ಕೊವಿಡ್ ನಿರ್ಬಂಧ ಉಲ್ಲಂಘಿಸಿ ಗಾಜೀಪುರ್ ಗಡಿಭಾಗದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ರಾಕೇಶ್ ಟಿಕಾಯತ್ ಭಾಗಿ

|

Updated on: Apr 22, 2021 | 1:14 PM

Rakesh Tikait: ಇಫ್ತಾರ್ ಕೂಟದಲ್ಲಿ ಅಂತರ ಕಾಪಾಡಿಕೊಂಡೇ ಕುಳಿತಿದ್ದಾರೆ. 50 ಜನರು ಒಟ್ಟು ಸೇರಬಹುದು ಎಂದು ಸರ್ಕಾರ ಹೇಳಿದೆ. ಅಲ್ಲಿದ್ದದ್ದು 22-35 ಮಂದಿ. ಯಾರೊಬ್ಬರೂ ಪರಸ್ಪರ ತಬ್ಬಿಕೊಳ್ಳುವುದಾಗಲೀ, ಕೈ ಕುಲುಕುವುದಾಗಲೀ ಮಾಡಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೊವಿಡ್ ನಿರ್ಬಂಧ ಉಲ್ಲಂಘಿಸಿ ಗಾಜೀಪುರ್ ಗಡಿಭಾಗದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ರಾಕೇಶ್ ಟಿಕಾಯತ್ ಭಾಗಿ
ರಾಕೇಶ್ ಟಿಕಾಯತ್
Follow us on

ದೆಹಲಿ: ದೆಹಲಿಯಲ್ಲಿ ಕೊವಿಡ್ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಸೋಂಕು ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶಕ್ಕೆ ದೇಶವೇ ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿರುವಾಗ ದೆಹಲಿ ಗಡಿಭಾಗ ಗಾಜೀಪುರ್​ನಲ್ಲಿ ಇಫ್ತಾರ್ ಕೂಟ ನಡೆದಿದೆ. ಈ ಇಫ್ತಾರ್ ಕೂಟದಲ್ಲಿ ರೈತ ನಾಯಕ, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಭಾಗಿಯಾಗಿದ್ದು, ಇಫ್ತಾರ್ ಕೂಟದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಕೊವಿಡ್ ನಿರ್ಬಂಧದ ಪ್ರಕಾರ ಜನರು ಒಟ್ಟು ಸೇರಬಾರದು. ಆದರೆ ಇಫ್ತಾರ್ ಕೂಟದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವ ಟಿಕಾಯತ್ ವಿರುದ್ಧ ಟೀಕೆಗಳು ಕೇಳಿ ಬಂದಿವೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಕಾಯತ್ ಜನರು ಅಂತರ ಕಾಪಾಡಿಕೊಂಡೇ ಕುಳಿತಿದ್ದಾರೆ. 50 ಜನರು ಒಟ್ಟು ಸೇರಬಹುದು ಎಂದು ಸರ್ಕಾರ ಹೇಳಿದೆ. ಅಲ್ಲಿದ್ದದ್ದು 22-35 ಮಂದಿ. ಯಾರೊಬ್ಬರೂ ಪರಸ್ಪರ ತಬ್ಬಿಕೊಳ್ಳುವುದಾಗಲೀ, ಕೈ ಕುಲುಕುವುದಾಗಲೀ ಮಾಡಿಲ್ಲ ಎಂದು ಹೇಳಿದ್ದಾರೆ.


ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಾಗುತ್ತಿದ್ದರೂ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.  ಈ ಬಗ್ಗೆ ಟಿಕಾಯತ್  ಅವರಲ್ಲಿ ಕೇಳಿದಾಗ  ರೈತರು  ತಮ್ಮ ಮನೆಗಳಲ್ಲಿಯೇ ಇದ್ದಾರೆ.  ಅವರನ್ನು ಮನೆಗೆ ಹೋಗಿ ಎನ್ನಲು ನಾವು ಯಾರು? ಕೊರೊನಾ ಇಲ್ಲಿಂದ ಹರಡುತ್ತಿದೆಯೇ ?  ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದೇವೆ. ಇದು  ಈಗ ನಮ್ಮ ಮನೆ ಯೇ. ಹಲವಾರು ರೈತರು ಲಸಿಕೆ ಪಡೆದುಕೊಂಡಿದ್ದಾರೆ. 2ನೇ ಡೋಸ್ ಪಡೆಯಲು ಕಷ್ಟ ಪಡುತ್ತಿದ್ದಾರೆ. ಇಲ್ಲೊಂದು ಲಸಿಕಾ ಕೇಂದ್ರ ಸ್ಥಾಪಿಸಲು ನಾವು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 3.14 ಲಕ್ಷ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ವಿಶ್ವದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಸೋಂಕು ದಾಖಲಾದ ದೇಶ ಎಂದು ಗುರುತಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1.59 ಲಕ್ಷದ ಗಡಿ ದಾಟಿದೆ.

ಇದನ್ನೂ ಓದಿ: ದೆಹಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ; ಕೊವಿಡ್​ನಿಂದ ನಿವೃತ್ತ ಬ್ರಿಗೇಡಿಯರ್ ಸಾವು

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೊಸ ದಾಖಲೆ ಬರೆದ ಭಾರತ! ಒಂದೇ ದಿನದಲ್ಲಿ 3.14 ಲಕ್ಷ ಹೊಸ ಪ್ರಕರಣ ದಾಖಲು

(Rakesh Tikait seen at a Iftar party at Ghazipur border Covid19 norms flouted by farmer leaders)