ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಒಡಿಶಾದಲ್ಲಿ (Odisha Rain) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಚಂಡಮಾರುತವು (Cyclone) ಮಂಗಳವಾರ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವನ್ನು ರೂಪಿಸುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಉತ್ತರ ಪ್ರದೇಶದ ದಿಯೋರಿಯಲ್ಲಿ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಹಲವು ದಿನಗಳಿಂದ ದಿಯೋರಿಯ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜಲಾವೃತವಾಗಿದೆ. ಜನರ ಮನೆಗಳಿಗೆ ನೀರು ನುಗ್ಗಿದೆ.
#WATCH | Maharashtra: Incessant heavy rainfall leads to waterlogging in several areas of Thane; some railway tracks at Thane Railway Station also submerged. pic.twitter.com/9nnN5FtJj4
— ANI (@ANI) September 16, 2022
ಒಡಿಶಾದಲ್ಲಿ, ಕಟಕ್, ಖುರ್ದಾ, ಪುರಿ, ಜಗತ್‌ಸಿಂಗ್‌ಪುರ, ಗಂಜಾಂ, ಗಜಪತಿ, ಕಲಹಂಡಿ, ಕೇಂದ್ರಪಾರಾ ಮತ್ತು ಕಂಧಮಾಲ್ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಒಡಿಶಾ ರಾಜ್ಯದ ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿದೆ.ಹೀಗಾಗಿ, ಸಮುದ್ರದ ಪ್ರದೇಶಗಳಿಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
Maharashtra | Water level of Mula Mutha River in Pune rises, submerging Baba Bhide Bridge after 22,880 cusecs of water released from Khadakwasla Dam today due to continuous rainfall in the catchment area. pic.twitter.com/uG6uYOWbPh
— ANI (@ANI) September 16, 2022
ಇದನ್ನೂ ಓದಿ: Weather Today: ಉತ್ತರ ಪ್ರದೇಶ, ಉತ್ತರಾಖಂಡ ಸೇರಿ ಈ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ
ಮಹಾರಾಷ್ಟ್ರದಲ್ಲಿ ಭಾರೀ ಮಳೆ:
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಥಾಣೆಯ ಹಲವಾರು ಪ್ರದೇಶಗಳು ಜಲಾವೃತವಾಗಿದೆ. ಥಾಣೆ ರೈಲು ನಿಲ್ದಾಣದ ರೈಲು ಹಳಿಗಳು ಮಳೆ ನೀರಿನಿಂದ ಮುಳುಗಿವೆ. ಪುಣೆಯಲ್ಲಿ ನಿರಂತರ ಮಳೆಯಿಂದ ಮುಲಾಮುತಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಡಕ್ವಾಸ್ಲಾ ಅಣೆಕಟ್ಟು ತೆರೆದ ನಂತರ ಬಾಬಾ ಭಿಡೆ ಸೇತುವೆಯು ನೀರಿನಲ್ಲಿ ಮುಳುಗಿದೆ.