uttarakhand) ಕಾಂಗ್ರೆಸ್ ಪ್ರಚಾರಕ್ಕೆ ನೇತೃತ್ವ ನೀಡಲಿದ್ದಾರೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಮುಂದಿನ ವರ್ಷದ ಆರಂಭದಲ್ಲಿ ಉತ್ತರಾಖಂಡ್ ಚುನಾವಣೆಯ ನಂತರ ಶಾಸಕರು ಆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಪಕ್ಷ  ಹೇಳಿದೆ.ಇದರರ್ಥ ರಾವತ್ ಉತ್ತರಾಖಂಡದ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ, “ಈಗ, ಇದನ್ನು ತಿರುಚಬೇಡಿ” ಎಂದು ಹೇಳಿದರು. ಮುಖ್ಯಮಂತ್ರಿ ಆಯ್ಕೆಯನ್ನು ಕಾಂಗ್ರೆಸ್ ಶಾಸಕಾಂಗ ಮಂಡಳಿ ನಿರ್ಧರಿಸಲಿದೆ ಎಂದು ಹರೀಶ್ ರಾವತ್ ಹೇಳಿದ್ದಾರೆ.ಹರೀಶ್ ರಾವತ್ ಅವರು ಉತ್ತರಾಖಂಡ ಚುನಾವಣೆಗೆ ಪಕ್ಷದ ಮುಖವಾಗಿದ್ದಾರೆ ಮತ್ತು ಅವರಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಪಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕತ್ವವು ಭರವಸೆ ನೀಡಲು ಬಯಸಿದೆ ಎಂದು ಮೂಲಗಳು ಸಭೆಯಲ್ಲಿ ತಿಳಿಸಿವೆ.  73ರ ಹರೆಯದ ರಾವತ್ ಬುಧವಾರ ಟ್ವೀಟ್ ಮಾಡಿ ಪಕ್ಷದಲ್ಲಿನ ಅಸಾಮಾಧಾನವನ್ನು ತೋರಿಸಿದ್ದರು. ಅವರು ಯಾರನ್ನೂ ಹೆಸರಿಸಲಿಲ್ಲ ಆದರೆ ಅವರ ವಾಗ್ದಾಳಿಯು ಗಾಂಧಿಯನ್ನು ಗುರಿಯಾಗಿರಿಸಿಕೊಂಡಿದೆ ಎಂಬ ಸಣ್ಣ ಅನುಮಾನವನ್ನು ಬಿಟ್ಟರು.

“ನಾವು ಈ ಚುನಾವಣೆಯ ಸಮುದ್ರದಲ್ಲಿ ಈಜಬೇಕು, ಆದರೆ ನನ್ನನ್ನು ಬೆಂಬಲಿಸುವ ಬದಲು, ಸಂಘಟನೆಯು ನನಗೆ ಬೆನ್ನು ತಿರುಗಿಸಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ” ಎಂದು ರಾವತ್ ಟ್ವೀಟ್ ಮಾಡಿದ್ದರು. ನಿನ್ನೆ ಟ್ವೀಟ್‌ಗಳಿಗೆ ಸ್ಪಷ್ಟನೆ ನೀಡುವ ಬದಲು ಶೀಘ್ರದಲ್ಲೇ ಈ ಬಗ್ಗೆ ತಿಳಿಸುವುದಾಗಿಯೂ ಏನಾದರೂ ಇದ್ದರೆ ನಾನೇ ನಿಮಗೆ ಮೊದಲು ತಿಳಿಸುತ್ತೇನೆ ಎಂದು ಸುದ್ದಿಗಾರರಿಗೆ ಹೇಳಿದರು.

ಯಾರ ಆದೇಶದ ಮೇರೆಗೆ ನಾನು ಈಜಬೇಕೋ ಆ ಪ್ರತಿನಿಧಿಗಳು ನನ್ನ ಕೈ-ಕಾಲುಗಳನ್ನು ಕಟ್ಟುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ನಾನು ಸಾಕಷ್ಟು ಈಜಿದ್ದೇನೆ ಮತ್ತು ಇದು ವಿಶ್ರಾಂತಿ ಸಮಯ ಎಂದು ನನ್ನ ಮನಸ್ಸಿಗೆ ಅನಿಸಿತ್ತದೆ. ಆಗ ಇನ್ನೊಂದು ಧ್ವನಿ ಏಳುತ್ತದೆ,  ನೀನು ಎಂದಿಗೂ ಅಸಹಾಯಕನಾಗಿರಬೇಡ ಮತ್ತು ಓಡಿಹೋಗಬೇಡ ಎಂದು ಕೇಳುತ್ತದೆ. ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಹೊಸ ವರ್ಷ ನನ್ನ ದಾರಿಯನ್ನು ತೋರಿಸಲಿ. ಭಗವಾನ್ ಕೇದಾರನಾಥ ನನಗೆ ದಾರಿ ತೋರಿಸುತ್ತಾನೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಪೋಸ್ಟ್ ಮಾಡಿದ ನಿಮಿಷಗಳ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್ (73) ಅವರು ಪೋಸ್ಟ್‌ನಲ್ಲಿ ಹೇಳಿದ ಎಲ್ಲದರ ಬಗ್ಗೆ ನಂತರ ಮಾತನಾಡುವುದಾಗಿ ಹೇಳಿದರು. “ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಮತ್ತು ನಿರುದ್ಯೋಗಿಗಳು ಹೇಗೆ ನೋವಿನಲ್ಲಿದ್ದಾರೆ ಎಂಬುದರ ಕುರಿತು ಇಂದು ಪತ್ರಿಕಾಗೋಷ್ಠಿ ನಡೆದಿತ್ತು. ಇದಾದ ನಂತರ ನಾನು ಟ್ವೀಟ್‌ಗಳಲ್ಲಿ ಹೇಳಿರುವ ವಿಷಯಗಳ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ರಾವತ್ ಹೇಳಿದ್ದಾರೆ.

ಕದಮ್ ಕದಮ್ ಬಡಾಯೇ ಜಾ, ಕಾಂಗ್ರೆಸ್ ಕೇ ಗೀತ್ ಗಾಯೇ ಜಾ, ಜಿಂದಗೀ ಹೈ ಉತ್ತರಾಖಂಡ್ ಕೇ ಉತ್ತರಾಖಂಡ್ ಕೇ ವಾಸ್ತೇ ಉತ್ತರಾಖಂಡ್ ಪರ್ ಲುಟಾಯೇ ಜಾ (ಹೆಜ್ಜೆ ಮುಂದಕ್ಕಿಡಿ ಕಾಂಗ್ರೆಸ್ ಎಂದು ಎಂದು ಹಳೇ ಹಿಂದಿ ಹಾಡೊಂದರ ಸಾಲನ್ನು ಬದಲಾಯಿಸಿ ಬರೆದಿದ್ದಾರೆ) ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

2019 ರ ರಾಷ್ಟ್ರೀಯ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಹರೀಶ್ ರಾವತ್ ಕಾಂಗ್ರೆಸ್ ಅಸ್ಸಾಂ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚಿನವರೆಗೂ, ಅವರು ಪಕ್ಷದ ಪಂಜಾಬ್ ಉಸ್ತುವಾರಿಯೂ ಆಗಿದ್ದರು, ರಾಜ್ಯದಲ್ಲಿ ತೀವ್ರ ಆಂತರಿಕ ಕಲಹವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು.

ಇದನ್ನೂ  ಓದಿ:  ನನ್ನ ಕೈ ಬಂಧಿಯಾಗಿದೆ ಎಂದು ಸರಣಿ ಟ್ವೀಟ್; ಪಕ್ಷದಲ್ಲಿ ಏನಾಗಿದೆ ಎಂದು ಕೇಳಿದ್ದಕ್ಕೆ ಮಜಾ ಮಾಡಿ ಎಂದು ಪ್ರತಿಕ್ರಿಯಿಸಿದ ಹರೀಶ್ ರಾವತ್

ಇದನ್ನೂ ಓದಿ:  ಕೈ ಬಂಧಿಯಾಗಿದೆ, ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ ಎಂದ ಹರೀಶ್ ರಾವತ್; ಉತ್ತರಾಖಂಡ ಕಾಂಗ್ರೆಸ್​​ನಲ್ಲಿ ಎದುರಾಯಿತೇ ಸಂಕಷ್ಟ?

Follow us on

Related Stories

Most Read Stories

Click on your DTH Provider to Add TV9 Kannada