Rajasthan: ಹ್ಯಾಂಡ್​ಪಂಪ್ ರಿಪೇರಿ ವೇಳೆ ವಿದ್ಯುತ್ ತಂತಿಗೆ ಪೈಪ್ ತಗುಲಿ ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಸುಟ್ಟ ಗಾಯ

ಹ್ಯಾಂಡ್​ಪಂಪ್ ದುರಸ್ತಿ ಸಮಯದಲ್ಲಿ ಪೈಪ್ ಹೈಟೆನ್ಷನ್ ಲೈಲ್​ಗೆ ತಗುಲಿದ ಕಾರಣ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.

Rajasthan: ಹ್ಯಾಂಡ್​ಪಂಪ್ ರಿಪೇರಿ ವೇಳೆ ವಿದ್ಯುತ್ ತಂತಿಗೆ ಪೈಪ್ ತಗುಲಿ ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಸುಟ್ಟ ಗಾಯ
ಹ್ಯಾಂಡ್​ಪಂಪ್
Image Credit source: India Today

Updated on: Jun 21, 2023 | 9:04 AM

ಹ್ಯಾಂಡ್​ಪಂಪ್ ದುರಸ್ತಿ ಸಮಯದಲ್ಲಿ ಪೈಪ್ ಹೈಟೆನ್ಷನ್ ಲೈಲ್​ಗೆ ತಗುಲಿದ ಕಾರಣ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ನಾಲ್ವರಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ನದಾನಪುರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಬಸೇಡಿ ಉಪವಿಭಾಗದ ವಿಜಯಕಾಪುರ ಗ್ರಾಮದಲ್ಲಿ ಕೈಪಂಪು ದುರಸ್ತಿ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಕಾರ್ಮಿಕರು ಎಳೆದ ಪೈಪ್ ಮೇಲಿನಿಂದ ಹಾದು ಹೋಗಿದ್ದ ಹೈಟೆನ್ಷನ್ ಲೈನ್‌ಗೆ ತಾಗಿತ್ತು.

ಮತ್ತಷ್ಟು ಓದಿ: ತುಮಕೂರು: ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ದುರ್ಮರಣ

ಲವಕುಶ್ ಅಕಾ ಲೋಕೇಶ್ (22) ಮತ್ತು ಧ್ರುವ್ (17) ಸ್ಥಳದಲ್ಲೇ ಮೃತಪಟ್ಟರೆ, ರಾಮ್‌ವೀರ್ (50), ಥಾನ್ ಸಿಂಗ್ (30), ಹರಿ ಸಿಂಗ್, ಶಿಮ್ಲಾ (35) ತೀವ್ರ ಸುಟ್ಟಗಾಯಗಳಾಗಿದ್ದು, ಅವರನ್ನು ಬದಿ ಮತ್ತು ಬಸೇದಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us