ರಾಣಾ ಪ್ರತಾಪ್, ಶಿವಾಜಿ ಮಹಾರಾಜ್ ನಮ್ಮ ಹೀರೋಗಳೇ ವಿನಃ ಔರಂಗಜೇಬನಲ್ಲ; ರಾಜನಾಥ್ ಸಿಂಗ್

ಔರಂಗಜೇಬ ಒಬ್ಬ ವೀರ ಎಂದು ಭಾವಿಸುವವರು ಮೊಘಲ್ ಚಕ್ರವರ್ತಿ ಒಬ್ಬ ಧರ್ಮಾಂಧ, ಕ್ರೂರ ಆಡಳಿತಗಾರ ಎಂದು ಬರೆದ ಪಂಡಿತ್ ಜವಾಹರಲಾಲ್ ನೆಹರು ಅವರ ಬರಹವನ್ನೂ ಓದಬೇಕಿತ್ತು. ಅಂತಹ ವ್ಯಕ್ತಿ ವೀರನಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರದ ಎಡಪಂಥೀಯ ಒಲವನ್ನು ಹೊಂದಿರುವ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ ಆದರೆ ಔರಂಗಜೇಬನನ್ನು ಶ್ಲಾಘಿಸಿದರು" ಎಂದು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.

ಛತ್ರಪತಿ ಸಂಭಾಜಿನಗರ, ಏಪ್ರಿಲ್ 18: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮಹಾರಾಣಾ ಪ್ರತಾಪನ ಆಳೆತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಔರಂಗಜೇಬ್ ಅಥವಾ ಬಾಬರ್ ಅವರನ್ನು ವೈಭವೀಕರಿಸುವವರು ದೇಶದ ಮುಸ್ಲಿಮರನ್ನು ಅವಮಾನಿಸಿದಂತೆ ಎಂದಿದ್ದಾರೆ. ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ವೀರರು. ಅವರು ನಮ್ಮ ದೇಶದ ಹೀರೋಗಳೇ ವಿನಃ ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ ಎಂದು ಹೇಳಿದ್ದಾರೆ.

“ಮಹಾರಾಣಾ ಪ್ರತಾಪ್ ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾ ಪ್ರತಾಪ್ ಅವರಿಂದ ಸ್ಫೂರ್ತಿ ಪಡೆದರು. ವಿಶೇಷವಾಗಿ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಅವರು ಸ್ಫೂರ್ತಿ ಪಡೆದಿದ್ದರು. ಸ್ವಾತಂತ್ರ್ಯಾನಂತರದ ಎಡಪಂಥೀಯ ಒಲವನ್ನು ಹೊಂದಿರುವ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ. ಆದರೆ ಔರಂಗಜೇಬನನ್ನು ಶ್ಲಾಘಿಸಿದರು” ಎಂದು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ


ಇದನ್ನೂ ಓದಿ: ಶಿಕ್ಷಣದ ಗುಣಮಟ್ಟ ಸುಧಾರಣೆಗೆ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ; ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಣೆ

“ಮಹಾರಾಣಾ ಪ್ರತಾಪ್ ತನ್ನ ಸ್ವಾಭಿಮಾನವನ್ನು ಎತ್ತಿಹಿಡಿಯಲು ತನ್ನ ಪ್ರಾಣವನ್ನು ತ್ಯಾಗ ಮಾಡಿದನು. ನಮ್ಮ ಆದರ್ಶಗಳು ಇಸ್ಲಾಂ ವಿರೋಧಿ ಮತ್ತು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಹಕೀಮ್ ಖಾನ್ ಸೂರಿ ಮೊಘಲರ ವಿರುದ್ಧ ಹಲ್ದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ಜೊತೆ ಹೋರಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿಯೂ ಮುಸ್ಲಿಂ ಸಮುದಾಯದ ಜನರಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಅಂಗರಕ್ಷಕರಲ್ಲಿ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯೆಂದರೆ ಮದರಿ ಎಂಬ ಮುಸ್ಲಿಂ ಯುವಕ. ಅಂತಹ ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ನಾಯಕರು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 pm, Fri, 18 April 25