ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಅಯೋಧ್ಯೆ ರಾಮಮಂದಿರ, ಹೆಚ್ಚಲಿದೆ ಆದಾಯ

|

Updated on: Jan 24, 2024 | 6:33 PM

"ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಿಂದಲೂ ಪ್ರವಾಸಿಗರು ಮತ್ತು ಭಕ್ತರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮದ ಬೆಳವಣಿಗೆಯಾಗುತ್ತದೆ. ಈ ವರ್ಷ ಉತ್ತರ ಪ್ರದೇಶ ಸುಮಾರು 4 ಲಕ್ಷ ಕೋಟಿಗಳಷ್ಟು ಶ್ರೀಮಂತವಾಗಲಿದೆ ಎಂದು ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ

ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಅಯೋಧ್ಯೆ ರಾಮಮಂದಿರ, ಹೆಚ್ಚಲಿದೆ ಆದಾಯ
ರಾಮ ಮಂದಿರ
Follow us on

ಅಯೋಧ್ಯೆ ಜನವರಿ 24: ಅಯೋಧ್ಯೆಯ (Ayodhya) ರಾಮಮಂದಿರದ (Ram mandir) ‘ಪ್ರಾಣ ಪ್ರತಿಷ್ಠಾ’ದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಿಂದಾಗಿ ಉತ್ತರ ಪ್ರದೇಶವು (Uttar Pradesh) ಈ ವರ್ಷ ₹ 4 ಲಕ್ಷ ಕೋಟಿಗಳಷ್ಟು ಶ್ರೀಮಂತವಾಗಲಿದೆ. ಮುಂಬರುವ ಹಣಕಾಸು ವರ್ಷದಲ್ಲಿ ರಾಜ್ಯವು ₹25,000 ಕೋಟಿ ತೆರಿಗೆ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯು ಎಸ್‌ಬಿಐ ರಿಸರ್ಚ್‌ನ ವರದಿಯನ್ನು ಉಲ್ಲೇಖಿಸಿದೆ.

“ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಿಂದಲೂ ಪ್ರವಾಸಿಗರು ಮತ್ತು ಭಕ್ತರು ನಗರಕ್ಕೆ ಆಗಮಿಸಲಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮದ ಬೆಳವಣಿಗೆಯಾಗುತ್ತದೆ. ಈ ವರ್ಷ ಉತ್ತರ ಪ್ರದೇಶ ಸುಮಾರು 4 ಲಕ್ಷ ಕೋಟಿಗಳಷ್ಟು ಶ್ರೀಮಂತವಾಗಲಿದೆ ಎಂದು ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ವಿದೇಶಿ ಷೇರು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜೆಫರೀಸ್‌ನ ವರದಿಯ ಪ್ರಕಾರ ಅಯೋಧ್ಯೆಯ ಭಕ್ತರ ಹರಿವಿನಲ್ಲಿ ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾವನ್ನು ಮೀರಿಸುತ್ತದೆ ಎಂದು ಹೇಳಿದೆ. ವರದಿಯ ಪ್ರಕಾರ, ಅಯೋಧ್ಯೆಯು ವಾರ್ಷಿಕವಾಗಿ ಸುಮಾರು ಐದು ಕೋಟಿ ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ, ಇದು ಉತ್ತರ ಪ್ರದೇಶದೊಳಗೆ ಮಾತ್ರವಲ್ಲದೆ ಇಡೀ ದೇಶದ ಪ್ರಮುಖ ಪ್ರವಾಸೋದ್ಯಮ ತಾಣವಾಗಿದೆ.

ಸರಯು ನದಿಯ ಉದ್ದಕ್ಕೂ ಇರುವ ದೇವಾಲಯ ಪಟ್ಟಣವು ಪ್ರವಾಸೋದ್ಯಮಕ್ಕೆ ಹಾಟ್ ಸ್ಪಾಟ್ ಆಗುತ್ತಿದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಆಧುನೀಕರಿಸಿದ ರೈಲು ನಿಲ್ದಾಣ, ಹೊಸ ಹೋಟೆಲ್‌ಗಳು, ರಸ್ತೆ ಸಂಪರ್ಕ ಮತ್ತು ಇತರವು ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿವೆ.

ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನವು ಪ್ರತಿ ವರ್ಷ 2.5 ಕೋಟಿ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ವಾರ್ಷಿಕ ₹ 1,200 ಕೋಟಿ ಆದಾಯವನ್ನು ಗಳಿಸುತ್ತದೆ. ವೈಷ್ಣೋದೇವಿಗೆ ವಾರ್ಷಿಕವಾಗಿ 80 ಲಕ್ಷ ಜನರು ಭೇಟಿ ನೀಡುತ್ತಿದ್ದು ವಾರ್ಷಿಕ ₹ 500 ಕೋಟಿ ಆದಾಯವನ್ನು ಗಳಿಸುತ್ತಾರೆ.

ಇದನ್ನೂ ಓದಿ: Viral Video: ರಾಮ ಲಲ್ಲಾನಿಗೆ 14 ಬಗೆಯ ದೈವಿಕ ಶಕ್ತಿಯ ಆಭರಣ, ಇದನ್ನು ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ?  

ಆಗ್ರಾದಲ್ಲಿರುವ ತಾಜ್ ಮಹಲ್ 70 ಲಕ್ಷ ಸಂದರ್ಶಕರನ್ನು ಆಕರ್ಷಿಸುತ್ತದೆ ಮತ್ತು ವಾರ್ಷಿಕ ₹ 100 ಕೋಟಿ ಆದಾಯವನ್ನು ಗಳಿಸುತ್ತದೆ. ಆಗ್ರಾ ಕೋಟೆ ನೋಡಲು 30 ಲಕ್ಷ ಸಂದರ್ಶಕರು ಬರುತ್ತಿದ್ದು ವಾರ್ಷಿಕ ಆದಾಯ ₹ 27.5 ಕೋಟಿಗೆ ಕೊಡುಗೆ ನೀಡುತ್ತದೆ.
“ಮತ್ತೊಂದು ಅಂದಾಜಿನ ಪ್ರಕಾರ, ಶ್ರೀರಾಮನ ದರ್ಶನಕ್ಕಾಗಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಸಂಖ್ಯೆ ಶೀಘ್ರದಲ್ಲೇ ದಿನಕ್ಕೆ ಮೂರು ಲಕ್ಷ ಭಕ್ತರನ್ನು ತಲುಪಬಹುದು. ಇದು ಸಂಭವಿಸಿದರೆ, ವಾರ್ಷಿಕವಾಗಿ 10 ಕೋಟಿಗೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡಬಹುದು. ಪ್ರತಿ ಭಕ್ತರು ತಮ್ಮ ಭೇಟಿಯ ಸಮಯದಲ್ಲಿ ಅಂದಾಜು ₹ 2500 ಖರ್ಚು ಮಾಡಿದರೆ, ಅಯೋಧ್ಯೆಯ ಸ್ಥಳೀಯ ಆರ್ಥಿಕತೆಯು ₹ 25,000 ಕೋಟಿಗೆ ಸೇರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ