Republic Day 2023: ಆನ್​ಲೈನ್​ನಲ್ಲೇ ಸಿಗಲಿದೆ ಗಣರಾಜ್ಯೋತ್ಸವ ಪಾಸ್, ಟಿಕೆಟ್; ಖರೀದಿಸುವುದು ಹೀಗೆ

| Updated By: Ganapathi Sharma

Updated on: Jan 07, 2023 | 11:26 AM

ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಗಣ್ಯರಿಗೆ ನೀಡಲಾಗುವ ಪಾಸ್, ಸಾರ್ವಜನಿಕರಿಗೆ ನೀಡುವ ಟಿಕೆಟ್​ ಇನ್ನು ಮುಂದೆ ಆನ್​ಲೈನ್​ನಲ್ಲೇ ಸಿಗಲಿದೆ. ಆಮಂತ್ರಣ್ ಪೋರ್ಟಲ್​​ನಲ್ಲಿ ಪಾಸ್ / ಟಿಕೆಟ್ ಖರೀದಿ ಹೇಗೆ ಎಂಬ ಮಾಹಿತಿ ಇಲ್ಲಿದೆ.

Republic Day 2023: ಆನ್​ಲೈನ್​ನಲ್ಲೇ ಸಿಗಲಿದೆ ಗಣರಾಜ್ಯೋತ್ಸವ ಪಾಸ್, ಟಿಕೆಟ್; ಖರೀದಿಸುವುದು ಹೀಗೆ
ಆಮಂತ್ರಣ್ ಪೋರ್ಟಲ್
Follow us on

ನವದೆಹಲಿ: ಗಣರಾಜ್ಯೋತ್ಸವ (Republic Day) ಮತ್ತು ಸ್ವಾತಂತ್ರ್ಯೋತ್ಸವ (Independence Day) ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಗಣ್ಯರಿಗೆ ನೀಡಲಾಗುವ ಪಾಸ್, ಸಾರ್ವಜನಿಕರಿಗೆ ನೀಡುವ ಟಿಕೆಟ್​ ಇನ್ನು ಮುಂದೆ ಆನ್​ಲೈನ್​ನಲ್ಲೇ ಸಿಗಲಿದೆ. ಪಾಸ್​ ಅಥವಾ ಟಿಕೆಟ್​ ಖರೀದಿಗಾಗಿ ಅಲೆಯುವ ಅಗತ್ಯವಿಲ್ಲ, ಎಲ್ಲಿ ಬೇಕಾದರೂ ಇದ್ದುಕೊಂಡು ಖರೀದಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪಾಸ್ ಮತ್ತು ಟಿಕೆಟ್ ವಿತರಣೆಗೆ ಸಂಬಂಧಿಸಿದ ‘ಇನ್ವಿಟೇಷನ್ ಮ್ಯಾನೇಜ್​​ಮೆಂಟ್ ಪೋರ್ಟಲ್’ ‘ಆಮಂತ್ರಣ್ (Aamantran)’ ಗೆ ರಕ್ಷಣಾ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಭಟ್ ನವದೆಹಲಿಯಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ. ಗಣರಾಜ್ಯೋತ್ಸವ ಸಮಾರಂಭ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇ-ಆಡಳಿತ ಉಪಕ್ರಮದ ಭಾಗವಾಗಿ ಈ ಪೋರ್ಟಲ್ (www.aamantran.mod.gov.in) ಆರಂಭಿಸಲಾಗಿದೆ. ಆಮಂತ್ರಣ್ ಪೋರ್ಟಲ್ ಒಟ್ಟಾರೆ ಪಾಸ್, ಟಿಕೆಟ್​ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಸರ್ಕಾರ ಮತ್ತು ಸಾರ್ವಜನಿಕರ ನಡುವಣ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಪೋರ್ಟಲ್ ‘ಡಿಜಿಟಲ್ ಇಂಡಿಯಾ’ದ ಮಹತ್ವದ ಮೈಲಿಗಲ್ಲು ಎಂದು ಅಜಯ್ ಭಟ್ ಬಣ್ಣಿಸಿದ್ದಾರೆ.

ಪ್ರತಿಯೊಬ್ಬ ನಾಗರಿಕನ ಬದುಕನ್ನೂ ಸುಗಮಗೊಳಿಸುವ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ. ಡಿಜಿಟಲ್ ಇಂಡಿಯಾ, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಕ್ರಮಗಳು ಸರ್ಕಾರ ಮತ್ತು ಜನರನ್ನು ಒಗ್ಗೂಡಿಸಿವೆ ಎಂದು ಅವರು ಹೇಳಿದ್ದಾರೆ.

ಆಮಂತ್ರಣ್ ಪೋರ್ಟಲ್​​ನಲ್ಲಿ ಪಾಸ್ / ಟಿಕೆಟ್ ಖರೀದಿ ಹೇಗೆ?

  1. ಆಮಂತ್ರಣ್ (www.aamantran.mod.gov.in) ಪೋರ್ಟಲ್​ಗೆ ಭೇಟಿ ನೀಡಿ.
  2. ಮೊಬೈಲ್ ಸಂಖ್ಯೆ ಸಹಾಯದಿಂದ ನೋಂದಣಿ ಮಾಡಿಕೊಳ್ಳಿ.
  3. ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಅಲ್ಲಿ ಕೇಳಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  4. ವಿವರಗಳನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
  5. ನಂತರ ನಿಮಗೆ ಬೇಕಿರುವ ಟಿಕೆಟ್​ ಅನ್ನು ಆಯ್ಕೆ ಮಾಡಿ.
  6. ಎಲ್ಲ ವಿವರಗಳನ್ನು ಭರ್ತಿ ಮಾಡಿದ ಬಳಿಕ ಹಣ ಪಾವತಿಸಿ, ಟಿಕೆಟ್ ಪಡೆಯಿರಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ