Manipur Violence: ಮಣಿಪುರದ ಹಿಂಸಾಚಾರ ಸ್ಥಳಕ್ಕೆ ರಾಹುಲ್​​ ಭೇಟಿ, ಬೆಂಗಾವಲು ಪಡೆ ವಾಹನ ತಡೆದ ಪೊಲೀಸರು

|

Updated on: Jun 29, 2023 | 2:18 PM

ಮಣಿಪುರದ ಹಿಂಸಾಚಾರ ಸ್ಥಳಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಭೇಟಿ ನೀಡಿದ್ದು ಅವರ ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದಿದ್ದಾರೆ.

Manipur Violence: ಮಣಿಪುರದ ಹಿಂಸಾಚಾರ ಸ್ಥಳಕ್ಕೆ ರಾಹುಲ್​​ ಭೇಟಿ, ಬೆಂಗಾವಲು ಪಡೆ ವಾಹನ ತಡೆದ ಪೊಲೀಸರು
ರಾಹುಲ್ ಗಾಂಧಿ
Follow us on

ಇಂಫಾಲ್: ಮಣಿಪುರದ ಹಿಂಸಾಚಾರ (Manipur Violence) ಸ್ಥಳಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ (Rahul Gandhi) ಭೇಟಿ ನೀಡಿದ್ದು, ಅವರ ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರಕ್ಕೆ ಹೋಗುವ ಮಾರ್ಗದಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ಪೊಲೀಸರು ತಡೆದಿದ್ದಾರೆ. ರಾಹುಲ್​​ ಗಾಂಧಿ ಅವರು ಇಂದು (ಜೂನ್.29) ಬೆಳಿಗ್ಗೆ ಇಂಫಾಲ್‌ಗೆ ಬಂದಿಳಿದಿದ್ದು ಅಲ್ಲಿಂದ ನಂತರ ಚುರಾಚಂದ್‌ಪುರಕ್ಕೆ ತೆರಳಿದ್ದಾರೆ, ಅಲ್ಲಿ ಅವರು ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದು, ಅವರ ಜತೆಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಈ ಹಿಂಸಾಚಾರ ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿದೆ, ಮಣಿಪುರದಲ್ಲಿ ಇರುವುದು ಬಿಜೆಪಿ ಸರ್ಕಾರ, ಶಾಂತಿ ಸುವವ್ಯಸ್ಥೆಗಳನ್ನು ಕಾಪಾಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಬಿಜೆಪಿ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಇಲ್ಲಿಗೆ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಶಾಂತಿ ಕಾಪಾಡುವಂತೆ ಮತ್ತು ಹಿಂಸಾಚಾರದ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದ್ದಾರೆ.

ಇನ್ನು ಮಣಿಪುರ ಹಿಂಸಾಚಾರದ ಬಗ್ಗೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ತುಟ್ಟಿ ಬಿಚ್ಚಿದ್ದಾರೆ. ಅನೇಕ ಪಕ್ಷ ನಾಯಕ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು. ಇದೀಗ ಈ ಸಮಯದಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಭೇಟಿ ನೀಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Manipur Violence: ಮಣಿಪುರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಪೊಲೀಸರು

ಮೇ ತಿಂಗಳಲ್ಲಿ ಜನಾಂಗೀಯ ಕಲಹ ಪ್ರಾರಂಭವಾದಾಗಿನಿಂದ ಸುಮಾರು 50,000 ಜನರು 300 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ. ಮಣಿಪುರದಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪೂರೈಸುವಂತೆ ಪ್ರತಿಭಟಿನೆ ನಡೆಸಿತ್ತು, ಆದರೆ ಇದೆ ಸಮಯದಲ್ಲಿ ಮೇ 3ರಂದು ಕುಕಿ ಸಮುದಾಯ ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಲಾಗಿತ್ತು. ನಂತರ ಎರಡು ಪಂಗಡಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಮಣಿಪುರದಲ್ಲಿ ಕುಕಿ ಗ್ರಾಮಸ್ಥರನ್ನು ಮೀಸಲು ಅರಣ್ಯ ಭೂಮಿಯಿಂದ ಹೊರ ಹಾಕುವಂತೆ ಒಂದು ದೊಡ್ಡ ಆಂದೋಲನ ನಡೆದಿತ್ತು. ಇದು ಉದ್ವಿಗ್ನತೆಯನ್ನು ಸೃಷ್ಟಿಸಿ, ಹಿಂಸಾಚಾರಕ್ಕೆ ಕಾರಣವಾಗಿದೆ. ರಾಜ್ಯದ ರಾಜಧಾನಿ ಇಂಫಾಲ್ ಕಣಿವೆಯಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಮೈಟೀಸ್ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ