ರಾತ್ರಿ ಹೊತ್ತು ಭಯೋತ್ಪಾದನೆ, ಹಗಲು ವ್ಯಾಪಾರ: ಪಾಕಿಸ್ತಾನ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಾಗ್ದಾಳಿ
ಇಂದು ಸಾರ್ಕ್ ಸಭೆ ನಡೆಸುವುದಕ್ಕೆ ಅಡ್ಡಿಯಾಗಿರುವುದೇ ಅದು. ಭಯೋತ್ಪಾದನಾ ಕೃತ್ಯಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ ಎಂದು ನಿಮಗೆ ತಿಳಿದಿದೆ. ಹಾಗಾಗಿ ಸಹಕಾರ ಹೇಗೆ ಮುಂದುವರಿಯುತ್ತದೆ? ಅಲ್ಲಿ ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ಆ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸಲು ಇದು ತಕ್ಕ ಸಮಯ ಎಂದು ಜೈಶಂಕರ್ ಹೇಳಿದ್ದಾರೆ.
ದೆಹಲಿ: ಪಾಕಿಸ್ತಾನದ(Pakistan) ಮೇಲೆ ವಾಗ್ದಾಳಿ ನಡೆಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು, ಭಯೋತ್ಪಾದನೆಯಲ್ಲಿ ಒಬ್ಬ ಸದಸ್ಯ ರಾಷ್ಟ್ರ ತೊಡಗಿರುವುದರಿಂದ ಭಾರತ ಸಾರ್ಕ್ (SAARC ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಸಭೆ ನಡೆಸುವುದಿಲ್ಲ ಎಂದು ಹೇಳಿದ್ದು, ರಾತ್ರಿ ಹೊತ್ತು ಭಯೋತ್ಪಾದನೆ, ಹಗಲಿನಲ್ಲಿ ವ್ಯಾಪಾರ ನಡೆಸುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ. ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೈಶಂಕರ್ ಅವರಲ್ಲಿ ನೀವು ಸಾರ್ಕ್ ಬಗ್ಗೆ ಏನೂ ಹೇಳುತ್ತಿಲ್ಲ ಯಾಕೆ ಎಂದು ಕೇಳಿದಾಗ ನೀವು ಸಾರ್ಕ್ ಬಗ್ಗೆ ಹೆಚ್ಚು ಕೇಳಿಲ್ಲ. ಏಕೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಅದರ ಬಗ್ಗೆ ಹೆಚ್ಚು ಮಾತನಾಡಿಲ್ಲ. ನಾವು ಈ ಬಗ್ಗೆ ಸಭೆ ನಡೆಸಿಲ್ಲ. ಯಾಕೆಂದರೆ, ಸಾರ್ಕ್ ನಲ್ಲಿರುವ ಸದಸ್ಯ ರಾಷ್ಟ್ರವೊಂದು ಉತ್ತಮ ಸದಸ್ಯತ್ವ ಹೊಂದಬೇಕಾದ ಸಾಮಾನ್ಯ ರೀತಿ ನೀತಿಗಳನ್ನು ಹೊಂದಿಲ್ಲ.
ಇಂದು ಸಾರ್ಕ್ ಸಭೆ ನಡೆಸುವುದಕ್ಕೆ ಅಡ್ಡಿಯಾಗಿರುವುದೇ ಅದು. ಭಯೋತ್ಪಾದನಾ ಕೃತ್ಯಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ ಎಂದು ನಿಮಗೆ ತಿಳಿದಿದೆ. ಹಾಗಾಗಿ ಸಹಕಾರ ಹೇಗೆ ಮುಂದುವರಿಯುತ್ತದೆ? ಅಲ್ಲಿ ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ಆ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸಲು ಇದು ತಕ್ಕ ಸಮಯ. ರಾತ್ರಿ ವೇಳೆ ಭಯೋತ್ಪಾದನೆಯಲ್ಲಿ ತೊಡಗಿ ಹಗಲಿನಲ್ಲಿ ವ್ಯಾಪಾರ ಮಾಡಲು ಅನುಮತಿಸುವುದಿಲ್ಲ. ಇದರಿಂದ ದೇಶವು ಉತ್ತಮವಾಗಿ ಸೇವೆ ಸಲ್ಲಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಈ ಹಿಂದೆಯೂ ಸಹ, ಜೈಶಂಕರ್ ಅವರು ಸಾರ್ಕ್ ಸಕ್ರಿಯ ಸಂಘಟನೆಯಾಗಿಲ್ಲದ ಕಾರಣಕ್ಕೆ ಪಾಕಿಸ್ತಾನವನ್ನು ದೂಷಿಸಿದ್ದರು. ಡಿಸೆಂಬರ್ 2022 ರಲ್ಲಿ, ವಾರಣಾಸಿಯಲ್ಲಿ ಮಾತನಾಡಿದ್ದ ಎಸ್ ಜೈಶಂಕರ್ ಅವರು ಸಾರ್ಕ್ ಪ್ರಸ್ತುತ ಸಕ್ರಿಯವಾಗಿಲ್ಲ.ಯಾಕೆಂದರೆ ಸಾರ್ಕ್‌ನ ಒಂದು ಸದಸ್ಯ, ನೆರೆಹೊರೆಯವರೊಂದಿಗೆ ವ್ಯವಹರಿಸುವುದು ಗಡಿಯಾಚೆಗಿನ ಭಯೋತ್ಪಾದನೆಯ ಅಂಶಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ನಂಬುತ್ತಾರೆ.
SAARC ದಕ್ಷಿಣ ಏಷ್ಯಾದ ಎಂಟು ದೇಶಗಳ ಪ್ರಾದೇಶಿಕ ಅಂತರಸರ್ಕಾರಿ ಸಂಸ್ಥೆಯಾಗಿದೆ . ಇದರಲ್ಲಿ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ.
ಇದನ್ನೂ ಓದಿ: ODI World Cup 2023: ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ ಐಸಿಸಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ
ಇತರ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಭಾರತ, ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಸಾಮಾನ್ಯ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ. ನೆರೆಹೊರೆಯ ರಾಷ್ಟ್ರದ ವಿಷಯಕ್ಕೆ ಬಂದಾಗ ಪಾಕಿಸ್ತಾನವು ನಿಸ್ಸಂಶಯವಾಗಿ ಹೊರತಾಗಿದೆ ಎಂದು ನಾನು ಹೇಳುತ್ತೇನೆ. ಇದರ ಬಗ್ಗೆ ಹೆಚ್ಚು ವಿವರಿಸಬೇಕು ಎಂದಿಲ್ಲ. . ವಾಸ್ತವವೆಂದರೆ ಭಯೋತ್ಪಾದನೆಯನ್ನು ಸಾಮಾನ್ಯೀಕರಿಸಲು ನಾವು ಅನುಮತಿಸುವುದಿಲ್ಲ. ಅದು ನಮ್ಮೊಂದಿಗೆ ಚರ್ಚೆಗೆ ಬರಲು ಅನುಮತಿಸುತ್ತಿಲ್ಲ. ಇದು ಸಾಮಾನ್ಯ ಜ್ಞಾನವಷ್ಟೇ ಎಂದು ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Thu, 29 June 23