ದೆಹಲಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ರಾಹುಲ್ ಗಾಂಧಿ ದಿಢೀರ್ ಭೇಟಿ, ಇದು ಘನತೆಗೆ ಮೀರಿದ್ದು ಎಂದು ವಿವಿ ನೋಟಿಸ್
Rahul Gandhi:ರಾಹುಲ್ ಗಾಂಧಿ ಅವರ ಹಾಸ್ಟೆಲ್‌ನ ಮಾಹಿತಿ ಮತ್ತು ನಿಯಮಗಳ ಹ್ಯಾಂಡ್‌ಬುಕ್‌ನ ನಿಯಮ 15.13 ಅನ್ನು ಉಲ್ಲೇಖಿಸಿದ್ದಾರೆ.ಯಾವುದೇ ವ್ಯಕ್ತಿಗಳು ಹಾಸ್ಟೆಲ್ ಆವರಣದಲ್ಲಿ ಶೈಕ್ಷಣಿಕ ಮತ್ತು ಅಲ್ಲಿನ ವಿದ್ಯಾರ್ಥಿಗಳ ಕೌನ್ಸಿಲ್ ಚಟುವಟಿಕೆಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು.
ದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ (Delhi University )ಪಿಜಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕಳೆದ ವಾರ ದಿಢೀರ್ ಭೇಟಿ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಪ್ರಾಂಶುಪಾಲರು ಬುಧವಾರ ನೋಟಿಸ್ ಕಳುಹಿಸದ್ದಾರೆ. ಝಡ್ ಪ್ಲಸ್ ಭದ್ರತೆ ( Z-plus security) ಹೊಂದಿರುವಂಥಾ ರಾಷ್ಟ್ರೀಯ ನಾಯಕರ ಈ ನಡೆ ಘನತೆಗೆ ಮೀರಿದ್ದು ಎಂದು ಅವರು ಹೇಳದ್ದಾರೆ. ಪ್ರಾಂಶುಪಾಲ ಕೆಪಿ ಸಿಂಗ್ ಅವರು ರಾಹುಲ್ ಗಾಂಧಿಗೆ ಕಳುಹಿಸಿರುವ ಎರಡು ಪುಟಗಳ ಟಿಪ್ಪಣಿಯಲ್ಲಿ, ಈ ಘಟನೆಯು ಅತಿಕ್ರಮಣ ಮತ್ತು ಬೇಜವಾಬ್ದಾರಿ ವರ್ತನೆಗೆ ಸಮಾನವಾಗಿದೆ. ಭವಿಷ್ಯದಲ್ಲಿ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದೆ. ಮೂರು ವಾಹನಗಳೊಂದಿಗೆ ಆವರಣಕ್ಕೆ ಬಂದಿದ್ದ ಗಾಂಧಿಯವರ ಅನಿರೀಕ್ಷಿತ ಪ್ರವೇಶ ಹಾಸ್ಟೆಲ್‌ನ ನಿಗದಿತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮುಖ್ಯಸ್ಥರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಹಾಸ್ಟೆಲ್‌ನ ಮಾಹಿತಿ ಮತ್ತು ನಿಯಮಗಳ ಹ್ಯಾಂಡ್‌ಬುಕ್‌ನ ನಿಯಮ 15.13 ಅನ್ನು ಉಲ್ಲೇಖಿಸಿದ್ದಾರೆ.ಯಾವುದೇ ವ್ಯಕ್ತಿಗಳು ಹಾಸ್ಟೆಲ್ ಆವರಣದಲ್ಲಿ ಶೈಕ್ಷಣಿಕ ಮತ್ತು ಅಲ್ಲಿನ ವಿದ್ಯಾರ್ಥಿಗಳ ಕೌನ್ಸಿಲ್ ಚಟುವಟಿಕೆಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು.
ಶುಕ್ರವಾರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ ಗಾಂಧಿ, ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರೊಂದಿಗೆ ಊಟ ಮಾಡಿದ್ದರು.
Rahul Gandhi Ji visited the hostels of Delhi University, North Campus. He interacted with students, and listened to their problems.
ABVP students wanted to talk to him, he went to their hostel and listened to their queries. ❤️
Full interaction will be out soon on his YouTube… pic.twitter.com/y0pNFQLz6c
— Shantanu (@shaandelhite) May 5, 2023
06.05.2023 ರಂದು ದೆಹಲಿ ವಿಶ್ವವಿದ್ಯಾಲಯದ ಡೀನ್ ಅವರ ಉಪಸ್ಥಿತಿಯಲ್ಲಿ ನಡೆದ ತನ್ನ ಸಭೆಯಲ್ಲಿ ಝಡ್ ಪ್ಲಸ್ ಭದ್ರತೆ ಹೊಂದಿರುವ ರಾಷ್ಟ್ರೀಯ ಪಕ್ಷದ ನಾಯಕರ ಈ ನಡವಳಿಗೆ ಘನತೆಗೆ ಮೀರಿದ್ದು ಎಂಬುದನ್ನು ಹಾಸ್ಟೆಲ್‌ನ ನಿರ್ವಹಣಾ ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಹಾಸ್ಟೆಲ್ ಅನ್ನು ದೆಹಲಿ ವಿಶ್ವವಿದ್ಯಾನಿಲಯ ಕಾಯಿದೆ, 1922 ಮತ್ತು ಅದರ ಕಾನೂನುಗಳು, ಸುಗ್ರೀವಾಜ್ಞೆಗಳು, ನಿಯಮಗಳು ಮತ್ತು ಅದರ ಸ್ವಂತ ರೂಲ್ಸ್ ಆಫ್ ರೆಸಿಡೆನ್ಸ್,, ಡೈನಿಂಗ್ ಹಾಲ್ ನಿಯಮ ‘ಅತಿಥಿಗಳ’ ಸುಗಮ ಕಾರ್ಯನಿರ್ವಹಣೆ ಮತ್ತು ಕಲ್ಯಾಣಕ್ಕಾಗಿ ಇರುವುದಾಗಿದೆ. ಅಲ್ಲಿ ವಾಸಿಸುವ ವಿದ್ಯಾರ್ಥಿಗಳು ಇದನ್ನು ಪಾಲಿಸಬೇಕ ಎಂದು ಹೇಳಲಾಗಿದೆ.
“ಹಾಸ್ಟೆಲ್‌ನ ಆಡಳಿತವು ನಿಗದಿತ ನಿಯಮಗಳಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯನ್ನು ನಿಲ್ಲಿಸುವ ಹಕ್ಕನ್ನು ಹೊಂದಿದೆ ಎಂದು ನಮೂದಿಸಬೇಕಾಗಿಲ್ಲ. ಹಾಸ್ಟೆಲ್‌ನಲ್ಲಿ ಸರಿಯಾದ ಶಿಸ್ತಿನ ನಿರ್ವಹಣೆಯ ಪ್ರಮುಖ ಭಾಗವಾಗಿ, ಇದನ್ನು ಹಾಸ್ಟೆಲ್‌ನ ಮಾಹಿತಿ ಮತ್ತು ನಿಯಮಗಳ ಕೈಪಿಡಿ ನಿಯಮ 15.13 ರಲ್ಲಿ ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಹಾಸ್ಟೆಲ್‌ನ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಇತರ ಸದಸ್ಯರು ಈ ಘಟನೆಯನ್ನು ಅತಿಕ್ರಮಣ ಮತ್ತು ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಅಂತಹ ಘಟನೆಯು ಆ ಸಮಯದಲ್ಲಿ ಹಾಸ್ಟೆಲ್‌ನಲ್ಲಿದ್ದ ಎಲ್ಲಾ ವ್ಯಕ್ತಿಗಳನ್ನು ಗಂಭೀರ ಮತ್ತು ದೈಹಿಕ ಹಾನಿ ಮತ್ತು ಸುರಕ್ಷತೆಯ ಅಪಾಯಕ್ಕೆ ಸಿಲುಕಿಸಿತು. ನೀವು ಭವಿಷ್ಯದಲ್ಲಿ ಅಂತಹ ಯಾವುದೇ ಅಹಿತಕರ ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ತಡೆಯಬೇಕು ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಗಾಂಧಿಯವರ ಭೇಟಿಯ ಒಂದು ದಿನದ ನಂತರ, ದಿಲ್ಲಿ ವಿಶ್ವವಿದ್ಯಾನಿಲಯವು ಹಠಾತ್ ಮತ್ತು ಅನಧಿಕೃತ ಪ್ರವೇಶವು ಹಾಸ್ಟೆಲ್ ನಿವಾಸಿಗದಳ ಮತ್ತು ನಾಯಕನಿಗೆ ಗಂಭೀರವಾದ ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ ಎಂದು ತೀಕ್ಷ್ಣವಾದ ಹೇಳಿಕೆಯನ್ನು ನೀಡಿತು.
ಇದನ್ನೂ ಓದಿ: ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಮತ್ತೆ ಸರ್ಕಾರ ಪುನರ್ರಚಿಸಲು ಸಾಧ್ಯವಿಲ್ಲ, ರಾಜ್ಯಪಾಲರ ಕ್ರಮದ ಬಗ್ಗೆ ಸುಪ್ರೀಂ ಗರಂ
ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಅತಿಕ್ರಮಣದ ಇಂತಹ ಘಟನೆಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಭವಿಷ್ಯದಲ್ಲಿ ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತಾರೆ ಎಂದು ಅದು ಹೇಳಿದೆ. ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತದ ಮೇಲೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮಂಗಳವಾರ ಆರೋಪಿಸಿದೆ.
ಆರೋಪವನ್ನು ತಳ್ಳಿಹಾಕಿದ ರಿಜಿಸ್ಟ್ರಾರ್, ‘ಅಂತಹ ಯಾವುದೇ ಒತ್ತಡವಿಲ್ಲ, ಇದು ಶಿಸ್ತಿನ ವಿಷಯ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Thu, 11 May 23