AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra: ಹುಲಿ ದಾಳಿಗೆ ಓರ್ವ ಸಾವು, ಕೋಪಗೊಂಡು ಅರಣ್ಯಾಧಿಕಾರಿ, ಭದ್ರತಾ ಸಿಬ್ಬಂದಿಯನ್ನು ಥಳಿಸಿದ ಜನ

ತಪ್ಪು ಮಾಡಿದ್ದು ಯಾರೋ, ಶಿಕ್ಷೆ ಅನುಭವಿಸಿದ್ದು ಮತ್ಯಾರೋ, ಹೌದು, ಹುಲಿಯೊಂದು ದಾಳಿ ನಡೆಸಿ ಓರ್ವ ಮೃತಪಟ್ಟಿದ್ದ ಆ ಕೋಪದಲ್ಲಿ ಜನರ ಗುಂಪೊಂದು ಅರಣ್ಯಾಧಿಕಾರಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Maharashtra: ಹುಲಿ ದಾಳಿಗೆ ಓರ್ವ ಸಾವು, ಕೋಪಗೊಂಡು ಅರಣ್ಯಾಧಿಕಾರಿ, ಭದ್ರತಾ ಸಿಬ್ಬಂದಿಯನ್ನು ಥಳಿಸಿದ ಜನ
ಹುಲಿ(ಸಾಂದರ್ಭಿಕ ಚಿತ್ರ)
ನಯನಾ ರಾಜೀವ್
|

Updated on: Jun 29, 2023 | 11:28 AM

Share

ತಪ್ಪು ಮಾಡಿದ್ದು ಯಾರೋ, ಶಿಕ್ಷೆ ಅನುಭವಿಸಿದ್ದು ಮತ್ಯಾರೋ, ಹೌದು, ಹುಲಿಯೊಂದು ದಾಳಿ ನಡೆಸಿ ಓರ್ವ ಮೃತಪಟ್ಟಿದ್ದ ಆ ಕೋಪದಲ್ಲಿ ಜನರ ಗುಂಪೊಂದು ಅರಣ್ಯಾಧಿಕಾರಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹುಲಿಯನ್ನು ಹಿಡಿಯಲು ಸಿಬ್ಬಂದಿ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಗೆ ತಲುಪಿದ್ದರು ಈ ಸಮಯದಲ್ಲಿ ಅಧಿಕಾರಿಗಳ ಮೇಲೆ ಜನರ ಗುಂಪು ಹಲ್ಲೆ ನಡೆಸಿದೆ.

ದಾಳಿಯಲ್ಲಿ ಗಾಯಗೊಂಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಇಬ್ಬರು ಅರಣ್ಯ ಸಿಬ್ಬಂದಿ ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಂಡಾರದ ಪಯೋನಿ ತಹಸಿಲ್‌ನ ಖಟ್ಖೇಡಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಹುಲಿಯು ಈಶ್ವರ್ ಮೋಟ್‌ಘರೆ ಎಂಬ ವ್ಯಕ್ತಿಯನ್ನು ಕೊಂದಿದೆ. ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹುಲಿಯನ್ನು ಸೆರೆಹಿಡಿಯಲು ಅಲ್ಲಿಗೆ ತಲುಪಿದಾಗ, ಕೋಪಗೊಂಡ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ಮತ್ತಷ್ಟು ಓದಿ: Chikkamagaluru News: ಅಸ್ಸಾಂ ಮೂಲದ ಮಹಿಳೆ ಮೇಲೆ‌ ಹುಲಿ ದಾಳಿ: ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ನಂತರ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಶಾಂತಗೊಳಿಸಿ ನಾಗ್ಪುರದ ಗೋರೆವಾಡ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮೃತರ ಕುಟುಂಬಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) 30 ಸಾವಿರ ನಗದು ಮತ್ತು 9.70 ಲಕ್ಷ ಚೆಕ್ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ