69 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜಸ್ಥಾನ ಸರ್ಕಾರ; ಕರೌಲಿಗೆ ಹೊಸ ಜಿಲ್ಲಾಧಿಕಾರಿ

| Updated By: ರಶ್ಮಿ ಕಲ್ಲಕಟ್ಟ

Updated on: Apr 14, 2022 | 3:55 PM

ಅಂಕಿತ್ ಕುಮಾರ್ ಸಿಂಗ್ ಅವರನ್ನು ಕರೌಲಿಯ ಹೊಸ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ. ಜೈಪುರಕ್ಕೆ ವರ್ಗಾವಣೆಗೊಂಡಿರುವ ರಾಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇಲಾಖಾ ವಿಚಾರಣೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ

69 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜಸ್ಥಾನ ಸರ್ಕಾರ; ಕರೌಲಿಗೆ ಹೊಸ ಜಿಲ್ಲಾಧಿಕಾರಿ
ಅಶೋಕ್​ ಗೆಹ್ಲೋಟ್​
Follow us on

ಜೈಪುರ:  ಪ್ರಮುಖ ಆಡಳಿತಾತ್ಮಕ ಪುನರ್ರಚನೆಯಲ್ಲಿ ರಾಜಸ್ಥಾನ (Rajasthan) ಸರ್ಕಾರವು ಈ ತಿಂಗಳ ಆರಂಭದಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾದ ಕರೌಲಿ (Karauli) ಜಿಲ್ಲೆಯ ಜಿಲ್ಲಾಧಿಕಾರಿ ಸೇರಿದಂತೆ 69 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಏಪ್ರಿಲ್ 2 ರಂದು ಹಿಂದೂ ಹೊಸ ವರ್ಷದ ಸಂದರ್ಭದಲ್ಲಿ ಕೆಲವರು ಬೈಕ್ ರ್ಯಾಲಿ ಮೇಲೆ ಕಲ್ಲು ತೂರಾಟ ನಡೆಸಿದಾಗ ಹಿಂಸಾಚಾರ ಸಂಭವಿಸಿದೆ. ಹಲವಾರು ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು ಈ ಹಿಂಸಾಚಾರದಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಿಬ್ಬಂದಿ ಇಲಾಖೆ ಬುಧವಾರ ತಡರಾತ್ರಿ ವರ್ಗಾವಣೆ ಆದೇಶ ಹೊರಡಿಸಿದೆ. ಅದರಂತೆ ಮೂರು ವಿಭಾಗದ ಆಯುಕ್ತರು ಹಾಗೂ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಅಂಕಿತ್ ಕುಮಾರ್ ಸಿಂಗ್ ಅವರನ್ನು ಕರೌಲಿಯ ಹೊಸ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ. ಜೈಪುರಕ್ಕೆ ವರ್ಗಾವಣೆಗೊಂಡಿರುವ ರಾಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇಲಾಖಾ ವಿಚಾರಣೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಐಎಎಸ್ ವಿಕಾಸ್ ಸೀತಾರಾಮ್ ಭಾಲೆ, ಜಿತೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಸನ್ವರ್ಮಲ್ ವರ್ಮಾ ಅವರನ್ನು ಕ್ರಮವಾಗಿ ಜೈಪುರ, ಜೋಧ್‌ಪುರ ಮತ್ತು ಭರತ್‌ಪುರ ವಿಭಾಗೀಯ ಆಯುಕ್ತರಾಗಿ ನಿಯೋಜಿಸಲಾಗಿದೆ. ಐಎಎಸ್ ಸೌರಭ್ ಸ್ವಾಮಿ ಅವರನ್ನು ಪ್ರತಾಪ್‌ಗಢ ಜಿಲ್ಲಾಧಿಕಾರಿಯಾಗಿ, ಜಾಲೋರ್‌ನ ನಿಶಾಂತ್ ಜೈನ್, ಅಲ್ವಾರ್‌ನ ನಕಾಟೆ ಶಿವಪ್ರಸಾದ್ ಮದನ್ ಮತ್ತು ಬನ್ಸ್ವಾರಾದ ಪ್ರಕಾಶ್ ಚಂದ್ರ ಶರ್ಮಾ ಅವರನ್ನು ನಿಯೋಜಿಸಲಾಗಿದೆ.

ಗೌರವ್ ಗೋಯಲ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರ ಜಾಗದಲ್ಲಿ ರವಿ ಜೈನ್ ಅವರನ್ನು ಜೈಪುರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ಮಾಡಲಾಗಿದೆ. ಐಎಎಸ್ ಅಧಿಕಾರಿಗಳಾದ ವೀಣು ಗುಪ್ತಾ, ಡಾ ಸುಬೋಧ್ ಅಗರ್ವಾಲ್, ಸುಧಾಂಶ್ ಪಂತ್, ಶಿಖರ್ ಅಗರ್ವಾಲ್ ಮತ್ತು ಶ್ರೇಯಾ ಗುಹಾ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಅಕ್ರಮ ಮರಳುಗಾರಿಕೆ ಪ್ರಕರಣ: ಇಡಿಯಿಂದ ಪಂಜಾಬ್ ಮಾಜಿ ಸಿಎಂ ಚನ್ನಿ ವಿಚಾರಣೆ