ಉತ್ತರ ಪ್ರದೇಶ: ರಾಮಲಲ್ಲಾನ ನಂತರ ಇದೀಗ ರಾಷ್ಟ್ರ ಪ್ರತಿಷ್ಠೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸಮಯ: ಮೋದಿ
ರಾಮಲಲ್ಲಾನ ಪ್ರಾಣಪ್ರತಿಷ್ಠೆ ಮುಗಿದಿದೆ ಇದೀಗ ರಾಷ್ಟ್ರ ಪ್ರತಿಷ್ಠೆಯ ಸಮಯ, 2047ರ ಹೊತ್ತಿಗೆ ಭಾರತವವನ್ನು ಅಭಿವೃದ್ಧಿ ಹೊಂದಿಗೆ ರಾಷ್ಟ್ರವನ್ನಾಗಿಸುವುದೇ ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ 19,100 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ರಾಮಲಲ್ಲಾನ ಪ್ರತಿಷ್ಠಾಪನೆ ಮುಗಿದಿದೆ ಈಗ ರಾಷ್ಟ್ರದ ಪ್ರತಿಷ್ಠೆಯನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದರು.

ಸ್ವಾತಂತ್ರ್ಯದ ನಂತರ ಕೆಲವು ದಶಕಗಳವರೆಗೆ ಭಾರತದಲ್ಲಿ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ದೇಶದ ಹೆಚ್ಚಿನ ಭಾಗವು ಅಭಿವೃದ್ಧಿಯಿಂದ ವಂಚಿತವಾಗಿತ್ತು. ದೇಶದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶವೂ ಅಭಿವೃದ್ಧಿಯಿಂದ ವಂಚಿತವಾಗಿತ್ತು.
ಇಲ್ಲಿ ಆಡಳಿತ ನಡೆಸಿದವರು ಬಹುಕಾಲ ಆಡಳಿತಗಾರರಂತೆ ನಡೆದುಕೊಂಡಿದ್ದರಿಂದ ಹೀಗಾಯಿತು ಎಂದು ಮೋದಿ ಹೇಳಿದರು. ಜನರನ್ನು ಬಡತನದಲ್ಲಿ ಇಟ್ಟು ಸಮಾಜದಲ್ಲಿ ಒಡಕು ಮೂಡಿಸುವುದು ಅವರಿಗೆ ಅತ್ಯಂತ ಸುಲಭವಾದ ಮಾರ್ಗವಾಗಿ ಕಂಡಿತು.
ಮತ್ತಷ್ಟು ಓದಿ: Lok Sabha Elections 2024: ಲೋಕಸಭೆ ಚುನಾವಣೆ: ಉತ್ತರ ಪ್ರದೇಶದಿಂದಲೇ ಚುನಾವಣಾ ರ್‍ಯಾಲಿ ಆರಂಭಿಸಲಿದ್ದಾರೆ ಪ್ರಧಾನಿ ಮೋದಿ
ರೈತರ ಕಲ್ಯಾಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇಂದು ಸರ್ಕಾರವು ಪ್ರತಿ ರೈತ ಕುಟುಂಬದ ಸುತ್ತಲೂ ಸಂಪೂರ್ಣ ಭದ್ರತೆಯ ಹೊದಿಕೆಯನ್ನು ರಚಿಸುತ್ತಿದೆ. ನಮ್ಮ ಸರ್ಕಾರವು ಕಳೆದ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ, ಇಂದು ವಿಶ್ವದಲ್ಲಿ 3 ಸಾವಿರ ರೂ.ವರೆಗೆ ಸಿಗುವ ಯೂರಿಯಾವನ್ನು ಭಾರತೀಯ ರೈತರಿಗೆ 300 ರೂ.ಗಿಂತಲೂ ಕಡಿಮೆ ಬೆಲೆಗೆ ಲಭ್ಯವಿರುವಂತೆ ಮಾಡಲಾಗಿದೆ ಎಂದರು.
ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು, ಮಥುರಾ-ಪಲ್ವಾಲ್ ಮತ್ತು ಚಿಪಿಯಾನ ಬುಡ್ಜರ್-ದಾದ್ರಿ ವಿಭಾಗಗಳನ್ನು ಸಂಪರ್ಕಿಸುವ ನಾಲ್ಕನೇ ರೈಲು ಮಾರ್ಗ ಮತ್ತು ಹಲವಾರು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ