ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದಂತೆ ರಾಜಸ್ಥಾನದಲ್ಲಿನ ‘ಭ್ರಷ್ಟಾಚಾರ’ ವಿಚಾರ ನೆನಪಿಸಿದ ಸಚಿನ್ ಪೈಲಟ್

ರಾಜ್ಯದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಜನಸಂಘರ್ಷ್ ಯಾತ್ರೆ ನಡೆಸುತ್ತಿರುವ ಸಚಿನ್ ಪೈಲಟ್, ಕೆಲವು ದಿನಗಳಿಂದ ನಾವು ಬಿಸಿಲಿನಲ್ಲಿ ನಡೆಯುತ್ತಿರುವುದು ನೋವಿನ ಸಂಗತಿ ಅಲ್ಲ.ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಗಳು ರದ್ದಾದಾಗ ಯುವಕರ ಬಗ್ಗೆ ಯೋಚಿಸಿ, ಭ್ರಷ್ಟಾಚಾರದಿಂದ ಪತ್ರಿಕೆ ಸೋರಿಕೆಯಾಗುತ್ತದೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದಂತೆ ರಾಜಸ್ಥಾನದಲ್ಲಿನ ‘ಭ್ರಷ್ಟಾಚಾರ’ ವಿಚಾರ ನೆನಪಿಸಿದ ಸಚಿನ್ ಪೈಲಟ್
ಸಚಿನ್ ಪೈಲಟ್
Follow us
ರಶ್ಮಿ ಕಲ್ಲಕಟ್ಟ
|

Updated on:May 14, 2023 | 4:13 PM

ಸಿದ್ದರಾಮಯ್ಯ (Siddaramaiah) ಅಥವಾ ಡಿಕೆ ಶಿವಕುಮಾರ್ (DK Shivakumar) ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲು ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಕೆಲವೇ ಗಂಟೆಗಳ ಮೊದಲು, ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Sachin Pilot), ಕರ್ನಾಟಕ ಜನರು ಕಾಂಗ್ರೆಸ್ ಪ್ರಣಾಳಿಕೆಯನ್ನು ನಂಬಿ 40% ಸರ್ಕಾರವನ್ನು ಹೊರಹಾಕಿದ್ದಾರೆ. ಅದೇ ರೀತಿ ತಾನು ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಹಿಂದಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದೇನೆ. ಆದರೆ ಕೆಲವು ಕಾರಣಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ವಿರುದ್ಧ ಅಸಮಧಾನವನ್ನು ಹೊರಹಾಕಿದ್ದಾರೆ.

ರಾಜ್ಯದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಜನಸಂಘರ್ಷ್ ಯಾತ್ರೆ ನಡೆಸುತ್ತಿರುವ ಸಚಿನ್ ಪೈಲಟ್, ಕೆಲವು ದಿನಗಳಿಂದ ನಾವು ಬಿಸಿಲಿನಲ್ಲಿ ನಡೆಯುತ್ತಿರುವುದು ನೋವಿನ ಸಂಗತಿ ಅಲ್ಲ.ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಗಳು ರದ್ದಾದಾಗ ಯುವಕರ ಬಗ್ಗೆ ಯೋಚಿಸಿ, ಭ್ರಷ್ಟಾಚಾರದಿಂದ ಪತ್ರಿಕೆ ಸೋರಿಕೆಯಾಗುತ್ತದೆ. ನಾನು ಇದನ್ನು ಬಹಳ ದಿನಗಳಿಂದ ಹೇಳುತ್ತಿದ್ದೇನೆ. ನಮ್ಮ ಸರ್ಕಾರವು ಭ್ರಷ್ಟಾಚಾರದ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ಶೀತಲ ಸಮರವು ರಾಜಸ್ಥಾನ ಕಾಂಗ್ರೆಸ್​​ನಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ. ಅದೇ ವೇಳೆ ಕರ್ನಾಟಕ ಸಿಎಂ ಸ್ಥಾನ ಆಕಾಂಕ್ಷಿಗಳಾಗಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸರಿಯಾಗದ ಸ್ಥಾನ ಸಿಗದೇ ಇದ್ದರೆ ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನೋಡಿ, ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರದ ವಿರುದ್ಧ ನಮ್ಮ ಅಭಿಯಾನವನ್ನು ಕರ್ನಾಟಕದ ಜನರು ನಂಬಿದ್ದರು. ಈಗ ನಾವು ಅಧಿಕಾರಕ್ಕೆ ಬಂದ ನಂತರ ನಾವು ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ನಾನು ಕಳೆದ ನಾಲ್ಕು ವರ್ಷಗಳಿಂದ ರಾಜಸ್ಥಾನದಲ್ಲಿ ಅದೇ ಬೇಡಿಕೆಯನ್ನೊಡ್ಡುತ್ತಿದ್ದೇನೆ. ಕೆಲವು ಕಾರಣಗಳಿಗಾಗಿ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಯಾವ ಕಾರಣಕ್ಕಾಗಿ ನನಗೆ ಗೊತ್ತಿಲ್ಲ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

2018 ರಲ್ಲಿ, ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ. ನಾನು ಪಕ್ಷದ ಮುಖವಾಗಿದ್ದೆ. ಸರ್ಕಾರ ರಚನೆಯಾದ ನಂತರ ಮುಖ್ಯಮಂತ್ರಿಯೇ ಪಕ್ಷದ ಮುಖ ಆದರು. ಹಾಗಾಗಿ ಗೆಹ್ಲೋಟ್ ಜಿ ಮತ್ತು ನಾನು ಒಟ್ಟಿಗೆ ಹೋರಾಡಬೇಕಾಗುತ್ತದೆ ಎಂದಿದ್ದಾರೆ ಪೈಲಟ್. ನನ್ನ ಬೇಡಿಕೆ ತುಂಬಾ ಸರಳವಾಗಿದೆ. ನಾನು ಯಾರನ್ನೂ ಅವಮಾನಿಸಿಲ್ಲ, ಯಾರನ್ನೂ ನಿಂದಿಸಿಲ್ಲ. ನಾನು ಹೇಳುತ್ತಿರುವುದು ಏನೆಂದರೆ ನಾವು ಯಾವ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಜನರು ನೋಡುತ್ತಿದ್ದಾರೆ.ಆರೋಪಗಳನ್ನು ಮಾಡುವುದು ಸುಲಭ ಎಂದು ಪೈಲಟ್ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಸಾಮಾಜಿಕ ಮಾಧ್ಯಮದ ಪೋಸ್ಟ್ ವಿಚಾರದ ಘರ್ಷಣೆಯಲ್ಲಿ ವ್ಯಕ್ತಿ ಸಾವು, 8 ಮಂದಿಗೆ ಗಾಯ

ಗೆಹ್ಲೋಟ್ ವರ್ಸಸ್ ಪೈಲಟ್ ಅನ್ನು ಬದಿಗಿಟ್ಟು ನೋಡಿದರೆ, ಕಳೆದ ವಾರ ಅಶೋಕ್ ಗೆಹ್ಲೋಟ್ ಅವರು 2020 ರಲ್ಲಿ ತಮ್ಮ ಶಾಸಕರಿಗೆ ಮತ್ತು ಅವರ ಆಗಿನ ಉಪ ಸಚಿನ್ ಪೈಲಟ್‌ಗೆ ಬಿಜೆಪಿ ಲಂಚ ನೀಡಲು ಪ್ರಯತ್ನಿಸಿದಾಗ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೇ ತಮ್ಮ ಸರ್ಕಾರಕ್ಕೆ ಸಹಾಯ ಮಾಡಿದರು ಎಂದು ಹೇಳಿಕೊಂಡ ನಂತರ ರಾಜಸ್ಥಾನದಲ್ಲಿ ಭಾರಿ ವಿವಾದ ಭುಗಿಲೆದ್ದಿತು. ವಸುಂಧರಾ ರಾಜೇ ಅವರು ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು, ಇತ್ತ ಗೆಹ್ಲೋಟ್ ಕೂಡ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಾದಿಸಿದರು.

ವಸುಂಧರಾ ರಾಜೇ ಮತ್ತು ಗೆಹ್ಲೋಟ್ ನಡುವೆ ಕೆಲವು ಒಪ್ಪಂದ ಇದೆ ಎಂದು ತಾನು ಹೇಳಿಕೊಳ್ಳುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಹಿಂದಿನ ಆಡಳಿತದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ನಾವು ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಪಕ್ಷಗಳು ಹೇಳಿಕೊಳ್ಳಬಹುದು ಎಂದು ಪೈಲಟ್ ಹೇಳಿದ್ದಾರೆ.

ಕಳೆದ 14 ವರ್ಷಗಳಲ್ಲಿ ವಸುಂಧರಾ ರಾಜೇ ಅವರೊಂದಿಗೆ 15 ಬಾರಿ ಮಾತನಾಡಿಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ. ನನ್ನ ಸರ್ಕಾರವನ್ನು ಉಳಿಸಲು ವಸುಂಧರಾ ಜಿ ಮತ್ತು ಕೈಲಾಶ್ ಜಿ ಸಹಾಯ ಮಾಡಿದ್ದಾರೆ ಎಂದು ನಾನು ಧೋಲ್‌ಪುರದಲ್ಲಿ ಹೇಳಿದ್ದೆ. ಜನರು ಅದನ್ನು ತಪ್ಪಾಗಿ ಅರ್ಥೈಸಿದ್ದಾರೆ. ಅವರು ನನ್ನ ಬಳಿಗೆ ಬರಲಿಲ್ಲ ಮತ್ತು ನಾನು ನಿಮ್ಮೊಂದಿಗೆ ನಿಂತಿದ್ದೇನೆ ಎಂದು ಹೇಳಲಿಲ್ಲ. ನನ್ನ ಕೆಲಸವನ್ನು ನಿಲ್ಲಿಸಲು ಗುತ್ತಿಗೆ ತೆಗೆದುಕೊಂಡವರ ಜತೆ ನಾನು ಸ್ನೇಹ ಬೆಳೆಸುತ್ತೇನೆಯೇ ಎಂದು ಗೆಹ್ಲೋಟ್ ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Sun, 14 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್