AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಮ್‌ನ ಪ್ರಖ್ಯಾತ ಟ್ರೆವಿ ಫೌಂಟೇನ್‌ಗೆ ನಾಣ್ಯ ಎಸೆದ ಪ್ರಧಾನಿ ಮೋದಿ ಮತ್ತು ಇತರ G20 ನಾಯಕರು

Trevi Fountain ಟ್ರೆವಿ ಫೌಂಟೇನ್‌ 26.3 ಮೀಟರ್ ಎತ್ತರ ಮತ್ತು 49.15 ಮೀಟರ್ ಅಗಲವಿದೆ. ಇದು ನಗರದ ಅತಿದೊಡ್ಡ ಬರೊಕ್ ಕಾರಂಜಿ ಮತ್ತು ವಿಶ್ವದ ಅತ್ಯಂತ ಪ್ರಸಿದ್ಧ ಕಾರಂಜಿಗಳಲ್ಲಿ ಒಂದಾಗಿದೆ

ರೋಮ್‌ನ ಪ್ರಖ್ಯಾತ ಟ್ರೆವಿ ಫೌಂಟೇನ್‌ಗೆ ನಾಣ್ಯ ಎಸೆದ ಪ್ರಧಾನಿ ಮೋದಿ ಮತ್ತು ಇತರ G20 ನಾಯಕರು
ಟ್ರೆವಿ ಫೌಂಟೇನ್‌ಗೆ ನಾಣ್ಯ ಎಸೆಯುತ್ತಿರುವ ಜಿ20 ನಾಯಕರು
TV9 Web
| Edited By: |

Updated on: Oct 31, 2021 | 8:05 PM

Share

ರೋಮ್: ಜಿ20 ಶೃಂಗಸಭೆಯ (G20 summit) ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತರ ವಿಶ್ವ ನಾಯಕರೊಂದಿಗೆ ಇಲ್ಲಿನ ಪ್ರಸಿದ್ಧ ಟ್ರೆವಿ ಫೌಂಟೇನ್‌ಗೆ (Trevi Fountain)  ಭಾನುವಾರ ಭೇಟಿ ನೀಡಿದರು.  ಈ ಕಾರಂಜಿ ಇಟಲಿಯ ಪ್ರಖ್ಯಾತ ಸ್ಮಾರಕಗಳಲ್ಲಿ ಒಂದಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ಐತಿಹಾಸಿಕ ಕಾರಂಜಿಯು ಬರೋಕ್ ಕಲಾ ಶೈಲಿಯ ಸ್ಮಾರಕವಾಗಿದ್ದು ಇಲ್ಲಿ ಹಲವಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ.  “ಜಿ20 ನಿಯೋಗದ ಮುಖ್ಯಸ್ಥರು ಜಿ20  ರೋಮ್ ಶೃಂಗಸಭೆಯ (G20RomeSummit) 2 ನೇ ದಿನ ನಗರದ ಟ್ರೆವಿ ಫೌಂಟೇನ್ ನೋಡಲು ಹೋಗಿದ್ದಾರೆ. ವಿಶ್ವದ ಅತ್ಯಂತ ಸುಂದರವಾದ ಕಾರಂಜಿಗಳಲ್ಲಿ ಒಂದಾದ ಇಲ್ಲಿ ನಾಣ್ಯ ಎಸೆಯುವುದು ಸಂಪ್ರದಾಯ ಎಂದು ಜಿ20 ಇಟಲಿ ಟ್ವೀಟ್ ಮಾಡಿದೆ. ಟ್ರೆವಿ ಫೌಂಟೇನ್‌ 26.3 ಮೀಟರ್ ಎತ್ತರ ಮತ್ತು 49.15 ಮೀಟರ್ ಅಗಲವಿದೆ. ಇದು ನಗರದ ಅತಿದೊಡ್ಡ ಬರೊಕ್ ಕಾರಂಜಿ ಮತ್ತು ವಿಶ್ವದ ಅತ್ಯಂತ ಪ್ರಸಿದ್ಧ ಕಾರಂಜಿಗಳಲ್ಲಿ ಒಂದಾಗಿದೆ.  ಜಿ 20 ಇಟಲಿ ಬಿಡುಗಡೆ ಮಾಡಿದ ವಿಡಿಯೊ ಪ್ರಕಾರ ನಿಯೋಗವು ತಮ್ಮ ಭುಜದ ಮೇಲಿಂದ ನಾಣ್ಯವನ್ನು ಕಾರಂಜಿಯಲ್ಲಿ ಎಸೆದಿರುವುದು ಕಾಣುತ್ತದೆ. ನಿಮ್ಮ ಭುಜದ ಮೇಲೆ ನಾಣ್ಯವನ್ನು ಕಾರಂಜಿ ನೀರಿನಲ್ಲಿ ಎಸೆದರೆ, ರೋಮ್​​ಗೆ ಹಿಂತಿರುಗುವುದು ಖಚಿತ ಎಂಬುದು ನಂಬಿಕೆ.

ಪ್ರಸಿದ್ಧ ಕಾರಂಜಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಅವರು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಸಸ್ಟೈನಬಲ್ ಡೆವಲಪ್‌ಮೆಂಟ್ ಕುರಿತು ಅಧಿವೇಶನ ಮತ್ತು ”ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ” ಕುರಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಕ್ಟೋಬರ್ 30-31 ರಿಂದ ರೋಮ್‌ನಲ್ಲಿ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಿಂದ ಇಟಲಿ G20 ಅಧ್ಯಕ್ಷ ಸ್ಥಾನವನ್ನು ಹೊಂದಿದೆ.  ಜಿ20 ಪ್ರಮುಖ ಜಾಗತಿಕ ವೇದಿಕೆಯಾಗಿದ್ದು ಅದು ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುತ್ತದೆ. ಇದರ ಸದಸ್ಯರು ಜಾಗತಿಕ ಜಿಡಿಪಿಯ ಶೇ 80 ಹೆಚ್ಚು, ಜಾಗತಿಕ ವ್ಯಾಪಾರದ ಶೇ 75 ಮತ್ತು ಗ್ರಹದ ಜನಸಂಖ್ಯೆಯ ಶೇ 60ವನ್ನು ಹೊಂದಿದ್ದಾರೆ.

ಈ ವೇದಿಕೆಯು 1999 ರಿಂದ ಪ್ರತಿ ವರ್ಷ ಸಭೆ ಸೇರಿದೆ ಮತ್ತು 2008 ರಿಂದ, ಆಯಾ ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರ ಭಾಗವಹಿಸುವಿಕೆಯೊಂದಿಗೆ ವಾರ್ಷಿಕ ಶೃಂಗಸಭೆಯನ್ನು ಒಳಗೊಂಡಿದೆ. ರೋಮ್ ಶೃಂಗಸಭೆಯಲ್ಲಿ G20 ಸದಸ್ಯ ರಾಷ್ಟ್ರಗಳು, ಯುರೋಪಿಯನ್ ಒಕ್ಕೂಟ ಮತ್ತು ಇತರ ಆಹ್ವಾನಿತ ದೇಶಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಭಾಗವಹಿಸುತ್ತಾರೆ.

ಶೃಂಗಸಭೆಯು “ಜನರು, ಗ್ರಹ, ಸಮೃದ್ಧಿ, ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವ ಮತ್ತು ಜಾಗತಿಕ ಆರೋಗ್ಯ ಆಡಳಿತವನ್ನು ಬಲಪಡಿಸುವ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ವಿಷಯದ ಸುತ್ತ ಕೇಂದ್ರೀಕೃತವಾಗಿರುತ್ತದೆ. ರೋಮ್‌ನಿಂದ, ಪ್ರಧಾನಿ ಮೋದಿ ಭಾನುವಾರ ಗ್ಲಾಸ್ಗೋಗೆ ಪ್ರಯಾಣಿಸಲಿದ್ದು, 26 ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP-26) ವಿಶ್ವ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCCC) ಗೆ ತೆರಳಲಿದ್ದಾರೆ.

ಇದನ್ನೂ ಓದಿ:  ರೋಮ್​​ನಲ್ಲಿ ಜಿ20 ನಾಯಕರ ಸಮಾಗಮ; ಶೃಂಗಸಭೆಯ ಪ್ರಾರಂಭದ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​