AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯುವ ಕೆಲವೇ ಗಂಟೆಗಳ ಮೊದಲು ಅಳಬೇಡ ಎಂದಿದ್ದರು ನನ್ನಜ್ಜಿ: ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ

ಅಜ್ಜಿಯ ಅಂತ್ಯಕ್ರಿಯೆ ನಡೆದ ದಿನವು ನನ್ನ ಜೀವನದ 2ನೇ ಅತ್ಯಂತ ಕಠಿಣ ದಿನ ಅದಾಗಿತ್ತು ಎಂದು ಹೇಳಿದರು.

ಸಾಯುವ ಕೆಲವೇ ಗಂಟೆಗಳ ಮೊದಲು ಅಳಬೇಡ ಎಂದಿದ್ದರು ನನ್ನಜ್ಜಿ: ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ
ಇಂದಿರಾ ಗಾಂಧಿ ಪಾರ್ಥಿವ ಶರೀರದೊಂದಿಗೆ ರಾಹುಲ್ ಗಾಂಧಿ (ಎಡಚಿತ್ರ)
TV9 Web
| Edited By: |

Updated on:Oct 31, 2021 | 9:57 PM

Share

ದೆಹಲಿ: ಇಂದಿರಾ ಗಾಂಧಿ ಹತ್ಯೆ ಮತ್ತು ಅಂತ್ಯಕ್ರಿಯೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಒಂದು ವೇಳೆ ನನಗೇನಾದರೂ ಆದರೆ ಅಳಬಾರದು ಎಂದು ಅಜ್ಜಿ ತಾನು ಸಾಯುವ ಕೆಲವೇ ಗಂಟೆಗಳ ಮೊದಲು ಹೇಳಿದ್ದರು’ ಎಂದು ನೆನಪಿಸಿಕೊಂಡರು. ಇಂದಿರಾ ಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ ಯುಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, ಅಜ್ಜಿಯ ಅಂತ್ಯಕ್ರಿಯೆ ನಡೆದ ದಿನವು ನನ್ನ ಜೀವನದ 2ನೇ ಅತ್ಯಂತ ಕಠಿಣ ದಿನ ಅದಾಗಿತ್ತು ಎಂದು ಹೇಳಿದರು.

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 1984ರಲ್ಲಿ ಅವರ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ‘ನನಗೆ ಏನಾದರೂ ಆದರೆ ನೀನು ಅಳಬಾರದು ಎಂದು ಹೇಳಿದ ಎರಡು-ಮೂರು ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದರು. ನನಗೆ ಅವರು ಹಾಗೆ ಏಕೆ ಹೇಳಿದರು ಎನ್ನುವುದು ಈವರೆಗೆ ಅರ್ಥವಾಗಲಿಲ್ಲ. ತಮಗೆ ಹಾಗೂ ತಮ್ಮ ಕುಟುಂಬ ಆ ದಿನ ಅನುಭವಿಸಿದ ಸಂಕಟದ ಕ್ಷಣಗಳ ಬಗ್ಗೆ ಅವರು ಬೇಸರ ತೋಡಿಕೊಂಡರು.

‘ತನ್ನನ್ನು ಕೊಲ್ಲಲಾಗುವುದು ಎಂಬ ಅನುಮಾನ ಅವರಿಗೆ (ಇಂದಿರಾ ಗಾಂಧಿ) ಬಂದಿತ್ತು. ಮನೆಯಲ್ಲಿದ್ದ ಎಲ್ಲರಿಗೂ ಈ ವಿಷಯ ಗೊತ್ತಿತ್ತು. ರೋಗ ಬಂದು ಸಾಯುವುದು ಕೆಟ್ಟ ಶಾಪ ಎಂದು ಊಟ ಮಾಡುವಾಗ ಒಮ್ಮೆ ಹೇಳಿದ್ದರು. ‘With love, in memory of my beloved Grandmother, Indira ji’ (ನನ್ನ ಪ್ರೀತಿಯ ಅಜ್ಜಿಯ ನೆನಪಿನೊಂದಿಗೆ) ಎಂಬ ಹೆಸರಿನ ವಿಡಿಯೊದಲ್ಲಿ ರಾಹುಲ್ ಗಾಂಧಿ ಮನದ ಮಾತು ಹಂಚಿಕೊಂಡಿದ್ದಾರೆ.

ತಾನು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಮತ್ತು ತನ್ನ ದೇಶಕ್ಕಾಗಿ ಸಾಯುವುದು ಒಳ್ಳೆಯದು ಎಂಬುದು ಅವರ (ಇಂದಿರಾ ಗಾಂಧಿ) ಉದ್ದೇಶವಾಗಿತ್ತು. ನನಗೆ ಇಬ್ಬರು ಅಮ್ಮಂದಿರಿದ್ದರು. ನನ್ನ ಅಜ್ಜಿ ನನ್ನ ಪಾಲಿನ ಸೂಪರ್​ ಅಮ್ಮ ಆಗಿದ್ದರು. ಅಪ್ಪ ಸಿಟ್ಟು ಮಾಡಿಕೊಂಡಾಗ ನನ್ನ ಪರ ಮಾತನಾಡುತ್ತಿದ್ದರು. ಅಜ್ಜಿ ಸತ್ತ ದಿನ ನನಗೆ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗಿತ್ತು ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಅಂತಿಮಯಾತ್ರೆ ಮತ್ತು ಅಂತ್ಯಕ್ರಿಯೆಯ ದೃಶ್ಯಾವಳಿಗಳೂ ಈ ವಿಡಿಯೊದಲ್ಲಿವೆ. ಬಾಲಕ ರಾಹುಲ್ ಅಜ್ಜಿಯ ಸಾವಿನ ದಿನ ಶೋಕ ವ್ಯಕ್ತಪಡಿಸಿದ ದೃಶ್ಯವೂ ವಿಡಿಯೊದಲ್ಲಿದೆ. ಭಾನುವಾರ ಮುಂಜಾನೆ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು.

ಕೊನೆಯ ಕ್ಷಣದವರೆಗೂ ನನ್ನ ಅಜ್ಜಿಗೆ ದೇಶದ ಹಿತವೇ ಮುಖ್ಯವಾಗಿತ್ತು. ಆಕೆಯ ಬದುಕು ನಮಗೆ ಸ್ಫೂರ್ತಿ ಎಂದು ರಾಹುಲ್ ಗಾಂಧಿ ಹಿಂದಿ ಟ್ವೀಟ್​ನಲ್ಲಿ ಹೇಳಿದ್ದರು. ಮಹಿಳಾ ಶಕ್ತಿಯ ಅತ್ಯುತ್ತಮ ಉದಾಹರಣೆ. ಇಂದಿರಾ ಗಾಂಧಿ ಹುತಾತ್ಮರಾದ ದಿನದಂದು ಅವರಿಗೆ ನನ್ನ ನಮನಗಳು ಎಂದು ಹೇಳಿದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬೆನ್ನಲ್ಲೇ ಗೋವಾಕ್ಕೆ ತೆರಳಿದ ರಾಹುಲ್ ಗಾಂಧಿ; ಇಂದು ಮೀನುಗಾರರೊಂದಿಗೆ ಮಾತುಕತೆ ಇದನ್ನೂ ಓದಿ: RIP Puneeth Rajkumar: ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರ ಸಂತಾಪ

Published On - 9:57 pm, Sun, 31 October 21

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ