Rahul Gandhi: ಸತ್ಯ, ಸಾಹಸ, ಬಲಿದಾನ ಇದುವೆ ಗಾಂಧಿ ಕುಟುಂಬದ ಪರಂಪರೆ: ರಾಹುಲ್ ಗಾಂಧಿ ಇನ್​ಸ್ಟಾಗ್ರಾಂ ಪೋಸ್ಟ್​

|

Updated on: Mar 27, 2023 | 10:13 AM

ಸತ್ಯ, ಸಾಹಸ, ಬಲಿದಾನ ಇದುವೆ ಗಾಂಧಿ ಕುಟುಂಬದ ಪರಂಪರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್​ಸ್ಟಾ ಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Rahul Gandhi: ಸತ್ಯ, ಸಾಹಸ, ಬಲಿದಾನ ಇದುವೆ ಗಾಂಧಿ ಕುಟುಂಬದ ಪರಂಪರೆ: ರಾಹುಲ್ ಗಾಂಧಿ ಇನ್​ಸ್ಟಾಗ್ರಾಂ ಪೋಸ್ಟ್​
ರಾಹುಲ್ ಗಾಂಧಿ
Image Credit source: Hindustan Times
Follow us on

ಸತ್ಯ, ಸಾಹಸ, ಬಲಿದಾನ ಇದುವೆ ಗಾಂಧಿ ಕುಟುಂಬದ ಪರಂಪರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್​ಸ್ಟಾ ಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮೋದಿ ಉಪನಾಮದ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ್ದು, 2 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ 30 ದಿನಗಳ ಜಾಮೀನಿನ ಮೇಲೆ ರಾಹುಲ್ ಹೊರಗಿದ್ದಾರೆ. ಹಾಗೆಯೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ರಾಜೀವ್​ಗಾಂಧಿಯವರ ಪಾರ್ಥಿವ ಶರೀರವನ್ನು ಹೊತ್ತ ರಾಹುಲ್ ಗಾಂಧಿಯ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಸತ್ಯ, ಧೈರ್ಯ ಮತ್ತು ತ್ಯಾಗ ಇದು ನಮ್ಮ ಪರಂಪರೆ ಮತ್ತು ಶಕ್ತಿಯೂ ಹೌದು ಎಂದಿದ್ದಾರೆ.

ರಾಜೀವ್ ಗಾಂಧಿ ಅಂತ್ಯಕ್ರಿಯೆ ವೇಳೆ 10 ಮೈಲುಗಳ ದೂರದವರೆಗೂ ಲಕ್ಷಾಂತರ ಮಂದಿ ಸೇರಿದ್ದರು. ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿ ಗೌರವ ಸೂಚಿಸಲಾಗಿತ್ತು. ಈಗ ಹುತಾತ್ಮನ ಮಗನನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ, ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ ಮೀರ್​ ಜಾಫರ್ ಎಂದು ಕರೆಯಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಮತ್ತಷ್ಟು ಓದಿ: Priyanka Gandhi Vadra: ಹುತಾತ್ಮನ ಮಗನನ್ನು ಮೀರ್ ಜಾಫರ್ ಎಂದು ಕರೆದರು, ಆಗ ಯಾಕೆ ಪ್ರಕರಣ ದಾಖಲಾಗಲಿಲ್ಲ: ಪ್ರಿಯಾಂಕಾ ವಾಗ್ದಾಳಿ

ರಾಜಕೀಯ ಏನೇ ಇರಲಿ ಆದರೆ ನಮಗೆಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ ಮತ್ತು ರಾಹುಲ್ ಗಾಂಧಿ ಈಗ ಅನುಭವಿಸುತ್ತಿರುವ ಇದಕ್ಕೆ ಯಾರೂ ಅರ್ಹರಲ್ಲ. ಇದು ಪ್ರಜಾಪ್ರಭುತ್ವದ ಅಂತ್ಯ ಎಂದು ಕಮೆಂಟ್ ಮಾಡಿದ್ದಾರೆ.

Rahul Gandhi’s New Istagram Post: Truth, courage and sacrifice this is our heritage, and this is also our strength

ಏತನ್ಮಧ್ಯೆ, ಕಾಂಗ್ರೆಸ್‌ನ ಸತ್ಯಾಗ್ರಹ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಜಿಲ್ಲೆಗಳ ವಿವಿಧ ರಾಜ್ಯಗಳ ಕೇಂದ್ರ ಕಚೇರಿಗಳಲ್ಲಿ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ