ಬೆಂಗಳೂರು: ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಏಪ್ರಿಲ್ 19ಕ್ಕೆ ಘೋಷಿಸಿದ್ದು 18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. www.cowin.gov.inನಲ್ಲಿ ನೋಂದಣಿ ಮಾಡಿಕೊಳ್ಳಬಹದು. ನಾಳೆಯಿಂದ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ.
ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಏಪ್ರಿಲ್ 19ಕ್ಕೆ ಘೋಷಿಸಿತ್ತು. ಇದಕ್ಕಾಗಿ ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ಉತ್ಪಾದಕರಿಂದ ಅವರು ನಿಗದಿ ಪಡಿಸಿದ ಬೆಲೆಗೆ ಲಸಿಕೆಗಳನ್ನು ಖರೀದಿ ಮಾಡಬೇಕು ಎಂದು ಹೇಳಿತ್ತು. ಈ ಬೆಳವಣಿಗೆಗಳ ನಡುವೆಯೇ ಕೆಲವು ರಾಜ್ಯಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಕೊವಿಡ್ ಲಸಿಕೆ ನೀಡುವುದಾಗಿ ಹೇಳಿವೆ. ಸದ್ಯ ಈಗ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬೇಕೆಂದು ಬಯಸಿದ್ದರೆ www.cowin.gov.in ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ನಾಳೆಯಿಂದಲೇ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಲಸಿಕಾ ಉತ್ಪಾದನ ಕಂಪೆನಿಗಳು ಶೇ 50% ರಷ್ಟು ಲಸಿಕೆಯನ್ನು ಓಪನ್ ಮಾರ್ಕೆಟ್ನಲ್ಲಿ ಮಾರಲು ಅವಕಾಶ ಇದ್ದು ಇದೂವರೆಗೆ 44 ರಿಂದ 59 ವರ್ಷದ ಒಳಗಿನ 25,99,652 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 1,45,499 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 32,50,961 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಹಾಗೂ 3,07,156 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಒಟ್ಟು 76,41,817 ಜನರಿಗೆ ಲಸಿಕೆ ನೀಡಲಾಗಿದೆ. ಹಾಗೂ ಕರ್ನಾಟಕಲ್ಲಿ ಇಬ್ಬರಿಗೆ ಲಸಿಕೆಯ ಸೈಡ್ ಎಫೆಕ್ಟ್ ಆಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
23 ಜನರಿಗೆ ಲಸಿಕೆ ಸೀರಿಯಸ್ ಎಫೆಕ್ಟ್ ಕೊಟ್ಟಿದೆ. ಆದ್ರೆ ಇದೂವರೆಗೆ ಯಾರೂ ಮೃತ ಪಟ್ಟಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದೆ.
ಕೊವಿಡ್ ವ್ಯಾಕ್ಸಿನೇಷನ್ಗಾಗಿ ನೋಂದಾಯಿಸುವುದು ಹೇಗೆ
– www.cowin.gov.in ಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
-ನಿಮ್ಮ ನೋಂದಾಯಿತ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ
-ಒಟಿಪಿ ನಮೂದಿಸಿ, ಪರಿಶೀಲನೆ ಬಟನ್ ಕ್ಲಿಕ್ ಮಾಡಿ
-ಮೌಲ್ಯೀಕರಿಸಿದ ನಂತರ, ವ್ಯಾಕ್ಸಿನೇಷನ್ ಪುಟದ ನೋಂದಣಿ ತೆರೆಯುತ್ತದೆ
-ಫೋಟೋ ಐಡಿ ಪ್ರೂಫ್ ಜೊತೆಗೆ ಅಗತ್ಯವಿರುವ ವಿವರಗಳನ್ನು ನಮೂದಿಸಿ
-ನೀವು ಹೊಂದಿದ್ದರೆ ಕೊಮೊರ್ಬಿಡಿಟಿಗಳ (comorbidities) ವಿವರಗಳನ್ನು ನೀಡಿ
-ಒಮ್ಮೆ ಮಾಡಿದ ನಂತರ, ಕೆಳಗಿನ ಬಲಭಾಗದಲ್ಲಿರುವ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
-ನೋಂದಣಿ ಮುಗಿದ ನಂತರ, ನಿಮಗೆ ಖಾತೆ ವಿವರಗಳನ್ನು ತೋರಿಸಲಾಗುತ್ತದೆ. ಖಾತೆ ವಿವರಗಳ ಪುಟದಿಂದ ನಿಮ್ಮ ನೇಮಕಾತಿಯನ್ನು ನೀವು ನಿಗದಿಪಡಿಸಬಹುದು
ನೀವು ಹೆಚ್ಚಿನ ಜನರನ್ನು ಸೇರಿಸಲು ಬಯಸಿದರೆ, ನೀವು ಮಾಡಬೇಕಾಗಿರುವುದು ಪುಟದ ಕೆಳಗಿನ ಬಲಭಾಗದಲ್ಲಿರುವ ಇನ್ನಷ್ಟು ಸೇರಿಸಿ ಬಟನ್ ಒತ್ತಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ.
ಇದನ್ನೂ ಓದಿ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಕೆಲವು ರಾಜ್ಯಗಳಲ್ಲಿ ಉಚಿತ, ಇನ್ನು ಕೆಲವೆಡೆ ಕೊರತೆ