ದೆಹಲಿ ಸ್ಫೋಟ ಪ್ರಕರಣ; ಕೊನೆಗೂ ಸಿಕ್ಕಿತು ಪೊಲೀಸರ ನಿದ್ರೆಗೆಡಿಸಿದ್ದ ಕೆಂಪು ಇಕೋಸ್ಪೋರ್ಟ್ ಕಾರು

Delhi Blast Case: ದೆಹಲಿಯ ಕೆಂಪು ಕೋಟೆ ಬಳಿಯ ಕಾರು ಸ್ಫೋಟಕ್ಕೆ ಸಂಬಂಧಿಸಿದ ಕೆಂಪು ಇಕೋಸ್ಪೋರ್ಟ್ ಕಾರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಇದೀಗ ಆ ಕಾರು ಪತ್ತೆಯಾಗಿದೆ. ದೆಹಲಿ ಪೊಲೀಸರು ವಿವಿಧ ದಿಕ್ಕುಗಳಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದ ನಂತರ ಹರಿಯಾಣದ ಖಂಡವಾಲಿ ಗ್ರಾಮದ ತೋಟದ ಮನೆಯಲ್ಲಿ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಪೊಲೀಸರ ಕೈಗೆ ಸಿಕ್ಕಿದೆ.

ದೆಹಲಿ ಸ್ಫೋಟ ಪ್ರಕರಣ; ಕೊನೆಗೂ ಸಿಕ್ಕಿತು ಪೊಲೀಸರ ನಿದ್ರೆಗೆಡಿಸಿದ್ದ ಕೆಂಪು ಇಕೋಸ್ಪೋರ್ಟ್ ಕಾರು
Red Ecosport Car

Updated on: Nov 12, 2025 | 9:19 PM

ನವದೆಹಲಿ, ನವೆಂಬರ್ 12: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟಕ್ಕೆ (Delhi Car Blast) ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಅದೇ ಆರೋಪಿಯ ಹೆಸರಿನಲ್ಲಿ ನೋಂದಾಯಿಸಲಾದ ಎರಡನೇ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕೆಂಪು ಇಕೋಸ್ಪೋರ್ಟ್​ ಕಾರು ಸ್ಫೋಟದಲ್ಲಿ ಮುಖ್ಯ ಪಾತ್ರ ವಹಿಸಿರುವ ಸಾಧ್ಯತೆಯಿದೆ. ದೆಹಲಿ ಪೊಲೀಸರು ವಿವಿಧ ದಿಕ್ಕುಗಳಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದ ನಂತರ ಹರಿಯಾಣದ ಖಂಡವಾಲಿ ಗ್ರಾಮದ ತೋಟದ ಮನೆಯಲ್ಲಿ ಕೆಂಪು ಫೋರ್ಡ್ ಇಕೋಸ್ಪೋರ್ಟ್ (ನೋಂದಣಿ DL 10 CK 0458) ಅನ್ನು ವಶಪಡಿಸಿಕೊಳ್ಳಲಾಗಿದೆ.

“ಸ್ಫೋಟಕ್ಕೆ ಕಾರಣವಾದ ಐ20 ಮಾತ್ರವಲ್ಲದೆ ಆರೋಪಿಗಳು ಪ್ಲಾನ್ ಮತ್ತು ಅಪರಾಧದ ಸಮಯದಲ್ಲಿ ಮತ್ತೊಂದು ಕಾರಾದ ಕೆಂಪು ಇಕೋಸ್ಪೋರ್ಟ್ ಬಳಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದಾದ ನಂತರ ಆ ಕಾರಿಗೆ ಹುಡುಕಾಟ ನಡೆದಿತ್ತು. ಹಲವು ರಾಜ್ಯಗಳಲ್ಲೂ ಹುಡುಕಾಟ ನಡೆಸಲಾಗಿತ್ತು. ಸಾಕಷ್ಟು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು.

ಇದನ್ನೂ ಓದಿ: ಆಸ್ಪತ್ರೆಗೆ ತೆರಳಿ ದೆಹಲಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಪ್ರಧಾನಿ ಮೋದಿ


ಈ ಸ್ಫೋಟದಲ್ಲಿ ಎರಡನೇ ಕಾರಿನ ಪಾತ್ರವನ್ನು ಇನ್ನೂ ಪೊಲೀಸರು ಬಿಟ್ಟುಕೊಟ್ಟಿಲ್ಲ. ಆದರೆ, ಆ ಕಾರು ಸಿಕ್ಕಿರುವುದರಿಂದ ಅದು ಈ ಸ್ಫೋಟದ ತನಿಖೆಯಲ್ಲಿ ಮುಖ್ಯ ಸುಳಿವುಗಳನ್ನು ನೀಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ದೆಹಲಿ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಡಾ. ಉಮರ್ ಉನ್ ನಬಿಗೆ ಸಂಬಂಧಿಸಿದ ಶಂಕಿತ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಬಗ್ಗೆ ದೆಹಲಿ ಪೊಲೀಸರು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಈ ವಾಹನವು ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ದೆಹಲಿ ಪೊಲೀಸರು ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರೊಂದಿಗೆ ಕಾರಿನ ವಿವರಗಳನ್ನು ಹಂಚಿಕೊಂಡಿದ್ದರು. ಕೊನೆಗೂ ಇದು ಪೊಲೀಸರ ಕೈಗೆ ಸಿಕ್ಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 12 November 25