Lumpy Skin Disease in Cows ಜಾನುವಾರುಗಳ ಕಾಡುವ ಚರ್ಮಗಂಟು ರೋಗ ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ

Lumpy Skin Disease ರೋಗಗ್ರಸ್ಥ ಜಾನುವಾರುಗಳನ್ನು ಅವಲಂಬಿಸುವ ನುಸಿ, ಸೊಳ್ಳೆ, ಉಣ್ಣೆಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಸೋಂಕು ಹಬ್ಬುತ್ತದೆ ಎನ್ನುವುದು ಸಂಶೋಧನೆಯಲ್ಲಿ ಧೃಡಪಟ್ಟಿದೆ.

Lumpy Skin Disease in Cows ಜಾನುವಾರುಗಳ ಕಾಡುವ ಚರ್ಮಗಂಟು ರೋಗ ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ
ರೋಗಗ್ರಸ್ಥ ಕರು
Follow us
Skanda
| Updated By: ಸಾಧು ಶ್ರೀನಾಥ್​

Updated on: Feb 04, 2021 | 12:44 PM

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಿಗೆ ವಿಚಿತ್ರ ಕಾಯಿಲೆಯೊಂದು ಶುರುವಾಗಿದೆ. ಇದು ಸಾಕಣೆದಾರರ ನಿದ್ದೆಗೆಡಿಸಿದೆ. ಆರಂಭದಲ್ಲಿ ಕೆಲವೆಡೆ ಮಾತ್ರ ಕಾಣಿಸಿಕೊಂಡಿದ್ದ ಕಾಯಿಲೆ ಈಗ ಬಹುತೇಕ ಪ್ರದೇಶಗಳಿಗೆ ಹರಡಿದ್ದು, ಅದಕ್ಕೆ ಪರಿಹಾರವೇನು ಎಂದು ರೈತರು ತಲೆಕೆಡಿಸಿಕೊಂಡಿದ್ದಾರೆ. ಬಹುತೇಕರಿಗೆ ಈ ಕಾಯಿಲೆಯ ಕುರಿತು ಸಮರ್ಪಕ ಮಾಹಿತಿಯೂ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಯುವರಾಜ ಹೆಗಡೆ, ಜಾನುವಾರುಗಳನ್ನು ಭಾದಿಸುತ್ತಿರುವ ‘ಚರ್ಮ ಗಂಟು’ ಕಾಯಿಲೆಯ ಕುರಿತು ಬೆಳಕು ಚೆಲ್ಲಿದ್ದಾರೆ.

ದನ, ಕರುಗಳ ಮೈಯಲ್ಲಿ ಗಂಟು ಅಥವಾ ಗುಳ್ಳೆಗಳು (Lumps) ಕಾಣಿಸಿಕೊಳ್ಳಲು ಶುರುವಾಗಿದ್ದರೆ ಅದು ಚರ್ಮ ಗಂಟು ಕಾಯಿಲೆಯ (Lumpy Skin Disease) ಪ್ರಮುಖ ಲಕ್ಷಣ. ಇದು ವೈರಸ್​ನಿಂದ ಭಾದಿಸುವ ಕಾಯಿಲೆಯಾಗಿದ್ದು, ರೋಗಗ್ರಸ್ಥ ಜಾನುವಾರುಗಳನ್ನು ಅವಲಂಬಿಸುವ ನುಸಿ, ಸೊಳ್ಳೆ, ಉಣ್ಣೆಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಸೋಂಕು ಹಬ್ಬುತ್ತದೆ ಎನ್ನುವುದು ಸಂಶೋಧನೆಯಲ್ಲಿ ಧೃಡಪಟ್ಟಿದೆ. ಇದು ಮೇಕೆ ಮತ್ತು ಕುರಿ ಸಿಡುಬಿನ ಅತಿ ಹತ್ತಿರದ ಸಂಬಂಧಿಯಾಗಿದ್ದು, ಕಲುಷಿತ ಆಹಾರ ಮತ್ತು ನೀರಿನ ಮುಖಾಂತರವೂ ರೋಗ ಪ್ರಸಾರವಾಗುವ ಸಾಧ್ಯತೆ ಇದೆ.

ಮೊದಲು ಆಫ್ರಿಕಾ ಪ್ರಾಂತ್ಯದಲ್ಲಿ 1929ರ ಸುಮಾರಿಗೆ ಕಂಡುಬಂದ ಈ ಕಾಯಿಲೆ ನಂತರ ರಷ್ಯಾ, ಯೂರೋಪಿನ ಭಾಗಗಳಲ್ಲಿ ಗೋಚರಿಸಿ, ಇತ್ತೀಚಿನ ಎರಡು ವರ್ಷಗಳಲ್ಲಿ ಭಾರತ ಸೇರಿದಂತೆ ಏಷ್ಯಾ ಭಾಗವನ್ನು ವ್ಯಾಪಿಸಿಕೊಂಡಿದೆ. ಭಾರತಕ್ಕೆ ಈ ರೋಗ ಅಪರಿಚಿತವಾಗಿದ್ದ ಕಾರಣ ಮೊದಲ ಬಾರಿಗೆ ರೋಗ ಲಕ್ಷಣಗಳು ಕಂಡುಬಂದಾಗ ಬಹುತೇಕ ರೈತರು ಜಾನುವಾರುಗಳ ಮೇಲೆ ಹೆಜ್ಜೇನು ಅಥವಾ ಇನ್ನಿತರ ಹುಳುಗಳ ದಾಳಿಯಾಗಿರಬಹುದು ಎಂದೆಣಿಸಿದ್ದರು. ಇನ್ನು ಕೆಲವರು ಲಸಿಕೆ ಅಥವಾ ಔಷಧಿಯ ಅಡ್ಡಪರಿಣಾಮವಾಗಿದೆಯೆಂದೂ, ಆಹಾರದ ಅಲರ್ಜಿ ಆಗಿರಬಹುದೆಂದೂ, ಕಂಬಳಿ ಹುಳುಗಳಿಂದ ಬಕ್ಕೆ ಆಗಿರಬಹುದೆಂದು ಊಹಿಸಿದ್ದರೆ.. ಮತ್ತಿತರರು ದೆವ್ವ, ಭೂತಗಳ ಕಾಟ ಎಂದೂ ಭಾವಿಸಿದ್ದುಂಟು!

ಇಂದಿಗೂ ಕೆಲವರಿಗೆ ಚರ್ಮಗಂಟು ಎಂಬ ಕಾಯಿಲೆಯೊಂದು ಶುರುವಾಗಿದೆ ಎನ್ನುವುದೇ ತಿಳಿದಿಲ್ಲ. ಹೀಗೆ ಮಾಹಿತಿಯ ಕೊರತೆ ಇರುವ ಕಾರಣ ಸಹಜವಾಗಿ ಅವರು ತಮ್ಮದೇ ರೀತಿಯಲ್ಲಿ ಔಷಧಿ ಮಾಡಲು ಹೋಗಿ, ಅದು ಯಶಸ್ವಿಯಾಗದೇ ರೋಗ ಉಲ್ಬಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚರ್ಮಗಂಟು ಕಾಯಿಲೆಗೆ ಸಂಬಂಧಿಸಿದಂತೆ ಜಾನುವಾರು ಸಾಕಣೆದಾರರು ತಿಳಿದಿರಲೇಬೇಕಾದ ಸಂಗತಿಗಳು

ಈ ಕಾಯಿಲೆಯ ಪ್ರಮುಖ ರೋಗ ಲಕ್ಷಣಗಳು ಮತ್ತು ಪರಿಣಾಮಗಳು 1. ಅತಿಯಾದ ಜ್ವರ ಭಾದಿಸಲು ಆರಂಭವಾಗುವುದು 2. ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು, ಗಂಟುಗಳು ಎದ್ದು ಒಡೆಯುವುದು 3. ಗುಳ್ಳೆಗಳು ಒಡೆದ ಜಾಗದಲ್ಲಿ ಗುಳಿಗಳು, ಗಂತಿಗಳು ಕಂಡುಬರುವುದು 4. ಕೀಲುಗಳಲ್ಲಿ ಊತ ಕಂಡುಬರುವುದು ಮತ್ತು ನಡೆಯುವಾಗ ಕುಂಟು ಹಾಕುವುದು 5. ಕಾಲುಗಳಲ್ಲಿ ಊತ ಕಾಣಿಸಿಕೊಂಡು ಚರ್ಮ ಸುಲಿಯಲಾರಂಭಿಸುವುದು 6. ದುಗ್ಧ ಗ್ರಂಥಿಗಳಲ್ಲಿ ಊತ, ಅದರಲ್ಲೂ ಮುಖ್ಯವಾಗಿ ಪಕ್ಕೆಲುಬುಗಳ ಮುಂದಿರುವ ಗ್ರಂಥಿಗಳಲ್ಲಿ ಅತಿಯಾದ ಊತ ಕಂಡು ಬರುವುದು 7. ಹಲವಾರು ದಿನಗಳವರೆಗೆ ವಾಸಿಯಾಗದ ಬಿಲ್ಲೆಯಾಕಾರದ ಗಾಯಗಳು 8. ಕೆಚ್ಚಲ ಮೇಲೆ ಏಳುವ ಗುಳ್ಳೆಗಳು ಎದ್ದು ಒಡೆಯುವುದು. ನಂತರ ಬ್ಯಾಕ್ಟೀರಿಯ ಸೋಂಕಿಗೆ ಒಳಗಾಗಿ ಕೆಚ್ಚಲು ಬಾವು ಕಾಣಿಸಿಕೊಳ್ಳುವುದು 9. ಗರ್ಭಪಾತ ಮತ್ತು ಬೆದೆಯ ಪುನರಾವರ್ತನೆ ಸಮಸ್ಯೆ 10. ಹೋರಿಗಳಲ್ಲಿ ವೀರ್ಯದ ಉತ್ಪಾದನೆ ಮತ್ತು ಗುಣಮಟ್ಟ ಕಡಿಮೆಯಾಗುವುದು 11. ಎದೆ ಗುಂಡಿಗೆಯಲ್ಲಿ ಊತ, ನೀರು ತುಂಬಿದಂತಾಗುವುದು. ಹೊಟ್ಟೆಯ ಅಡಿಭಾಗದಲ್ಲಿ ಊತ ಕಂಡುಬರುವುದು 12. ಕಣ್ಣು, ಮೂಗಿನಲ್ಲಿ ನೀರು ಸುರಿಸುವುದು. ಕೆಲವೊಮ್ಮೆ ರಾಸುಗಳಲ್ಲಿ ಕಣ್ಣಿನ ಅಪಾರದರ್ಶಕತೆ ಉಂಟಾಗಿ, ದೃಷ್ಟಿ ಕಡಿಮೆಯಾಗುವುದು 13. ಶ್ವಾಸಕೋಶ ಮತ್ತು ಜೀರ್ಣಾಂಗ ವ್ಯೂಹದಲ್ಲಿ ಸೋಂಕು ಕಂಡುಬರುವುದು 14. ಹಾಲಿನ ಉತ್ಪಾದನೆ ಕಡಿಮೆಯಾಗುವುದು 15. ಶೇ.2ರಷ್ಟು ಜಾನುವಾರುಗಳು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಲೂಬಹುದು

ಈ ರೋಗಲಕ್ಷಣಗಳು ಏಕಕಾಲಕ್ಕೆ ಕಂಡುಬರುವುದಿಲ್ಲವಾದರೂ ಒಮ್ಮೆಗೆ ಒಂದು ಅಥವಾ ಎರಡು ಲಕ್ಷಣಗಳನ್ನು ಕಾಣಬಹುದಾಗಿದೆ.

ರೋಗ ನಿಯಂತ್ರಣ ಹೇಗೆ? 1. ಪ್ರಮುಖವಾಗಿ ಈ ರೋಗವು ಹೊರಪರಾವಲಂಬಿ ಜೀವಿಗಳಿಂದ ಹರಡುವುದರಿಂದ ಜಾನುವಾರುಗಳನ್ನು ಸೊಳ್ಳೆ, ನುಸಿ, ಉಣ್ಣೆಯಂತಹ ಪರಾವಲಂಬಿ ಜೀವಿಗಳಿಂದ ರಕ್ಷಿಸುವುದೇ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಕೊಟ್ಟಿಗೆಗೆ ಸೊಳ್ಳೆ ಪರದೆ ಅಳವಡಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಕಣೆದಾರರು ಪ್ರಥಮ ಆದ್ಯತೆ ನೀಡಬೇಕಿದೆ. ಕೀಟಗಳನ್ನು ದೂರವಿಡಲು ಕೀಟನಿರೋಧಕಗಳನ್ನು ಬಳಸಬಹುದು 2. ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಿ, ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು 3. ದನದ ಕೊಟ್ಟಿಗೆಯನ್ನು ಅಂಟು ಜಾಡ್ಯ ನಿವಾರಕಗಳಿಂದ ಶುಚಿಗೊಳಿಸಬೇಕು. ಶೇ.2ರಷ್ಟು ಸೋಡಿಯಂ ಹೈಪೋಕ್ಲೋರೈಡ್, ಶೇ.2ರಷ್ಟು ಫಿನೈಲ್, ಶೇ.1ರಷ್ಟು ಪಾರ್ಮಲಿನ್​ನಂತಹ ದ್ರಾವಣಗಳನ್ನು ಉಪಯೋಗಿಸಿ ಸ್ವಚ್ಚಗೊಳಿಸಬೇಕು 4. ಸೋಂಕಿನಿಂದ ಮರಣ ಹೊಂದಿದ ಜಾನುವಾರುಗಳನ್ನು ಆಳವಾದ ಗುಂಡಿಗಳಲ್ಲಿ ಹೂಳಬೇಕು 5. ಪಶುವೈದ್ಯರಿಂದ ಪ್ರಯೋಗಾಲಯದಲ್ಲಿ ದೃಢಪಟ್ಟ ಲಸಿಕೆ ವಿತರಿಸಲಾಗುತ್ತಿದ್ದು, ಮೇಕೆ ಸಿಡುಬಿನ ಲಸಿಕೆಯನ್ನೇ ಹೆಚ್ಚಾಗಿ ಜಾನುವಾರುಗಳಿಗೆ ನೀಡಲಾಗುತ್ತಿದೆ 6. ಮೈಮೇಲಿನ ಗಂಟುಗಳು ಒಡೆದಾಗ ಗಾಯಗಳು ನಂಜಾಗದಂತೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು 7. ಗಾಯಗಳನ್ನು ಸೋಂಕು ನಿವಾರಕ ದ್ರಾವಣಗಳಿಂದ ಶುಚಿಗೊಳಿಸಿ ಐಯೋಡಿನ್, ಆಂಟಿಬಯೋಟಿಕ್ ಮುಲಾಮು ಲೇಪಿಸಿ ಹುಳುಗಳಾಗದಂತೆ ಎಚ್ಚರವಹಿಸಬೇಕು 8. ರೋಗನಿರೋಧಕ ಶಕ್ತಿಯನ್ನು ಬಲಗೊಳಿಸಲು ಉತ್ತಮವಾದ ಸಮತೋಲನ ಪಶು ಆಹಾರ, ಹಸಿಮೇವು, ಖನಿಜ ಮಿಶ್ರಣಗಳನ್ನು ನೀಡಿ ಶಾರೀರಿಕ ಸಧೃಡತೆಯನ್ನು ಕಾಪಾಡುವುದು ಅತೀ ಮುಖ್ಯವಾಗಿದೆ 9. ಸಾಧಾರಣವಾಗಿ ಚಿಕಿತ್ಸೆಗೆ ಒಳಪಟ್ಟ ಹೆಚ್ಚಿನ ರಾಸುಗಳು 10 ರಿಂದ 15 ದಿನಗಳಲ್ಲಿ ಗುಣಮುಖವಾಗುತ್ತವೆ

ಇದರ ಹೊರತಾಗಿ ಈ ಕಾಯಿಲೆಗೆ ಕೆಲ ಮನೆಮದ್ದುಗಳನ್ನೂ ಉಪಯೋಗಿಸಬಹುದಾಗಿದೆ ತುಳಸಿ 100ಗ್ರಾಂ, ಅರಿಶಿಣ 50 ಗ್ರಾಂ, ಬೆಳ್ಳುಳ್ಳಿ 50 ಗ್ರಾಂ, ಕಹಿಬೇವು 100 ಗ್ರಾಂ ಮಿಶ್ರಣವನ್ನು ಅರೆದು ಅರ್ಧಲೀಟರ್​ ಬೇವಿನ ಎಣ್ಣೆಯಲ್ಲಿ ಕುದಿಸಿ ಗಾಯಕ್ಕೆ ಲೇಪಿಸುವುದರಿಂದ ಅಥವಾ ಅರಿಶಿಣ 20 ಗ್ರಾಂ, ಮೆಹಂದಿ ಸೊಪ್ಪು 1 ಮುಷ್ಠಿ, ಕಹಿ ಬೇವಿನ ಸೊಪ್ಪು 1 ಮುಷ್ಠಿ , ತುಳಸಿ 1 ಮುಷ್ಠಿ, ಬೆಳ್ಳುಳ್ಳಿ 10 ಎಸಳು ಮಿಶ್ರಣವನ್ನು ಅರೆದು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಪ್ರತಿನಿತ್ಯ ಹಚ್ಚುವುದರಿಂದ ಗಾಯಗಳನ್ನು ಬೇಗ ಗುಣಪಡಿಸಬಹುದಾಗಿದ್ದು, ಕೀಟಗಳಿಂದಲೂ ರಕ್ಷಣೆ ನೀಡಬಹುದಾಗಿದೆ.

ಇದಿಷ್ಟು ಸಂಗತಿಗಳು ನಿಮ್ಮ ಗಮನದಲ್ಲಿರಲಿ 1. ಪಶುವೈದ್ಯರಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕರೆ ಸಾಮಾನ್ಯವಾಗಿ ಎರಡು ವಾರದಲ್ಲಿ ರೋಗ ಹತೋಟಿಗೆ ಬರುವ ಸಾಧ್ಯತೆ ಇರುತ್ತದೆ. ಚಿಕಿತ್ಸೆ ನೀಡದಿದ್ದಲ್ಲಿ ಸೋಂಕು 45 ದಿನಗಳವರೆಗೂ ಮುಂದುವರೆಯಬಹುದಾಗಿದ್ದು, ಗಂಭೀರ ಪರಿಸ್ಥಿತಿಗೆ ಹೋಗುವ ಸಾಧ್ಯತೆಯೂ ಇದೆ. ಆದರೆ, ಒಮ್ಮೆ ರೋಗದಿಂದ ಗುಣಮುಖವಾದ ಜಾನುವಾರುಗಳಿಗೆ ಈ ರೋಗ ಮತ್ತೆಂದಿಗೂ ಮರುಕಳಿಸುವುದಿಲ್ಲ 2. ಈ ಜಾನುವಾರುಗಳ ಹಾಲನ್ನು ಕಾಯಿಸಿ ಕುಡಿಯುವುದರಿಂದ ಯಾವ ಅಪಾಯವೂ ಇರುವುದಿಲ್ಲ. 3. ಚಿಕ್ಕ ಕರುಗಳು ಮತ್ತು ವಯಸ್ಸಾದ ಜಾನುವಾರುಗಳಲ್ಲಿ ತೀವ್ರಸ್ವರೂಪದಲ್ಲಿ ಕಾಯಿಲೆ ಕಾಣಿಸಿಕೊಳ್ಳುವ ಕಾರಣ ಅವುಗಳಿಗೆ ವಿಶೇಷ ಕಾಳಜಿ ವಹಿಸಬೇಕು 4. ಗರ್ಭ ಧರಿಸಿದ ಜಾನುವಾರುಗಳಿಗೆ ಸೋಂಕು ಕಂಡುಬಂದಲ್ಲಿ ಚುಚ್ಚುಮದ್ದು ನೀಡಿದರೆ ಗರ್ಭಪಾತವಾಗುವುದೆಂಬ ತಪ್ಪು ಕಲ್ಪನೆ ಬದಿಗಿಟ್ಟು ವಿಶೇಷ ಕಾಳಜಿ ವಹಿಸಿ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸುವುದು ಬಹುಮುಖ್ಯ 5. ಈ ಸೋಂಕು ಮನುಷ್ಯನಿಗೆ ವ್ಯಾಪಿಸುವ ಬಗ್ಗೆ ನಂಬಬಹುದಾದ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲವಾದುದರಿಂದ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಭಾರತದಲ್ಲಿ ಮನುಷ್ಯರಿಗೆ ಸೋಂಕು ತಗುಲಿರುವುದು ಇದುವರೆಗೆ ಧೃಡಪಟ್ಟಿಲ್ಲ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕೊಟ್ಟಿಗೆಯ ಕೆಲಸ ಮುಗಿದ ನಂತರ ಸೋಂಕು ನಿವಾರಕ ಸಾಬೂನುಗಳಿಂದ ದೇಹವನ್ನು ಸ್ವಚ್ಚಗೊಳಿಸಿಕೊಳ್ಳುವುದು ಉತ್ತಮ.

ಲೇಖಕರು: ಡಾ.ಯುವರಾಜ ಹೆಗಡೆ

ಗಾಯಗೊಂಡ ಗೋವಿಗೆ ಅನಾಥಾಶ್ರಮದಲ್ಲಿ ನಡಿಗೆ ಯಂತ್ರ ಹಾಗೂ ಸೀಮಂತ ಶಾಸ್ತ್ರ!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ