AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ನಿಮಿತ್ತಂ ಬಹುಕೃತ ವೇಷಂ: ಶೂ ಪಾಲಿಶ್ ಮಾಡಿದ್ದಾಯ್ತು ಈಗ ಆಸ್ಪತ್ರೆಯ ಶೌಚಾಲಯ ತೊಳೆದ ಪಕ್ಷೇತರ ಶಾಸಕ

ಚುನಾವಣೆ ಬಂದರೆ ಸಾಕು ಜನನಾಯಕರು ಪೊರಕೆ ಹಿಡಿಯಲು ಸೈ, ಶೌಚಾಲಯ ತೊಳೆಯಲೂ ಸೈ. ಚುನಾವಣೆ ಹತ್ತಿರಬರುತ್ತಿದ್ದಂತೆ ಜನನಾಯಕರಿಗೆ ಜನರ ಮತಗಳನ್ನು ಸೆಳೆಯುವ ಚಿಂತೆ ಕಾಡುತ್ತಿದೆ. ಗಾಂಧಿ ಜಯಂತಿಯಂದು ಜನರ ಶೂ ಪಾಲಿಶ್ ಮಾಡಿದ್ದ ಪಕ್ಷೇತರ ಶಾಸಕ ಓಂ ಪ್ರಕಾಶ್​ ಹುಡ್ಲಾ ಇಂದು ಆಸ್ಪತ್ರೆಯ ಸಾರ್ವಜನಿಕ ಶೌಚಾಲಯ ತೊಳೆದಿದ್ದಾರೆ. ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹುಡ್ಲಾ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಚುನಾವಣಾ ನಿಮಿತ್ತಂ ಬಹುಕೃತ ವೇಷಂ: ಶೂ ಪಾಲಿಶ್ ಮಾಡಿದ್ದಾಯ್ತು ಈಗ ಆಸ್ಪತ್ರೆಯ ಶೌಚಾಲಯ ತೊಳೆದ ಪಕ್ಷೇತರ ಶಾಸಕ
ಓಂ ಪ್ರಕಾಶ್ ಹುಡ್ಲಾImage Credit source: TV9 Bharatvarsh
ನಯನಾ ರಾಜೀವ್
|

Updated on: Oct 04, 2023 | 3:17 PM

Share

ಚುನಾವಣೆ ಬಂದರೆ ಸಾಕು ಜನನಾಯಕರು ಪೊರಕೆ ಹಿಡಿಯಲು ಸೈ, ಶೌಚಾಲಯ ತೊಳೆಯಲೂ ಸೈ. ಚುನಾವಣೆ ಹತ್ತಿರಬರುತ್ತಿದ್ದಂತೆ ಜನನಾಯಕರಿಗೆ ಜನರ ಮತಗಳನ್ನು ಸೆಳೆಯುವ ಚಿಂತೆ ಕಾಡುತ್ತಿದೆ. ಗಾಂಧಿ ಜಯಂತಿಯಂದು ಜನರ ಶೂ ಪಾಲಿಶ್ ಮಾಡಿದ್ದ ಪಕ್ಷೇತರ ಶಾಸಕ ಓಂ ಪ್ರಕಾಶ್​ ಹುಡ್ಲಾ ಇಂದು ಆಸ್ಪತ್ರೆಯ ಸಾರ್ವಜನಿಕ ಶೌಚಾಲಯ ತೊಳೆದಿದ್ದಾರೆ. ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹುಡ್ಲಾ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಹುಡ್ಲಾ ಅವರು, ಶೌಚಾಲಯವನ್ನು ನೋಡಿ ಸಿಟ್ಟಿಗೆದ್ದರು. ಅವರೇ ಬ್ರಷ್​ ಅನ್ನು ತೆಗೆದುಕೊಂಡು ಶೌಚಾಲಯವನ್ನು ಸ್ವಚ್ಛಗೊಳಿಸಿದರು. ಗೋಡೆಗಳ ಕೊಳೆಯನ್ನೂ ಕೂಡ ತೆಗೆದು ಹಾಕಿದ್ದಾರೆ.

ಕಮೋಡ್ ಮತ್ತು ಟೈಲ್ಸ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಶಾಸಕರು ಹೊರಗೆ ಬಂದರು. ಬಳಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರರೊಂದಿಗೆ ಮಾತುಕತೆ ನಡೆಸಿದರು. ಸ್ವಚ್ಛತೆಯ ಸಂದೇಶ ನೀಡಲು ಶೌಚಾಲಯವನ್ನು ಸ್ವಚ್ಛಗೊಳಿಸಿದ್ದೇನೆ ಎಂದರು. ಯಾವ ಕೆಲಸವೂ ಚಿಕ್ಕದಲ್ಲ, ದೊಡ್ಡದಲ್ಲ ಎಂದರು. ಈ ಕಾರಣಕ್ಕಾಗಿ ಅವರು ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ.

ಸ್ವಚ್ಛತೆ ಬಳಿಕ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಇಡೀ ದೇಶದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿ ನೆಲೆಸಿರುತ್ತಾರೆ ಎಂದು ಹೇಳಿದರು.

ಮತ್ತಷ್ಟು ಓದಿ: ಪೊಲೀಸ್​ ಠಾಣೆ ಎದುರು ಟೆಂಟ್ ಹಾಕಿ, ಜನರ ಶೂಗಳನ್ನು ಪಾಲಿಶ್ ಮಾಡಿದ ಪಕ್ಷೇತರ ಶಾಸಕ ಓಂ ಪ್ರಕಾಶ್ ಹುಡ್ಲಾ

ಆದ್ದರಿಂದ ಪ್ರತಿಯೊಂದು ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೋಮವಾರ ಗಾಂಧಿ ಜಯಂತಿಯಂದು ಶಾಸಕ ಹುಡ್ಲ ಅವರು ಜನರ ಬೂಟು ಪಾಲಿಶ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ