ರಾಜ್​ಕೋಟ್ ಅಗ್ನಿ ದುರಂತದಲ್ಲಿ​ ಗೇಮ್​ ಝೋನ್​ ಮಾಲೀಕ ಕೂಡ ಸಾವು, ತಾಯಿಯ ಡಿಎನ್​ಎ ಜತೆ ಮ್ಯಾಚ್​

ರಾಜ್​ಕೋಟ್​ನ ಟಿಆರ್​ಪಿ ಗೇಮ್​ ಝೋನ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 28 ಮಂದಿ ಸುಟ್ಟು ಕರಕಲಾದರು. ಈ ದುರಂತದಲ್ಲಿ ಗೇಮ್​ ಝೋನ್ ಮಾಲೀಕ ಪ್ರಕಾಶ್​ ಕೂಡ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತರ ದೇಹಗಳು ಗುರುತು ಸಿಗದಷ್ಟು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು, ಇದೀಗ ಪ್ರಕಾಶ್​ ಅವರ ತಾಯಿಯ ಡಿಎನ್​ಎ ಜತೆಗೆ ಶವದ ಡಿಎನ್​ಎ ಮ್ಯಾಚ್​ ಆಗಿದ್ದು, ಆ ಮೃತದೇಹ ಮಾಲೀಕ ಪ್ರಕಾಶ್​ರದ್ದೇ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಜ್​ಕೋಟ್ ಅಗ್ನಿ ದುರಂತದಲ್ಲಿ​ ಗೇಮ್​ ಝೋನ್​ ಮಾಲೀಕ ಕೂಡ ಸಾವು, ತಾಯಿಯ ಡಿಎನ್​ಎ ಜತೆ ಮ್ಯಾಚ್​
ರಾಜ್​ಕೋಟ್​

Updated on: May 29, 2024 | 8:49 AM

ರಾಜ್​ಕೋಟ್​ ಟಿಆರ್​ಪಿ ಗೇಮ್​ ಝೋನ್​ನ ಮಾಲೀಕ ಪ್ರಕಾಶ್​ ಹಿರಾನ್​ ಕೂಡ ಅಗ್ನಿ ದುರಂತ(Fire Accident)ದಲ್ಲಿ ಸಾವನ್ನಪ್ಪಿದ್ದಾರೆ. ಆಟದ ವಲಯದಲ್ಲಿ ಪತ್ತೆಯಾದ ಅವಶೇಷಗಳಿಂದ ತೆಗೆದ ಡಿಎನ್ಎ ಮಾದರಿಯು ಪ್ರಕಾಶ್​ ಅವರ ತಾಯಿಯ ಡಿಎನ್​ಎ ಜತೆ ಹೊಂದಿಕೆಯಾಗಿದೆ.

ಪ್ರಕಾಶ್​ ಹಿರನ್ ಅವರು ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಪ್ರಕಾಶ್ ಸಹೋದರ ಜಿತೇಂದ್ರ ಪೊಲೀಸರಿಗೆ ಮನವಿ ಮಾಡಿದ್ದರು. ಬೆಂಕಿ ಅವಘಡದ ನಂತರ ಪ್ರಕಾಶ್​ ಹಾಗೂ ತಮ್ಮ ಕುಟುಂಬಕ್ಕೆ ಯಾವುದೇ ಸಂಪರ್ಕವಿರಲಿಲ್ಲ, ಎಲ್ಲಾ ಫೋನ್​ ಸ್ವಿಚ್ಡ್​ ಆಫ್​ ಬರುತ್ತಿದೆ, ಘಟನೆ ನಡೆದ ಸ್ಥಳದಲ್ಲಿ ಪ್ರಕಾಶ್​ ಅವರ ಕಾರು ಕೂಡ ಇದೆ ಎಂದು ಹೇಳಿದ್ದರು.

ಪ್ರಕಾಶ್ ಸಹೋದರನ ಮನವಿ ಮೇರೆಗೆ ಕುಟುಂಬದಿಂದ ಡಿಎನ್​ಎ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಮೃತದೇಹ ಪ್ರಕಾಶ್​ ಅವರದ್ದೇ ಎಂದು ಡಿಎನ್​ಎ ಪರೀಕ್ಷೆ ಮೂಲಕ ತಿಳಿದುಬಂದಿದೆ.

ಮತ್ತಷ್ಟು ಓದಿ: ರಾಜ್​ಕೋಟ್​ ಗೇಮ್​ ಝೋನ್​ಗೆ​ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ವಿಡಿಯೋ ನೋಡಿ

ಕಳೆದ ಶನಿವಾರ ರಾಜ್​ಕೋಟ್​ನ ಟಿಆರ್​ಪಿ ಗೇಮ್​ ಝೋನ್​ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರಲ್ಲಿ 12 ಮಕ್ಕಳೂ ಸೇರಿದ್ದಾರೆ. ಮೃತದೇಹಗಳೆಲ್ಲಾ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹೆಚ್ಚುವುದು ಕೂಡ ಕಷ್ಟಕರವಾಗಿತ್ತು. ಹೀಗಿರುವಾಗ ಗೇಮ್ ಝೋನ್ ಮಾಲೀಕರೊಬ್ಬರು ಸುಟ್ಟು ಕರಕಲಾಗಿದ್ದಾರೆ.

ಕೇಂದ್ರ ಸಚಿವ ಮತ್ತು ಬಿಜೆಪಿ ರಾಜ್‌ಕೋಟ್ ಲೋಕಸಭಾ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ಅವರು ಮಂಗಳವಾರ ಮಧ್ಯಾಹ್ನ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ರಾಜ್ಯಸಭಾ ಸಂಸದ ರಂಭಾಯ್ ಮೊಕರಿಯಾ ಅವರೊಂದಿಗೆ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ