ರಸ್ತೆ ಜಗಳದಲ್ಲಿ ವ್ಯಕ್ತಿ ಸಾವು; ಗೆಹ್ಲೋಟ್ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಮೆಹ್ರಾ ಕಾಲೋನಿ ಬಳಿ ರಸ್ತೆಯಲ್ಲಿ ಇಬ್ಬರು ಬೈಕ್‌ ಸವಾರರು ಡಿಕ್ಕಿ ಹೊಡೆದು ಹೊಡೆದಾಡಿಕೊಂಡಿದ್ದಾರೆ. ಅವರ ಜಗಳಕ್ಕೆ ಪ್ರತಿಕ್ರಿಯಿಸಿದ ಕಾಲೋನಿಯ ನಿವಾಸಿಗಳು ಮಧ್ಯಪ್ರವೇಶಿಸಿ ಇಬ್ಬರೂ ಜಗಳವಾಡಬೇಡಿ ಬೇರೆ ದಾರಿಯಲ್ಲಿ ಹೋಗುವಂತೆ ಕೇಳಿಕೊಂಡರು. ನಿವಾಸಿಗಳ ಮನವಿಯಂತೆ ಬೈಕ್ ಸವಾರರೊಬ್ಬರು ತೆರಳಿದ ಬಳಿಕ ಯುವಕನ ಸಾವು ಪ್ರಕರಣ ಬಯಲಾಗಿ

ರಸ್ತೆ ಜಗಳದಲ್ಲಿ ವ್ಯಕ್ತಿ ಸಾವು; ಗೆಹ್ಲೋಟ್ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಜೈಪುರದಲ್ಲಿ ಪ್ರತಿಫಭಟನೆ

Updated on: Oct 04, 2023 | 2:33 PM

ಜೈಪುರ ಅಕ್ಟೋಬರ್ 04: ಶುಕ್ರವಾರ ತಡರಾತ್ರಿ ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ನಡೆದ ರಸ್ತೆ ಜಗಳ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು (Hindu Outfit) ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿವೆ. ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿ ಹಿಂದೂ ಗುಂಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿವೆ. ಶನಿವಾರದಂದು ಜೈಪುರದಲ್ಲಿ ಕೋಮು ಉದ್ವಿಗ್ನತೆ ಸ್ಫೋಟಗೊಂಡಿದ್ದು, ರಸ್ತೆ ಜಗಳದ ನಂತರ 17 ವರ್ಷದ ಯುವಕನನ್ನು ತಪ್ಪು ತಿಳುವಳಿಕೆಯಿಂದ ಕೊಂದಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಸುಭಾಷ್ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಎರಡು ಮೋಟಾರ್‌ಸೈಕಲ್‌ಗಳು ಡಿಕ್ಕಿ ಹೊಡೆದಿತ್ತು. ಅದನ್ನು ನೋಡಲು ನಿಲ್ಲಿಸಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಯಾವುದೇ ಉದ್ದೇಶವಿಲ್ಲ, ಇದು ಕೆಲವು ತಪ್ಪು ತಿಳುವಳಿಕೆಯಿಂದ ನಡೆದದ್ದಾಗಿತ್ತು ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.

ಕೋಪಗೊಂಡ ಪ್ರತಿಭಟನಾಕಾರರು ಶನಿವಾರ ಸುಭಾಷ್ ಚೌಕ್ ಮತ್ತು ರಾಮಗಂಜ್ ಭಾಗಗಳಲ್ಲಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಲು ಜಮಾಯಿಸಿದರು. ರಸ್ತೆಗಳನ್ನೂ ತಡೆದಿದ್ದರು. ನಗರದಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಏನಿದು ಪ್ರಕರಣ?

ಮೆಹ್ರಾ ಕಾಲೋನಿ ಬಳಿ ರಸ್ತೆಯಲ್ಲಿ ಇಬ್ಬರು ಬೈಕ್‌ ಸವಾರರು ಡಿಕ್ಕಿ ಹೊಡೆದು ಹೊಡೆದಾಡಿಕೊಂಡಿದ್ದಾರೆ. ಅವರ ಜಗಳಕ್ಕೆ ಪ್ರತಿಕ್ರಿಯಿಸಿದ ಕಾಲೋನಿಯ ನಿವಾಸಿಗಳು ಮಧ್ಯಪ್ರವೇಶಿಸಿ ಇಬ್ಬರೂ ಜಗಳವಾಡಬೇಡಿ ಬೇರೆ ದಾರಿಯಲ್ಲಿ ಹೋಗುವಂತೆ ಕೇಳಿಕೊಂಡರು. ನಿವಾಸಿಗಳ ಮನವಿಯಂತೆ ಬೈಕ್ ಸವಾರರೊಬ್ಬರು ತೆರಳಿದ ಬಳಿಕ ಯುವಕನ ಸಾವು ಪ್ರಕರಣ ಬಯಲಾಗಿದೆ. ಆದರೆ, ಸ್ಥಳದಲ್ಲಿಯೇ ಇದ್ದ ಮತ್ತೊಬ್ಬ ಬೈಕ್ ಸವಾರ ಕಾಲೋನಿಯ ನಿವಾಸಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಜನರು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಥಳಿಸಲು ಮುಂದಾದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ದಾಳಿಯ ನಂತರ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಮೃತರನ್ನು ಜೈಸಿಂಗಪುರ ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ. ಆತನನ್ನು ರಸ್ತೆಗೆ ಡಿಕ್ಕಿ ಹೊಡೆದು ಸಾಯಿಸಲಾಗಿದೆ ಎಂದು ಆತನ ಕುಟುಂಬ ಹೇಳಿಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಆದರೆ, ಇಕ್ಬಾಲ್ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲು ನಿರಾಕರಿಸಿದರು.

ಇದನ್ನೂ ಓದಿ: ಪತ್ನಿ ಹೆಸರಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಪತಿ, ಜೈಪುರ ಮೇಯರ್ ಮುನೇಶ್ ಗುರ್ಜರ್ ಅಮಾನತು

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗುಂಪಿನಿಂದ ಯಾರೋ ಇಕ್ಬಾಲ್‌ಗೆ ಕಪಾಳಮೋಕ್ಷ ಮಾಡಿದ್ದು, ಮತ್ತೊಬ್ಬರು ಎಳೆದೊಯ್ಯುತ್ತಿರುವುದು ಕಂಡುಬಂದಿದೆ.

ಜೈಪುರ ನಗರ ಆಡಳಿತ ಇಕ್ಬಾಲ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಉದ್ಯೋಗ ಮತ್ತು ಡೈರಿ ಬೂತ್ ಘೋಷಿಸಿತು. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಅವರ ಕುಟುಂಬದವರು ಆಗ್ರಹಿಸಿದ್ದಾರೆ. ರಾಮಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ