ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿಗೆ ಹಿನ್ನಡೆ, ಗೆದ್ದು ಬೀಗಿದ ಕಾಂಗ್ರೆಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 5:48 PM

12 ಜಿಲ್ಲೆಗಳ 50 ಮುನ್ಸಿಪಾಲಿಟಿಗಳಲ್ಲಿ ಕಾಂಗ್ರೆಸ್ 14 ಸೀಟು ಗೆದ್ದುಕೊಂಡಿದೆ. ಬಿಜೆಪಿ 4 ಸೀಟುಗಳಿಸಿದೆ. ಇನ್ನುಳಿದ ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿಗೆ ಹಿನ್ನಡೆ, ಗೆದ್ದು ಬೀಗಿದ ಕಾಂಗ್ರೆಸ್
ಪ್ರಾತಿನಿಧಿಕ ಚಿತ್ರ
Follow us on

ಜೈಪುರ್: ರಾಜಸ್ಥಾನದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್ ಗೆದ್ದು ಬೀಗಿದೆ.

12 ಜಿಲ್ಲೆಗಳ 50 ಮುನ್ಸಿಪಾಲಿಟಿಗಳಲ್ಲಿ ಕಾಂಗ್ರೆಸ್ 14 ಸೀಟು ಗೆದ್ದುಕೊಂಡಿದೆ. ಬಿಜೆಪಿ 4 ಸೀಟುಗಳಿಸಿದೆ. ಇನ್ನುಳಿದ ಸೀಟುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮಧ್ಯೆ ತಾವು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ 41 ಮುನ್ಸಿಪಾಲಿಟಿಗಳಲ್ಲಿ ಅಧಿಕಾರಕ್ಕೇರುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

12 ಜಿಲ್ಲೆಗಳಲ್ಲಿನ 1,775 ವಾರ್ಡ್​ಗಳಲ್ಲಿ ಕಾಂಗ್ರೆಸ್ 619 ಸೀಟು ಗೆದ್ದಿದ್ದು, ಸ್ವತಂತ್ರರು 595 ಸೀಟುಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 549 ಸೀಟು ಗೆದ್ದು ಮೂರನೇ ಸ್ಥಾನದಲ್ಲಿದೆ.

ನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸೀಟುಗಳಲ್ಲಿ ಜಯ ಸಾಧಿಸುವ ಮೂಲಕ ಕಿಂಗ್​​ಮೇಕರ್​​ ಗಳಾಗಿ ಹೊರಹೊಮ್ಮಿದ್ದಾರೆ. 32 ಮುನ್ಸಿಪಲ್ ಕೌನ್ಸಿಲ್ ಗಳಲ್ಲಿ ಸ್ವತಂತ್ರರ ಸಹಾಯದಿಂದ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದು ಇನ್ನು ನಿರ್ಧಾರವಾಗಲಿದೆ.