COP26 Summit: ಸರ್ವೇ ಜನಾಃ ಸುಖಿನೋ ಭವಂತು ಎಂದ ಭಾರತದ ಪ್ರತಿನಿಧಿಯಾಗಿ ಇಲ್ಲಿದ್ದೇನೆ: ಪ್ರಧಾನಿ ಮೋದಿ ಭಾಷಣ

COP26 Summit: ಹವಾಮಾನ ಬದಲಾವಣೆಯಿಂದ ಕೃಷಿ ವಲಯಕ್ಕೆ ಹಾನಿ ಆಗಿದೆ. ಪರಿಸರಕ್ಕೆ ಪೂರಕವಾಗಿರುವ ನಿಯಮ ಜಾರಿಗೆ ತರಬೇಕು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರೋಮ್​ನಲ್ಲಿ ನಡೆದ ಸಮ್ಮೇಳನದಲ್ಲಿ ಮೋದಿ ಭಾಷಣ ಮಾಡಿದ್ದಾರೆ.

COP26 Summit: ಸರ್ವೇ ಜನಾಃ ಸುಖಿನೋ ಭವಂತು ಎಂದ ಭಾರತದ ಪ್ರತಿನಿಧಿಯಾಗಿ ಇಲ್ಲಿದ್ದೇನೆ: ಪ್ರಧಾನಿ ಮೋದಿ ಭಾಷಣ
ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on: Nov 01, 2021 | 10:48 PM

ಗ್ಲಾಸ್ಗೊ: ಜಾಗತಿಕ ಹವಾಮಾನ ಬದಲಾವಣೆ ಕುರಿತು ಮೋದಿ ಭಾಷಣ ಮಾಡಿದ್ದಾರೆ. ಶಾಲೆಗಳಲ್ಲಿ ಪರಿಸರದ ಬಗ್ಗೆ ಕಡ್ಡಾಯವಾಗಿ ಬೋಧಿಸಬೇಕು. ಪಠ್ಯದಲ್ಲಿ ಪರಿಸರ ವಿಷಯ ಕಡ್ಡಾಯವಾಗಿ ಸೇರಿಸಬೇಕು. ಭಾರತದಲ್ಲಿ ‘ನಲ್ ಸೇ ಜಲ್’, ಕ್ಲೀನ್ ಇಂಡಿಯಾ ಮಿಷನ್, ಉಜ್ವಲದಂತಹ ಯೋಜನೆಗಳು ಜನರಿಗೆ ಪ್ರಯೋಜನವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋಪ್ 26 ಸಮ್ಮೇಳನದಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಈ ಯೋಜನೆಗಳು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಿವೆ. ಪರಿಸರ ಅಧ್ಯಯನದ ಬಗ್ಗೆ ನಾವು ಹೆಚ್ಚು ಒತ್ತು ನೀಡಬೇಕು. ಹವಾಮಾನ ಬದಲಾವಣೆಯಿಂದ ಕೃಷಿ ವಲಯಕ್ಕೆ ಹಾನಿ ಆಗಿದೆ. ಪರಿಸರಕ್ಕೆ ಪೂರಕವಾಗಿರುವ ನಿಯಮ ಜಾರಿಗೆ ತರಬೇಕು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಾಗತಿಕ ಹವಾಮಾನ ಬದಲಾವಣೆ ಕುರಿತಾಗಿ ಶೃಂಗಸಭೆಯಲ್ಲಿ ಮೋದಿ ಭಾಷಣ ಮಾಡಿದ್ದಾರೆ.

ಜಾಗತಿಕ ಹವಾಮಾನ ಬದಲಾವಣೆ ಕುರಿತು ಮೋದಿ ಭಾಷಣ ಮಾಡಿದ್ದಾರೆ. ಭಾರತ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ದೇಶವಾಗಿದೆ. ಭಾರತ ಈಗಾಗಲೇ ಅದರ ಫಲಿತಾಂಶವನ್ನು ತೋರುತ್ತಿದೆ. ಪ್ಯಾರಿಸ್ ಶೃಂಗಸಭೆ ನನಗೆ ಒಂದು ಶೃಂಗಸಭೆಯಲ್ಲ. ಈ ಶೃಂಗಸಭೆ ನನಗೆ ಒಂದು ಭಾವನೆ ಹಾಗೂ ಬದ್ಧತೆ. ಭಾರತವು ಜಗತ್ತಿಗೆ ಭರವಸೆಗಳನ್ನು ನೀಡುತ್ತಿಲ್ಲ, ಬದಲಿಗೆ ಕೋಟ್ಯಂತರ ಜನರನ್ನು ಬಡತನದಿಂದ ಹೊರತರುವ ಕೆಲಸ ಮಾಡುತ್ತಿದೆ. ಬಡತನದಿಂದ ಹೊರತರುವ ಕೆಲಸವನ್ನು ಭಾರತ ಮಾಡ್ತಿದೆ ಎಂದು ಹೇಳಿದ್ದಾರೆ.

ಹವಾಮಾನ ಶೃಂಗಸಭೆಗೆ ಮೊದಲು ಪ್ಯಾರಿಸ್‌ಗೆ ಬಂದಿದ್ದೇನೆ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಂದೇಶ ನೀಡಿದ ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಮಾನವೀಯತೆ ಕಾಳಜಿಯಿಂದ ನಾನು ಇಲ್ಲಿಗೆ ಬಂದಿದ್ದೇನೆ. ಹವಾಮಾನ ಬದಲಾವಣೆ ಬಗ್ಗೆ 5 ಅಮೃತ ತತ್ವ ಪ್ರಸ್ತುತಪಡಿಸ್ತೇನೆ. ಭಾರತದಿಂದ ನಾನು 5 ‘ಅಮೃತ ತತ್ವ’ವನ್ನು ಪ್ರಸ್ತುತಪಡಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಯುಕೆ ತಲುಪಿದ ಪ್ರಧಾನಿ ಮೋದಿ; ಕೋಪ್​ 26 ಶೃಂಗಸಭೆಯಲ್ಲಿ ಭಾಗಿ, ಬ್ರಿಟನ್​ ಪ್ರಧಾನಿಯೊಟ್ಟಿಗೆ ದ್ವಿಪಕ್ಷೀಯ ಮಾತುಕತೆ

ಇದನ್ನೂ ಓದಿ: ರೋಮ್‌ನ ಪ್ರಖ್ಯಾತ ಟ್ರೆವಿ ಫೌಂಟೇನ್‌ಗೆ ನಾಣ್ಯ ಎಸೆದ ಪ್ರಧಾನಿ ಮೋದಿ ಮತ್ತು ಇತರ G20 ನಾಯಕರು

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್