AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ: ಜ. 22ರಂದು ಹುಟ್ಟಿದ ಶಿಶುಗಳನ್ನು ಆಶೀರ್ವದಿಸಲು ಹಣ ಪಡೆಯೋದಿಲ್ಲ ಎಂದ ತೃತೀಯಲಿಂಗಿಗಳು

ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ದಿನ ಹುಟ್ಟಿದ ಶಿಶುಗಳನ್ನು ಆಶೀರ್ವದಿಸಲು ಪೋಷಕರಿಂದ ಹಣವಾಗಲಿ, ಉಡುಗೊರೆಯಾಗಲಿ ತೆಗೆದುಕೊಳ್ಳುವುದಿಲ್ಲ ಎಂದು ಬರೇಲಿಯ ತೃತೀಯಲಿಂಗಿಗಳು ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾ ದಿನದಂದು ಮಕ್ಕಳು ಜನಿಸಿದ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅಭಿನಂದನಾ ಗೀತೆಗಳನ್ನು ಹಾಡುತ್ತೇವೆ ಎಂದು ಸಮುದಾಯದ ಶಾರದಾ ಹೇಳಿದರು.

ರಾಮ ಮಂದಿರ: ಜ. 22ರಂದು ಹುಟ್ಟಿದ ಶಿಶುಗಳನ್ನು ಆಶೀರ್ವದಿಸಲು ಹಣ ಪಡೆಯೋದಿಲ್ಲ ಎಂದ ತೃತೀಯಲಿಂಗಿಗಳು
ತೃತೀಯಲಿಂಗಿಗಳುImage Credit source: India Today
ನಯನಾ ರಾಜೀವ್
|

Updated on: Jan 15, 2024 | 8:51 AM

Share

ರಾಮಲಲ್ಲಾ(Ram Lalla) ಪ್ರಾಣ ಪ್ರತಿಷ್ಠೆಯ ದಿನ ಹುಟ್ಟಿದ ಶಿಶುಗಳನ್ನು ಆಶೀರ್ವದಿಸಲು ಪೋಷಕರಿಂದ ಹಣವಾಗಲಿ, ಉಡುಗೊರೆಯಾಗಲಿ ತೆಗೆದುಕೊಳ್ಳುವುದಿಲ್ಲ ಎಂದು ಬರೇಲಿಯ ತೃತೀಯಲಿಂಗಿಗಳು ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾ ದಿನದಂದು ಮಕ್ಕಳು ಜನಿಸಿದ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅಭಿನಂದನಾ ಗೀತೆಗಳನ್ನು ಹಾಡುತ್ತೇವೆ ಎಂದು ಸಮುದಾಯದ ಶಾರದಾ ಹೇಳಿದರು.

ನಾವು ನವಜಾತ ಶಿಶುಗಳನ್ನು ಆಶೀರ್ವದಿಸುವುದಕ್ಕಾಗಿ ಹಣವಾಗಲಿ, ಉಡುಗೊರೆಯಾಗಲಿ ಕೇಳುವುದಿಲ್ಲ, ಆದರೆ ನಮಗೆ ನೀಡುವ ಏನನ್ನಾದರೂ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರತಿ ವರ್ಷ ಹಿಂದುಳಿದ ಕುಟುಂಬದ ಐದು ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುವ ಶಾರದಾ, ಜನವರಿ 22 ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಈ ಪ್ರದೇಶದ ಪ್ರತಿ ಮನೆಗೆ ಐದು ದೀಪಗಳನ್ನು ಕಳುಹಿಸುತ್ತಿದ್ದೇವೆ ಎಂದು ಹೇಳಿದರು.

ಮತ್ತಷ್ಟು ಓದಿ: ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಸ್ಥಾನದಲ್ಲಿ ‘ಸ್ವಚ್ಛತಾ ಅಭಿಯಾನ’ದಲ್ಲಿ ಮೋದಿ ಭಾಗಿ

ನಮ್ಮ ಜೀವನದಲ್ಲಿ ರಾಮ ಮಂದಿರದ ದರ್ಶನ ಪಡೆದ ನಾವು ತುಂಬಾ ಅದೃಷ್ಟವಂತರು. ಸುಮಾರು 500 ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಶ್ರೀರಾಮನ ಮಂದಿರವನ್ನು ನೋಡಬೇಕೆಂಬ ಆಸೆ ಈಡೇರದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಾರದಾ ಹೇಳಿದ್ದಾರೆ.

ರಾಮನ ಕೃಪೆಯಿಂದ ಇಂದು ನಾವು ಮಕ್ಕಳಿಗೆ ಆಶೀರ್ವಾದ ನೀಡುತ್ತೇವೆ. ಜನವರಿ 22 ರ ನಂತರ ನಾವು ರಾಮ ಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗುತ್ತೇವೆ ಎಂದು ಶಾರದಾ ಹೇಳಿದರು. ಪ್ರಾಣ ಪ್ರತಿಷ್ಠಾ ನಂತರ ಅಯೋಧ್ಯೆಗೆ ಭೇಟಿ ನೀಡುತ್ತೇವೆ ಮತ್ತು ಜನವರಿ 22 ರಂದು ಜನಿಸಿದ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತೇವೆ ಎಂದು ನೈನಾ ದೇವಿ ಹೇಳಿದ್ದಾರೆ.

ಜನವರಿ 22 ರಂದು ರೈಲಿನಲ್ಲಿ ಕೆಲವು ಸ್ನೇಹಿತರೊಂದಿಗೆ ಭಗವಾನ್ ರಾಮನ ಭಕ್ತಿಗೀತೆಗಳನ್ನು ಹಾಡುತ್ತೇವೆ ಮತ್ತು ಪ್ರತಿಷ್ಠಾಪನೆ ಸಮಾರಂಭದ ನಂತರ ಅಯೋಧ್ಯೆಗೆ ಹೋಗಲು ಪ್ರತಿಯೊಬ್ಬ ಪ್ರಯಾಣಿಕರನ್ನು ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ