ರೋಮ್ನಲ್ಲಿ ಜಿ20 ನಾಯಕರ ಸಮಾಗಮ; ಶೃಂಗಸಭೆಯ ಪ್ರಾರಂಭದ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ
G20 Summit: ನರೇಂದ್ರ ಮೋದಿಯವರು ಭಾಗವಹಿಸುತ್ತಿರುವ ಎಂಟನೇ ಜಿ 20 ಶೃಂಗಸಭೆ ಇದಾಗಿದ್ದು, ಶುಕ್ರವಾರ ಬೆಳಗ್ಗೆ ಇಟಲಿ ತಲುಪಿದ್ದಾರೆ. ನಿನ್ನೆ ರೋಮ್ನಲ್ಲಿ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದ ನಂತರ ರೋಮಾ ಕನ್ವೆನ್ಷನ್ ಸೆಂಟರ್ಗೆ ತೆರಳಿದ್ದು, ಅಲ್ಲೀಗ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯ ಎಂಬ ವಿಷಯದ ಕುರಿತು ನಡೆಯಲಿರುವ ಜಿ 20 ಶೃಂಗಸಭೆ (G 20 Summit) ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಮಾ ಕನ್ವೆನ್ಷನ್ ಸೆಂಟರ್ ತಲುಪಿದ ಪ್ರಧಾನಿ ಮೋದಿಯವರನ್ನು ಇಟಲಿ ಪ್ರಧಾನಮಂತ್ರಿ ಮಾರಿಯೋ ಡ್ರಾಗಿ ಬರಮಾಡಿಕೊಂಡರು. ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇದೇ ಮೊದಲ ಬಾರಿಗೆ ಜಿ 20 ಜಾಗತಿಕ ನಾಯಕರು ಭೇಟಿಯಾಗುತ್ತಿದ್ದಾರೆ. ಇಂದಿನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್ 19 ಸಾಂಕ್ರಾಮಿಕದಿಂದ ಆರೋಗ್ಯದಲ್ಲಿ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಇಂದು ನಾಯಕರು ವ್ಯಾಪಕವಾಗಿ ಚರ್ಚಿಸಲಿದ್ದಾರೆ.
ಇನ್ನು ಪ್ರಧಾನಿ ಕಚೇರಿ ಜಿ20 ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಜಾಗತಿಕ ಒಳಿತಿಗಾಗಿ ಇರುವ ಅತಿಮುಖ್ಯವಾದ ವೇದಿಕೆಯಾದ ಜಿ20 ಸಂಘಟನೆಯ ನಾಯಕರು ಇಂದು ರೋಮ್ನಲ್ಲಿ ಭೇಟಿಯಾದರು ಎಂದು ಹೇಳಿದೆ. ಈ ಫೋಟೋದಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಯುಎಸ್ ಅಧ್ಯಕ್ಷ ಜೋ ಬೈಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪಿಎಂ ಬೋರಿಸ್ ಜಾನ್ಸನ್ ಇತರ ಪ್ರಮುಖ ನಾಯಕರು ಇದ್ದಾರೆ.
World leaders meet in Rome for the @g20org Summit, an important multilateral forum for global good. pic.twitter.com/lzSte0d8Ey
— PMO India (@PMOIndia) October 30, 2021
ನರೇಂದ್ರ ಮೋದಿಯವರು ಭಾಗವಹಿಸುತ್ತಿರುವ ಎಂಟನೇ ಜಿ 20 ಶೃಂಗಸಭೆ ಇದಾಗಿದ್ದು, ಶುಕ್ರವಾರ ಬೆಳಗ್ಗೆ ಇಟಲಿ ತಲುಪಿದ್ದಾರೆ. ನಿನ್ನೆ ರೋಮ್ನಲ್ಲಿ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿರುವ ಅವರು, ಇಂದು ವ್ಯಾಟಿಕನ್ ನಗರಕ್ಕೆ ತೆರಳಿ ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪೋಪ್ರನ್ನು ಭೇಟಿಯಾಗಿರುವ ಅವರು ಸುಮಾರು ಒಂದು ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ ಕೊರೊನಾ ವಿರುದ್ಧ ಹೋರಾಡಿದ ರೀತಿಯನ್ನು ಪೋಪ್ ಫ್ರಾನ್ಸಿಸ್ ಶ್ಲಾಘಿಸಿದ್ದಾರೆ ಎಂದು ಹೇಳಲಾಗಿದೆ.
#WATCH | G20 Summit: PM Narendra Modi had a brief interaction with French President Emmanuel Macron before ‘family photo’ at Roma Convention Center in Rome, Italy pic.twitter.com/HY3pGyiu4c
— ANI (@ANI) October 30, 2021
ಇದನ್ನೂ ಓದಿ: ಬಾಂಗ್ಲಾದೇಶದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ; ಚಿನ್ನಾಭರಣ, ಹಣ ದೋಚಿ ಪರಾರಿ
ಬಿಎಸ್ಪಿಯಿಂದ ಅಮಾನತಾಗಿದ್ದ 6 ರೆಬೆಲ್ ಶಾಸಕರು, ಓರ್ವ ಬಿಜೆಪಿ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
Published On - 5:20 pm, Sat, 30 October 21