AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Gandhi Vadra: ಹುತಾತ್ಮನ ಮಗನನ್ನು ಮೀರ್ ಜಾಫರ್ ಎಂದು ಕರೆದರು, ಆಗ ಯಾಕೆ ಪ್ರಕರಣ ದಾಖಲಾಗಲಿಲ್ಲ: ಪ್ರಿಯಾಂಕಾ ವಾಗ್ದಾಳಿ

ಹುತಾತ್ಮನ ಮಗನನ್ನು ಮೀರ್ ಜಾಫರ್ ಎಂದು ಕರೆದರು, ಆಗ ಯಾಕೆ ಪ್ರಕರಣ ದಾಖಲಾಗಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Priyanka Gandhi Vadra: ಹುತಾತ್ಮನ ಮಗನನ್ನು ಮೀರ್ ಜಾಫರ್ ಎಂದು ಕರೆದರು, ಆಗ ಯಾಕೆ ಪ್ರಕರಣ ದಾಖಲಾಗಲಿಲ್ಲ: ಪ್ರಿಯಾಂಕಾ ವಾಗ್ದಾಳಿ
ಪ್ರಿಯಾಂಕಾ ಗಾಂಧಿ
ನಯನಾ ರಾಜೀವ್
|

Updated on: Mar 26, 2023 | 3:32 PM

Share

ಹುತಾತ್ಮನ ಮಗನನ್ನು ಮೀರ್ ಜಾಫರ್ ಎಂದು ಕರೆದರು, ಆಗ ಯಾಕೆ ಪ್ರಕರಣ ದಾಖಲಾಗಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್​ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ರಾಜ್​ಘಾಟ್​ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿಯನ್ನು ಹುತಾತ್ಮನ ಮಗ ಎಂದು ಸಂಬೋಧಿಸಿರುವ ಪ್ರಿಯಾಂಕಾ ಗಾಂಧಿ, ಬಿಜೆಪಿ ಪ್ರತಿ ದಿನ ಅವರನ್ನು ಅವಮಾನಿಸುತ್ತಿದೆ. “ನನ್ನ ಸಹೋದರನನ್ನು ದೇಶದ್ರೋಹಿ ಮತ್ತು ಮೀರ್ ಜಾಫರ್ ಎಂದು ಕರೆದವರು, ರಾಹುಲ್ ಗಾಂಧಿಗೆ ಅವರ ತಾಯಿ ಯಾರೆಂದು ಗೊತ್ತಿಲ್ಲ ಎಂದವರು, ಆರಾಮವಾಗಿ ಓಡಾಡಿಕೊಂಡಿದ್ದಾರೆ.

ಈ ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕುಟುಂಬವನ್ನು ಅವಮಾನಿಸುವ ಬಿಜೆಪಿ ನಾಯಕರಿಗೆ ಶಿಕ್ಷೆ ಏಕೆ ಆಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಖಾರವಾಗಿ ಪ್ರಶ್ನಿಸಿದರು. ನಿಮ್ಮ ಪ್ರಧಾನಿ ಸಂಸತ್ತಿನಲ್ಲಿ ಈ ಕುಟುಂಬ ನೆಹರೂ ಹೆಸರನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಈ ಮೂಲಕ ಅವರು ಇಡೀ ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾರೆ.

ಮತ್ತಷ್ಟು ಓದಿ: Rahul Gandhi Twitter Bio: ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಟ್ವಿಟ್ಟರ್ ಬಯೋ ಬದಲಾಯಿಸಿದ ರಾಹುಲ್ ಗಾಂಧಿ

ಆದರೆ ಅವರಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ. ಅದರೆ ಈ ದೇಶದ ಸಂಪತ್ತನ್ನು ಲೂಟಿ ಮಾಡಿ ಪರಾರಿಯಾಗಿರುವವರ ಉಪನಾಮ ಉಲ್ಲೇಖಸಿದ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವನ್ನು ಕಿತ್ತುಕೊಳ್ಳಲಾಗುತ್ತದೆ, ಎಂದು ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಉನ್ನತ ನಾಯಕರಾದ ಪಿ ಚಿದಂಬರಂ, ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಪ್ರಮೋದ್ ತಿವಾರಿ, ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ಅಧೀರ್ ರಂಜನ್ ಚೌಧರಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿ ಪೊಲೀಸರು ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್​  ಕಲ್ಪಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ