ಎಕ್ಸಿಟ್​ ಪೋಲ್​ಗಳು ಚುನಾವಣಾ ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ: ರಾಜೀವ್ ಕುಮಾರ್

ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳು ನೀಡುವ ಎಕ್ಸಿಟ್ ಪೋಲ್​ಗಳು ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಮೊದಲು ನೀವು ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲಿ ಸಮೀಕ್ಷೆ ನಡೆಸಿದ್ದೀರ, ಎರಡನೆಯದಾಗಿ ಮತ ಎಣಿಕೆ ದಿನ ಚುನಾವಣಾ ಆಯೋಗ ಮಾಹಿತಿ ನೀಡುವ ಮುನ್ನವೇ ಮತ ಎಣಿಕೆ ಆರಂಭವಾಗಿ ಕೇವಲ 20 ನಿಮಿಷಗಳಲ್ಲಿ ಹಿನ್ನೆಡೆ, ಮುನ್ನಡೆ ನೀಡುವುದು ಜತೆಗೆ ಮೊದಲೇ ರೌಂಡ್​ ಮುಕ್ತಾಯದ ಬಗ್ಗೆ ಮಾಹಿತಿ ನೀಡುವುದು ತಪ್ಪು.

ಎಕ್ಸಿಟ್​ ಪೋಲ್​ಗಳು ಚುನಾವಣಾ ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ: ರಾಜೀವ್ ಕುಮಾರ್
ರಾಜೀವ್ ಕುಮಾರ್ Image Credit source: All India Radia
Follow us
ನಯನಾ ರಾಜೀವ್
|

Updated on: Oct 15, 2024 | 5:08 PM

ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳು ನೀಡುವ ಎಕ್ಸಿಟ್ ಪೋಲ್​ಗಳು ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಮೊದಲು ನೀವು ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲಿ ಸಮೀಕ್ಷೆ ನಡೆಸಿದ್ದೀರ, ಎರಡನೆಯದಾಗಿ ಮತ ಎಣಿಕೆ ದಿನ ಚುನಾವಣಾ ಆಯೋಗ ಮಾಹಿತಿ ನೀಡುವ ಮುನ್ನವೇ ಮತ ಎಣಿಕೆ ಆರಂಭವಾಗಿ ಕೇವಲ 20 ನಿಮಿಷಗಳಲ್ಲಿ ಹಿನ್ನೆಡೆ, ಮುನ್ನಡೆ ನೀಡುವುದು ಜತೆಗೆ ಮೊದಲೇ ರೌಂಡ್​ ಮುಕ್ತಾಯದ ಬಗ್ಗೆ ಮಾಹಿತಿ ನೀಡುವುದು ತಪ್ಪು.

ಒಂದು ಗಂಟೆಯ ಒಳಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ, ನಾವು ಹಾಗಾಗಿಯೇ ಮತ ಎಣಿಕೆ ಆರಂಭವಾಗಿ ಒಂದು ಗಂಟೆಯ ನಂತರ ಅಂದರೆ 9.30ಕ್ಕೆ ಅದಾದ ಬಳಿಕ 11.30 ನಂತರ 1.30ಕ್ಕೆ ವೆಬ್​ಸೈಟ್​ನಲ್ಲಿ ಅಧಿಕೃತ ಮಾಹಿತಿ ನೀಡುತ್ತೇವೆ. ಮಾಹಿತಿ ನೀಡುವ ಮುನ್ನವೂ ಕೂಡ ಹಲವಾರು ಪ್ರೋಸೆಸ್​ಗಳು ಇರಲಿವೆ. ಆದರೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ನೀವು ಅದ್ಹೇಗೆ ಮಾಹಿತಿ ನೀಡುತ್ತೀರಿ ಎಂದು ಪ್ರಶ್ನಿಸಿದರು.

ಮೊದಲು ನೀವು ನೀಡಿರುವ ಎಕ್ಸಿಟ್​ ಪೋಲ್​ಗೆ ಈಗಿನ ಫಲಿತಾಂಶವನ್ನು ಮ್ಯಾಚ್​ ಮಾಡಲು ಶುರು ಮಾಡುತ್ತೀರಿ, ಅದಾದ ಬಳಿಕ ನಿಜವಾದ ಟ್ರೆಂಡ್ ನೀಡುತ್ತೀರಿ ಅದು ಮಿಸ್​ಮ್ಯಾಚ್​ ಆಗುತ್ತದೆ ಎಂದರು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇದರೊಂದಿಗೆ ಒಟ್ಟು 49 ವಿಧಾನಸಭಾ ಮತ್ತು ಲೋಕಸಭೆ ಸ್ಥಾನಗಳಿಗೆ ಉಪಚುನಾವಣೆಯೂ ಘೋಷಣೆಯಾಗಿದೆ.

ಮತ್ತಷ್ಟು ಓದಿ: Assembly Election 2024: ಮಹಾರಾಷ್ಟ್ರ, ಜಾರ್ಖಂಡ್​ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ

ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದು, ಚರ್ಚೆಯಾಗುತ್ತಿದೆ. ವೇಳಾಪಟ್ಟಿಯನ್ನು ನೀಡಿದ ನಂತರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಎಕ್ಸಿಟ್ ಪೋಲ್ ಮತ್ತು ಎಣಿಕೆಯ ದಿನದಂದು ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ತೋರಿದ ಪ್ರವೃತ್ತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಎಕ್ಸಿಟ್‌ಪೋಲ್‌ಗಳು ಒಂದನ್ನು ಹೇಳುತ್ತವೆ ಫಲಿತಾಂಶವು ಅದಕ್ಕಿಂತ ಭಿನ್ನವಾಗಿ ಬರುವುದನ್ನು ಕಂಡಿದ್ದೇವೆ. ಮಾಧ್ಯಮಗಳು ಟ್ರೆಂಡ್‌ಗಳನ್ನು ತೋರಿಸುವುದರಲ್ಲಿ ಆತುರ ತೋರುತ್ತಿವೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.  ಹರ್ಯಾಣ ಚುನಾವಣೆಯ ಫಲಿತಾಂಶದ ನಂತರ, ಇವಿಎಂಗಳ ಮೇಲೆ ಮತ್ತೊಮ್ಮೆ ಪ್ರಶ್ನೆಗಳು ಏಳಲಾರಂಭಿಸಿದವು. ಇಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಎಕ್ಸಿಟ್ ಪೋಲ್‌ಗಳಲ್ಲಿ ಕಾಂಗ್ರೆಸ್‌ನ ದೊಡ್ಡ ಗೆಲುವಿನ ಮುನ್ಸೂಚನೆ ನೀಡಲಾಗಿತ್ತು.

ಆದರೆ ಚುನಾವಣಾ ಫಲಿತಾಂಶಗಳು ನಿಖರವಾಗಿ ವಿರುದ್ಧವಾಗಿ ಹೊರಹೊಮ್ಮಿದವು ಮತ್ತು ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಇಲ್ಲಿ ಬಳಸಲಾದ ಇವಿಎಂ ಬ್ಯಾಟರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ಮಂಗಳವಾರ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯ ದಿನಾಂಕಗಳನ್ನು ಘೋಷಿಸುವುದರ ಜೊತೆಗೆ, ಚುನಾವಣಾ ಆಯೋಗವು ಈ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ