AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ: ಆಟವಾಡುವಾಗ ಜೋಕಾಲಿಯ ಹಗ್ಗ ಕೊರಳಿಗೆ ಸುತ್ತಿಕೊಂಡು ಬಾಲಕ ಸಾವು

ಆಟವಾಡುವಾಗ ಜೋಕಾಲಿಯ ಹಗ್ಗ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಗಳಲ್ಲಿ ನಡೆದಿದೆ. ಆ ಬಾಲಕನ ತಂಗಿಗಾಗಿ ಜೋಕಾಲಿ ಕಟ್ಟಲಾಗಿತ್ತು, ನಿತ್ಯ ಅದರಲ್ಲಿ ಬಾಲಕ ಕೂಡ ಆಟವಾಡುತ್ತಿದ್ದ. ಆದಿಲ್ ತನ್ನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಉಯ್ಯಾಲೆಯ ಹಗ್ಗ ಸುರುಳಿ ಸುತ್ತಿಕೊಳ್ಳುತ್ತಾ ಬಾಲಕನ ಕುತ್ತಿಗೆಯನ್ನೂ ಕೂಡ ಸುತ್ತುವರೆದಿತ್ತು. ಆತ ವಾಂತಿ ಮಾಡಿಕೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ.

ಜೋಕಾಲಿ
ನಯನಾ ರಾಜೀವ್
|

Updated on: Oct 04, 2023 | 8:16 AM

Share

ಆಟವಾಡುವಾಗ ಜೋಕಾಲಿಯ ಹಗ್ಗ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಗಳಲ್ಲಿ ನಡೆದಿದೆ. ಆ ಬಾಲಕನ ತಂಗಿಗಾಗಿ ಜೋಕಾಲಿ ಕಟ್ಟಲಾಗಿತ್ತು, ನಿತ್ಯ ಅದರಲ್ಲಿ ಬಾಲಕ ಕೂಡ ಆಟವಾಡುತ್ತಿದ್ದ. ಆದಿಲ್ ತನ್ನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಉಯ್ಯಾಲೆಯ ಹಗ್ಗ ಸುರುಳಿ ಸುತ್ತಿಕೊಳ್ಳುತ್ತಾ ಬಾಲಕನ ಕುತ್ತಿಗೆಯನ್ನೂ ಕೂಡ ಸುತ್ತುವರೆದಿತ್ತು. ಆತ ವಾಂತಿ ಮಾಡಿಕೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆದಿಲ್​ನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಲಾಲ್ ತಿಳಿಸಿದ್ದಾರೆ. ಇನ್ನುಮುಂದೆ ಯಾವುದೇ ಮನೆಯಲ್ಲಿ ಉಯ್ಯಾಲೆಯಿದ್ದರೂ ಮಕ್ಕಳ ಜತೆ ಪೋಷಕರು ಕೂಡ ಇರುವುದು ಒಳಿತು.

ಮತ್ತಷ್ಟು ಓದಿ: ಉಯ್ಯಾಲೆಯೇ ನೇಣು ಕುಣಿಕೆಯಾಗಿ ಬಾಲಕಿ ಸಾವು; ಮತ್ತೋರ್ವ ಬಾಲಕಿ ಸ್ಥಿತಿ ಗಂಭೀರ

ಮಡಿಕೇರಿಯಲ್ಲೂ ಇಂಥದ್ದೇ ಘಟನೆ ನಡೆದಿತ್ತು ಮಡಿಕೇರಿಯಲ್ಲಿ 11 ವರ್ಷದ ಪ್ರವೀಣ್ ಎಂಬ ಬಾಲಕ ತಾನು ಆಡುತ್ತಿದ್ದ ಉಯ್ಯಾಲೆಯ ಹಗ್ಗಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಈ ವೇಳೆ 4ನೇ ತರಗತಿ ವಿದ್ಯಾರ್ಥಿ ಪ್ರವೀಣ್ ಮನೆಯಲ್ಲಿ ಒಬ್ಬನೇ ಇದ್ದ. ಈ ದುರಂತ ಘಟನೆ ಶುಕ್ರವಾರ ಸಂಜೆ ತೆರೆದುಕೊಂಡಿದ್ದು, ಅವರ ತಾಯಿ ಕೆಲಸದಿಂದ ಹಿಂದಿರುಗಿದಾಗ ಬೆಳಕಿಗೆ ಬಂದಿತ್ತು. ಸುಂಟಿಕೊಪ್ಪ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ನೋ, ಚೆನ್ನೈ ಮತ್ತು ಮುಂಬೈನ ವರದಿಗಳು ಸಹ ಇದೇ ರೀತಿಯ ದುರ್ಘಟನೆಗಳು ನಡೆದಿವೆ.

ಚೆನ್ನೈನಲ್ಲಿ ಐದು ವರ್ಷದ ಬಾಲಕನೊಬ್ಬ ಮನೆಯಲ್ಲಿ ಮಾಡಿದ ಜೋಕಾಲಿಯ ಹಗ್ಗ ಕುತ್ತಿಗೆ ಸುತ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮುಂಬೈನಲ್ಲಿ ಪವನ್ ಕೈಲಾಸ್ ಮಾಲಿ ಎಂಬ 13 ವರ್ಷದ ಬಾಲಕ ತನ್ನ ಮನೆಯಲ್ಲಿ ಹಗ್ಗದ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ