ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಏಕೆ ಕಳಿಸಿದ್ರಿ? -ಮೋದಿಗೆ ಮತ್ತೆ ಅದೇ ಪ್ರಶ್ನೆ ಕೇಳಿದ ರಾಹುಲ್​

| Updated By:

Updated on: Jun 26, 2020 | 6:15 PM

ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್​​ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್​​ ಗಾಂಧಿ ಪ್ರಶ್ನಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ […]

ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಏಕೆ ಕಳಿಸಿದ್ರಿ? -ಮೋದಿಗೆ ಮತ್ತೆ ಅದೇ ಪ್ರಶ್ನೆ ಕೇಳಿದ ರಾಹುಲ್​
Follow us on

ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್​​ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್​​ ಗಾಂಧಿ ಪ್ರಶ್ನಿಸಿದ್ದಾರೆ.

ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ ನೀವು ಮಾತನಾಡಬೇಕು. ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ನಮ್ಮ ಸೈನಿಕರನ್ನ ಏಕೆ ಕಳಿಸಿದ್ರಿ? ಯಾರು ಕಳುಹಿಸಿದರು? ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

Published On - 6:02 pm, Fri, 26 June 20