ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಇಡಿ ಮುಂದೆ ಹಾಜರಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
Tejashwi Yadav: ಯುಪಿಎ ಆಡಳಿತಾವಧಿಯಲ್ಲಿ ಲಾಲು ಪ್ರಸಾದ್ ಆಗಿನ ರೈಲ್ವೆ ಸಚಿವರಾಗಿದ್ದಾಗ ಆರ್‌ಜೆಡಿ ಕುಟುಂಬಕ್ಕೆ ಉಡುಗೊರೆಯಾಗಿ ಮತ್ತು ಮಾರಾಟ ಮಾಡಿದ ಭೂಮಿಗೆ ಪ್ರತಿಯಾಗಿ ರೈಲ್ವೆಯಲ್ಲಿ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.
ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ (railways land-for-jobs scam)ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರನ್ನು ವಿಚಾರಣೆ ನಡೆಸುತ್ತಿದೆ. ಯುಪಿಎ ಆಡಳಿತಾವಧಿಯಲ್ಲಿ ಲಾಲು ಪ್ರಸಾದ್ ಆಗಿನ ರೈಲ್ವೆ ಸಚಿವರಾಗಿದ್ದಾಗ ಆರ್‌ಜೆಡಿ ಕುಟುಂಬಕ್ಕೆ ಉಡುಗೊರೆಯಾಗಿ ಮತ್ತು ಮಾರಾಟ ಮಾಡಿದ ಭೂಮಿಗೆ ಪ್ರತಿಯಾಗಿ ರೈಲ್ವೆಯಲ್ಲಿ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಕಳೆದ ತಿಂಗಳು ಸಿಬಿಐ ತೇಜಸ್ವಿ ಯಾದವ್ ಅವರನ್ನು ಕೂಡ ಈ ಪ್ರಕರಣದಲ್ಲಿ ಪ್ರಶ್ನಿಸಿತ್ತು. ಈ ಹಿಂದೆ ಇದೇ ಪ್ರಕರಣದಲ್ಲಿ ಆರ್‌ಜೆಡಿ ಸಂಸದೆ ಹಾಗೂ ಲಾಲು ಪ್ರಸಾದ್ ಪುತ್ರಿ ಮಿಸಾ ಭಾರ್ತಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.
ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಪುತ್ರ 33 ವರ್ಷದ ಯಾದವ್ ಅವರು ಬೆಳಿಗ್ಗೆ 10:45 ರ ಸುಮಾರಿಗೆ ಕಾರ್ಕೇಡ್‌ನಲ್ಲಿ ಮಧ್ಯ ದೆಹಲಿಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಯನ್ನು ತಲುಪಿದರು.
ಕಳೆದ ತಿಂಗಳು ಈ ಪ್ರಕರಣದಲ್ಲಿ ಸಿಬಿಐ ಅವರನ್ನು ವಿಚಾರಣೆ ನಡೆಸಿತ್ತು. ಸಿಬಿಐ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಇಡಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದು ಮಂಗಳವಾರ ತೇಜಸ್ವಿ ಯಾದವ್ ಹೇಳಿಕೆಯನ್ನು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 25 ರಂದು ತೇಜಸ್ವಿ ಯಾದವ್ ಅವರ ಸಂಸದ ಸಹೋದರಿ ಮಿಸಾ ಭಾರ್ತಿ ಅವರನ್ನು ಸಹ ಇಡಿ ಈ ಪ್ರಕರಣದಲ್ಲಿ ಪ್ರಶ್ನಿಸಿತ್ತು, ಅದೇ ದಿನ ಅವರು ಸಿಬಿಐ ಮುಂದೆ ಹಾಜರಾಗಿದ್ದರು. ಲಾಲು ಪ್ರಸಾದ್ ಮತ್ತು ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ಪ್ರಶ್ನಿಸುವುದರೊಂದಿಗೆ ಎರಡೂ ಕೇಂದ್ರೀಯ ಸಂಸ್ಥೆಗಳು ಇತ್ತೀಚೆಗೆ ಈ ಪ್ರಕರಣದಲ್ಲಿ ಕ್ರಮ ಕೈಗೊಂಡವು. ಆರ್‌ಜೆಡಿ ಮುಖ್ಯಸ್ಥರ ಕುಟುಂಬದ ವಿರುದ್ಧ ಇಡಿ ದಾಳಿ ನಡೆಸಿತು.
ಇದನ್ನೂ ಓದಿ: Atiq Ahmad: ಅವರು ನನ್ನನ್ನು ಕೊಲ್ಲಲು ಬಯಸುತ್ತಾರೆ, ನನಗೆ ಜೀವ ಬೆದರಿಕೆ ಇದೆ ಎಂದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್
ಇಡಿಶೋಧದ ನಂತರ, 1 ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಸಿಗದ ನಗದನ್ನು ವಶಪಡಿಸಿಕೊಂಡಿದೆ ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ಪತ್ತೆಹಚ್ಚಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Tue, 11 April 23