ಇಂದು ಮಹಾತ್ಮ ಗಾಂಧಿಯವರ 74ನೇ ಪುಣ್ಯತಿಥಿ (Gandhi Ji Death Anniversary). ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಒಬ್ಬ ಹಿಂದುತ್ವವಾದಿ (Hindutvavadi) ಮಹಾತ್ಮ ಗಾಂಧೀಜಿಯವರಿಗೆ ಗುಂಡು ಹೊಡೆದ, ಉಳಿದ ಹಿಂದುತ್ವವಾದಿಗಳು ಗಾಂಧೀಜಿ ಇನ್ನಿಲ್ಲ, ಅವರು ಮೃತರಾದರು ಎಂದು ಭಾವಿಸಿದ್ದಾರೆ/ ಹಾಗೇ, ಭಾವಿಸುತ್ತಿದ್ದಾರೆ. ಆದರೆ ಎಲ್ಲಿ ಸತ್ಯವಿರುತ್ತದೆಯೋ ಅಲ್ಲಿ ಬಾಪು ಸದಾ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್, ನಿಜವಾಗಿಯೂ ಹಿಂದುತ್ವವಾದಿಯಾದವರು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರನ್ನು ಶೂಟ್ ಮಾಡುತ್ತಾರೆಯೇ ಹೊರತು ಮಹಾತ್ಮಗಾಂಧಿಯವರನ್ನಲ್ಲ ಎಂದು ಹೇಳಿದ್ದಾರೆ.
एक हिंदुत्ववादी ने गाँधी जी को गोली मारी थी।
सब हिंदुत्ववादियों को लगता है कि गाँधी जी नहीं रहे।जहाँ सत्य है, वहाँ आज भी बापू ज़िंदा हैं!#GandhiForever pic.twitter.com/nROySYZ6jU
— Rahul Gandhi (@RahulGandhi) January 30, 2022
ಮಹಾತ್ಮ ಗಾಂಧಿಯವರನ್ನು 1948ರ ಜನವರಿ 30ರಂದು ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಾಲ್ಕು ತಿಂಗಳಲ್ಲಿ ನಾಥೂರಾಂ ಗೋಡ್ಸೆ ಎಂಬಾತ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ. ದೆಹಲಿಯ ಬಿರ್ಲಾ ಹೌಸ್ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗಲೇ ಅವರಿಗೆ ಗುಂಡೇಟು ಬಿದ್ದಿದ್ದು. ನಾಥೂರಾಂ ಗೋಡ್ಸೆ ಹಿಂದು ಮಹಾಸಭಾದ ಸದಸ್ಯನಾಗಿದ್ದ ಎಂದು ಹೇಳಲಾಗಿದ್ದರೂ, ಗಾಂಧಿ ಹತ್ಯೆ ಸಮಯದಲ್ಲಿ ಗೋಡ್ಸೆ ಯಾವ ಸಂಘಟನೆಗೂ ಸೇರಿರಲಿಲ್ಲ ಎಂದೂ ಹೇಳಲಾಗುತ್ತದೆ. ಈ ಬಗ್ಗೆ ಸ್ವಲ್ಪ ಮಟ್ಟಿಗೆ ವಿವಾದ ಇದೆ. ರಾಹುಲ್ ಗಾಂಧಿ ಕೂಡ ಇತ್ತೀಚೆಗೆ ಪದೇಪದೆ ಹಿಂದು-ಹಿಂದುತ್ವವಾದಿ ಮಾತುಗಳನ್ನು ಆಡುತ್ತಿದ್ದಾರೆ. ಇಂದು ಕೂಡ ಅದೇ ಧಾಟಿಯಲ್ಲಿ ಟ್ವೀಟ್ ಮಾಡಿದ್ದರು.
ಅದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್, ಪಾಕಿಸ್ತಾನವನ್ನು ರಚನೆ ಮಾಡಬೇಕು. ಪ್ರತ್ಯೇಕ ರಾಷ್ಟ್ರ ಬೇಕು ಎಂಬುದು ಜಿನ್ನಾ ಆಗ್ರಹವಾಗಿತ್ತು. ಅಂದು ಯಾರಾದರೂ ಅವರನ್ನು ಹತ್ಯೆ ಮಾಡಿದ್ದರೆ, ಅಂಥವರು ನಿಜಕ್ಕೂ ಹಿಂದುತ್ವವಾದಿ ಎನ್ನಿಸಿಕೊಳ್ಳುತ್ತಿದ್ದರು. ಅವರದ್ದು ಸತ್ಯವಾದ ದೇಶಭಕ್ತಿ ಎನ್ನಿಸಿಕೊಳ್ಳುತ್ತಿತ್ತು. ಆದರೆ ಅಂಥ ಯಾವುದೇ ಬೇಡಿಕೆಯಿಡದೆ, ದೇಶಕ್ಕಾಗಿ ದುಡಿದ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದು ನಿಜಕ್ಕೂ ಖೇದಕರ ಎಂದು ಹೇಳಿದ್ದಾರೆ.
#WATCH Formation of Pakistan was Jinnah’s demand. If there was a real ‘Hindutvawadi’, then he/she would’ve shot Jinnah, not Gandhi. Such an act would’ve been an act of patriotism. The world even today mourns Gandhi Ji’s death: Sanjay Raut, Shiv Sena pic.twitter.com/f0uJUvUjRB
— ANI (@ANI) January 30, 2022
ಇದನ್ನೂ ಓದಿ: ಪ್ರಾಂಶುಪಾಲರ ನಕಲು ಸಹಿ ಮಾಡಿ 68 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಗುಳಂ ಮಾಡಿದ ಗುಮಾಸ್ತ, ತಲೆ ಮರೆಸಿಕೊಂಡಿರುವ ಆರೋಪಿ