ರಾಸುಗಳ ಚರ್ಮಗಂಟು ರೋಗ (lumpy skin) ಮತ್ತೆ ಏಳು ರಾಜ್ಯಗಳಿಗೆ ಹಬ್ಬಿದೆ. ಹಾಗಾಗಿ ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಏಳರಿಂದ ಎಂಟು ರಾಜ್ಯಗಳಲ್ಲಿ ಜಾನುವಾರುಗಳ ಚರ್ಮಗುಂಟು ರೋಗವಿದೆ. ಈ ರೋಗವನ್ನು ಸಾಂಕ್ರಾಮಿಕ ಎಂದು ಘೋಷಿಸಬೇಕೆಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಈ ರೋಗದಿಂದ ಜಾನುವಾರುಗಳು ಅನುಭವಿಸುತ್ತಿರುವ ನೋವು ವಿವರಿಸಲಸಾಧ್ಯ ಎಂದು ಗೆಹ್ಲೋಟ್ ಹೇಳಿದ್ದಾರೆ. ಒಂದು ವೇಳೆ ಜಾನುವಾರುಗಳಿಗೆ ರೋಗ ಬಂದಿದ್ದರೆ ಅದಕ್ಕೆ ಲಸಿಕೆ ನೀಡಲಾಗುವುದಿಲ್ಲ. ಯಾಕೆಂದರೆ ರೋಗ ತಗಲುವ ಮುಂಚೆಯೇ ಅದಕ್ಕೆ ಲಸಿಕೆ ಹಾಕಬೇಕು. ಪ್ರಸ್ತುತ ನಮ್ಮ ದೇಶದಲ್ಲಿ ಇದಕ್ಕಿರುವ ಲಸಿಕೆ ಅಥವಾ ಔಷಧಿ ಇಲ್ಲ. ಈಗ ಪ್ರಯೋಗಗಳು ಆರಂಭವಾಗಿದ್ದು, ಲಸಿಕೆಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಈ ರೋಗ ಹರಡಲು ಆರಂಭವಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಇದು ಕೊವಿಡ್ನಿಂದಲೂ ಗಂಭೀರ. ಇದು ನಮ್ಮ ಜಾನುವಾರುಗಳಿಗೆ ಮಾರಕವಾಗಿದೆ. ಇದನ್ನು ಸಾಂಕ್ರಾಮಿಕ ಎಂದು ಘೋಷಿಸಿದರೆ ರಾಜ್ಯಗಳಿಗೆ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ಸಿಗಬಹುದು ಮತ್ತು ಪರಿಣಾಮಕಾರಿ ಕಾರ್ಯಗಳನ್ನು ಮಾಡಬಹುದುಯ. ಈ ರೋಗ ತುಂಬಾ ಅಪಾಯಕಾರಿ ಆಗಿದ್ದು ವೇಗವಾಗಿ ಹರಡುತ್ತಿದೆ. ಗುಜರಾತಿನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Lumpy Skin Diesease: ನಿಯಂತ್ರಣಕ್ಕೆ ಬಾರದ ಚರ್ಮಗಂಟು ರೋಗ; ರಾಜಸ್ಥಾನದಲ್ಲಿ 11 ಸಾವಿರ ಹಸುಗಳ ಸಾವು, ದೇಶದೆಲ್ಲೆಡೆ ಆತಂಕ
ರಾಜಸ್ಥಾನದಲ್ಲಿ 22,000ಕ್ಕಿಂತಲೂ ಹೆಚ್ಚು ಜಾನುವಾರುಗಳು, ವಿಶೇಷವಾಗಿ ಹಸುಗಳು ಚರ್ಮಗಂಟು ರೋಗದಿಂದ ಸತ್ತಿವೆ. ರಾಜ್ಯದಲ್ಲಿನ 33 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಈ ರೋಗ ಹರಡಿದೆ.
ಜೋಧಪುರ್. ಜೋಧ್‌ಪುರ, ಬಾರ್ಮರ್, ಜೈಸಲ್ಮೇರ್, ಜಲೋರ್, ಪಾಲಿ, ಸಿರೋಹಿ, ಬಿಕಾನೇರ್, ಚುರು, ಗಂಗಾನಗರ, ಹನುಮಾನ್‌ಗಢ, ಅಜ್ಮೀರ್, ನಾಗೌರ್, ಭಿಲ್ವಾರಾ, ಟೋಂಕ್, ಜೈಪುರ, ಸಿಕರ್, ಜುಂಜುನು, ಅಲ್ವಾರ್, ದೌಸಾ, ಚಿತ್ತೋರ್‌ಗಢ, ಭರತ್‌ಪುರ, ಧೋಲ್‌ಪುರ್, ಕರೌಲಿ, ಬನ್ಸ್‌ವಾರಾ ಪ್ರತಾಪ್‌ಗಢ್, ಡುಂಗರ್‌ಪುರ ಮತ್ತು ಉದಯ್‌ಪುರ ಎಲ್ಲಾ ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ಗಂಗಾನಗರದಲ್ಲಿ ಗರಿಷ್ಠ 3,672 ಸಾವುಗಳು ವರದಿಯಾಗಿವೆ. ನಂತರ ಜೋಧ್‌ಪುರ (2,426), ಹನುಮಾನ್‌ಗಢ (2,167), ನಾಗೌರ್ (2,099), ಬಾರ್ಮರ್ (1,973), ಜಲೋರ್ (1,765) ಮತ್ತು ಬಿಕಾನೇರ್ನಲ್ಲಿ 1,704 ಹಸುಗಳು ಸತ್ತಿವೆ. ಒಟ್ಟು 5,12,140 ಸೋಂಕಿತ ಪ್ರಾಣಿಗಳಲ್ಲಿ 4,61,643 ಕ್ಕೂ ಹೆಚ್ಚು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: Lumpy Skin Disease in Cows ಜಾನುವಾರುಗಳ ಕಾಡುವ ಚರ್ಮಗಂಟು ರೋಗ ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ
ಏತನ್ಮಧ್ಯೆ, ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಅವರು ಆಯುರ್ವೇದ ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ರೋಗ ತಡೆಗಟ್ಟುವಲ್ಲಿ ಪರಿಣಾಮಕಾರಿ ಆಯುರ್ವೇದ ಔಷಧಿಗಳ ಕುರಿತು ಚರ್ಚಿಸಿದರು. ಪರಿಣಾಮಕಾರಿ ಆಯುರ್ವೇದ ಔಷಧಗಳ ಬಳಕೆಗೆ ಸಂಬಂಧಿಸಿದಂತೆ ಅಗತ್ಯ ಸುತ್ತೋಲೆಗಳು ಮತ್ತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅವರು ಆಯುರ್ವೇದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Published On - 3:15 pm, Fri, 19 August 22