ಅಯೋಧ್ಯೆ(Ayodhya)ಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಊಬರ್(Uber) ಇವಿ ಆಟೋ ರಿಕ್ಷಾ ಸೇವೆ ಆರಂಭಿಸಿದೆ. ಮುಂದಿನ ಕೆಲವು ತಿಂಗಳುಗಳವರೆಗೆ ಪ್ರತಿದಿನ ಸುಮಾರು ಲಕ್ಷ ಪ್ರವಾಸಿಗರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು ತಮ್ಮ ತಯಾರಿಯನ್ನು ತೀವ್ರಗೊಳಿಸಿವೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಅಯೋಧ್ಯೆಯಲ್ಲಿ ತನ್ನ ಊಬರ್ ಆಟೋ ವಿಭಾಗದ ಅಡಿಯಲ್ಲಿ ತನ್ನ EV ಆಟೋ ರಿಕ್ಷಾ ಸೇವೆಯನ್ನು ಆರಂಭಿಸಿದೆ.
ಕಂಪನಿಯು ಅಯೋಧ್ಯೆಯಲ್ಲಿ ಊಬರ್ ಇಂಟರ್‌ಸಿಟಿ ಜೊತೆಗೆ ತನ್ನ ಕೈಗೆಟುಕುವ ಕಾರು ಸೇವೆಯ ಊಬರ್ ಜಿಒ ಜೊತೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ.
ಮತ್ತಷ್ಟು ಓದಿ: Ram Mandir Inauguration: ಅಯೋಧ್ಯೆಗೆ ಬರುವ ಗಣ್ಯ ಅತಿಥಿಗಳಿಗೆ ನೀಡುವ ಆ ಪವಿತ್ರವಾದ ಉಡುಗೊರೆ ಏನು ಗೊತ್ತಾ?
ಊಬರ್ ಇಂಡಿಯಾ ಅಧ್ಯಕ್ಷ ಪ್ರಭ್‌ಜಿತ್ ಸಿಂಗ್ ಮಾತನಾಡಿ, ಉಬರ್ 125 ನಗರಗಳಲ್ಲಿ ಲಭ್ಯವಿದೆ, ನಾವು ಅಯೋಧ್ಯೆಯ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲು, ತಡೆರಹಿತ ಪ್ರಯಾಣದ ಅನುಭವವನ್ನು ಉತ್ತೇಜಿಸಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಫ್ಲೆಕ್ಸಿಬಲ್ ಪ್ರೈಸಿಂಗ್ ಸರ್ವೀಸ್ ಕಾಲರ್ ಊಬರ್ ಫ್ಲೆಕ್ಸ್ ಅನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು. ಈ ಸೇವೆಯನ್ನು ಈಗ ಔರಂಗಾಬಾದ್, ಅಜ್ಮೀರ್, ಬರೇಲಿ, ಚಂಡೀಗಢ, ಕೊಯಮತ್ತೂರು, ಡೆಹ್ರಾಡೂನ್, ಗ್ವಾಲಿಯರ್, ಇಂದೋರ್, ಜೋಧ್‌ಪುರ ಮತ್ತು ಸೂರತ್‌ನಂತಹ ಇತರ ನಗರಗಳಿಗೆ ವಿಸ್ತರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ