Kabul Hospital Blast: ಕಾಬೂಲ್ನ ಮಿಲಿಟರಿ ಆಸ್ಪತ್ರೆ ಬಳಿ ಭಾರೀ ಸ್ಫೋಟ; 19 ಜನ ಸಾವು, 50 ಮಂದಿಗೆ ಗಾಯ
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದ್ದು, 19 ಜನ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಅಫ್ಘಾನ್ನ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ ಬಳಿ ಎರಡು ಸ್ಫೋಟಗಳು ಸಂಭವಿಸಿದೆ. ಈ ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದ ಬೆನ್ನಲ್ಲೇ ಗುಂಡಿನ ದಾಳಿಯೂ ನಡೆದಿದೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ತಾಲಿಬಾನ್ ಸರ್ಕಾರದ ವಕ್ತಾರ ಖಾರಿ ಸಯೀದ್ ಖೋಸ್ಟಿ ನೀಡಿರುವ ಮಾಹಿತಿ ಪ್ರಕಾರ, ಅಫ್ಘಾನಿಸ್ತಾನದ ಅತಿ ದೊಡ್ಡ ಆಸ್ಪತ್ರೆಯಾದ 400 ಬೆಡ್ಗಳ ವ್ಯವಸ್ಥೆಯಿರುವ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಆಸ್ಪತ್ರೆಯ ಪ್ರವೇಶದ್ವಾರದ ಬಳಿ ಒಂದು ಸ್ಫೋಟ ಸಂಭವಿಸಿದೆ. ಈ ಭಾಗದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
At least 15 killed and 34 wounded in #Kabul hospital blast. #ISIS #Afganisthan #COP26 pic.twitter.com/dgt5kX2SnR
— Khudro Manush (@KhudroManush) November 2, 2021
ಭಾರೀ ಸ್ಫೋಟದಿಂದ ಅಫ್ಘಾನ್ ಮಿಲಿಟರಿ ಆಸ್ಪತ್ರೆ ಸುತ್ತಲೂ ದಟ್ಟ ಹೊಗೆ ತುಂಬಿಕೊಂಡಿದೆ. ಈ ಸ್ಫೋಟಗಳ ಹೊಣೆಯನ್ನು ಯಾವುದೇ ಸಂಘಟನೆಗಳೂ ಹೊತ್ತುಕೊಂಡಿಲ್ಲ. ಈ ದಾಳಿಯ ಉದ್ದೇಶ ಮತ್ತು ಕೈವಾಡದ ಬಗ್ಗೆ ತನಿಖೆಯ ಬಳಿಕಷ್ಟೇ ತಿಳಿಯಲಿದೆ. ಈ ಸ್ಫೋಟದ ಬೆನ್ನಲ್ಲೇ ಗುಂಡಿನ ದಾಳಿಯೂ ನಡೆದಿದೆ. ಎರಡನೇ ಸ್ಫೋಟವೂ ಇದೇ ಆಸ್ಪತ್ರೆಯ ಸಮೀಪ ಸಂಭವಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಉಗ್ರರ ಪಾಲಿನ ಸ್ವರ್ಗವಾಗದಿರಲಿ; ತಾಲಿಬಾನ್ಗೆ ಭಾರತ, ಅಮೆರಿಕ ಒತ್ತಾಯ
ಶ್ರೀರಾಮ ಜನ್ಮಭೂಮಿಗಾಗಿ ಕಾಬೂಲ್ ನದಿ ನೀರು ಕಳಿಸಿದ ಅಫ್ಘಾನ್ ಹುಡುಗಿ; ಸಿಎಂ ಯೋಗಿಯಿಂದ ಜಲಾಭಿಷೇಕ
Published On - 4:32 pm, Tue, 2 November 21