ಟೋಕಿಯೊ ರೈಲಿನಲ್ಲಿ ಜೋಕರ್ ವೇಷಧಾರಿ ವ್ಯಕ್ತಿಯಿಂದ ದಾಳಿ; 17 ಮಂದಿಗೆ ಗಾಯ

ಟ್ವಿಟರ್​​ನಲ್ಲಿನ ಮತ್ತೊಂದು ವಿಡಿಯೊ ಜೋಕರ್ ಧರಿಸಿರುವಂತೆ ನೇರಳೆ ಬಣ್ಣದ ಸೂಟ್ ಮತ್ತು ಪ್ರಕಾಶಮಾನವಾದ ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ತೋರಿಸಿದೆ. ಖಾಲಿ ರೈಲಿನಲ್ಲಿ ಕುಳಿತು ಸಿಗರೇಟಿನ ಸೇದುತ್ತಾ ,ಕಾಲ ಮೇಲೆ ಕಾಲು ಹಾಕಿ ಶಾಂತವಾಗಿ ಕುಳಿತಿರುವ ವ್ಯಕ್ತಿಯನ್ನು ಆನಂತರ ಪೊಲೀಸರು ಸುತ್ತುವರೆದಿದ್ದಾರೆ.

ಟೋಕಿಯೊ ರೈಲಿನಲ್ಲಿ ಜೋಕರ್ ವೇಷಧಾರಿ ವ್ಯಕ್ತಿಯಿಂದ ದಾಳಿ;  17 ಮಂದಿಗೆ ಗಾಯ
ರೈಲಿನಿಂದ ಹೊರಬರುತ್ತಿರುವ ಪ್ರಯಾಣಿಕರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 01, 2021 | 12:08 PM

ಟೋಕಿಯೊ: ಬ್ಯಾಟ್‌ಮ್ಯಾನ್‌ನ ಜೋಕರ್ ವೇಷ ಧರಿಸಿದ್ದ 24 ವರ್ಷದ ವ್ಯಕ್ತಿ ಭಾನುವಾರ ಸಂಜೆ ಟೋಕಿಯೊ ರೈಲು ಪ್ರಯಾಣದ ವೇಳೆ ಪ್ರಯಾಣಿಕರ ಮೇಲೆ ದಾಳಿ ಮಾಡಿದ್ದಾನೆ. ಹ್ಯಾಲೋವೀನ್ ಕೂಟಗಳಿಗಾಗಿ ಸಿಟಿ ಸೆಂಟರ್‌ಗೆ ಹೋಗುತ್ತಿದ್ದಾಗ 17 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಪೊಲೀಸರು ಶಂಕಿತ ದಾಳಿಕೋರನನ್ನು ಸ್ಥಳದಲ್ಲೇ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಕೋರ 60 ರ ಆಸುಪಾಸಿನ ವ್ಯಕ್ತಿಯೊಬ್ಬರಿಗೆ ಇರಿದಿದ್ದು ಆ ವ್ಯಕ್ತಿ ಪ್ರಜ್ಞಾಹೀನರಾಗಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ. ದಾಳಿಕೋರನು ರೈಲಿನ ಸುತ್ತಲೂ ದ್ರವವನ್ನು ಹರಡಿ ಬೆಂಕಿ ಹಚ್ಚಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಒಂದು ವಿಡಿಯೊದಲ್ಲಿ ಜನರು ರೈಲಿನಿಂದ ಓಡಿಹೋಗುತ್ತಿರುವ ದೃಶ್ಯವಿದೆ. ಅದಾದ ನಂತರ ಬೆಂಕಿ ಹೊತ್ತಿಕೊಂಡಿರುವುದು ಕಾಣುತ್ತದೆ. ಮತ್ತೊಂದು ವಿಡಿಯೊದಲ್ಲಿ ರೈಲು ತುರ್ತು ನಿಲುಗಡೆ ಮಾಡಿದ ನಂತರ ಪ್ರಯಾಣಿಕರು ರೈಲಿನ ಕಿಟಕಿಗಳಿಂದ ಪ್ಲಾಟ್‌ಫಾರ್ಮ್‌ಗೆ ಬರಲು ಪ್ರಯತ್ನಿಸುತ್ತಿರುವುದು ಕಾಣುತ್ತದೆ.

“ಇದು ಹ್ಯಾಲೋವೀನ್ ಸ್ಟಂಟ್ ಎಂದು ನಾನು ಭಾವಿಸಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಯೋಮಿಯುರಿ ಪತ್ರಿಕೆಗೆ ವರದಿ ಮಾಡಿದೆ. ಇತರ ಪ್ರಯಾಣಿಕರು ತನ್ನ ರೈಲು ಕಾರಿನ ಕಡೆಗೆ ಭಯಭೀತರಾಗಿ ಓಡುತ್ತಿರುವುದನ್ನು ನೋಡಿದ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. “ನಂತರ, ಒಬ್ಬ ವ್ಯಕ್ತಿಯು ಈ ದಾರಿಯಲ್ಲಿ ನಡೆದುಕೊಂಡು ಹೋಗುವುದನ್ನು ನಾನು ನೋಡಿದೆ, ನಿಧಾನವಾಗಿ ಉದ್ದವಾದ ಚಾಕುವನ್ನು ಬೀಸುತ್ತಿದ್ದು ಚಾಕುವಿನ ಮೇಲೆ ರಕ್ತವಿದೆ ಎಂದು ಅವರು ಹೇಳಿದರು.

ಟ್ವಿಟರ್​ನಲ್ಲಿನ ಮತ್ತೊಂದು ವಿಡಿಯೊ ಜೋಕರ್ ಧರಿಸಿರುವಂತೆ ನೇರಳೆ ಬಣ್ಣದ ಸೂಟ್ ಮತ್ತು ಪ್ರಕಾಶಮಾನವಾದ ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ತೋರಿಸಿದೆ. ಖಾಲಿ ರೈಲಿನಲ್ಲಿ ಕುಳಿತು ಸಿಗರೇಟಿನ ಸೇದುತ್ತಾ ,ಕಾಲ ಮೇಲೆ ಕಾಲು ಹಾಕಿ ಶಾಂತವಾಗಿ ಕುಳಿತಿರುವ ವ್ಯಕ್ತಿಯನ್ನು ಆನಂತರ ಪೊಲೀಸರು ಸುತ್ತುವರೆದಿದ್ದಾರೆ.

“ಜನರನ್ನು ಕೊಲ್ಲಲು ಬಯಸಿದ್ದೇನೆ ಆದ್ದರಿಂದ ನನಗೆ ಮರಣದಂಡನೆ ಸಿಗಬಹುದು” ದಾಳಿಕೋರ ಅಧಿಕಾರಿಗಳಿಗೆ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ . ವಿಶ್ವದ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾದ ಶಿಂಜುಕುಗೆ ಹೋಗುವ ಕೀಯೊ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ರಾತ್ರಿ 8 ಗಂಟೆಗೆ (1100 GMT) ದಾಳಿ ಸಂಭವಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ.

ಇದನ್ನೂ ಓದಿ: ಯುಕೆ ತಲುಪಿದ ಪ್ರಧಾನಿ ಮೋದಿ; ಕೋಪ್​ 26 ಶೃಂಗಸಭೆಯಲ್ಲಿ ಭಾಗಿ, ಬ್ರಿಟನ್​ ಪ್ರಧಾನಿಯೊಟ್ಟಿಗೆ ದ್ವಿಪಕ್ಷೀಯ ಮಾತುಕತೆ