Republic Day 2023: ನಾಗಪುರದ ಆರ್​ಎಸ್​ಎಸ್​ ಮುಖ್ಯ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ

RSS ಮುಖ್ಯ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ಆರ್‌ಎಸ್‌ಎಸ್ ನಾಗಪುರ ಮಹಾನಗರದ ಸಹಸಂಘ ಚಾಲಕ್ ಶ್ರೀಧರ ಗಾಡ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

Republic Day 2023: ನಾಗಪುರದ ಆರ್​ಎಸ್​ಎಸ್​ ಮುಖ್ಯ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ
ಆರ್​ಎಸ್​ಎಸ್​ ಮುಖ್ಯ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣ
Follow us
TV9 Web
| Updated By: ಆಯೇಷಾ ಬಾನು

Updated on:Jan 26, 2023 | 10:00 AM

ನಾಗ್ಪುರ: ಇಂದು 74 ನೇ ಗಣರಾಜ್ಯೋತ್ಸವದ ಅಂಗವಾಗಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯ ಕಾರ್ಯಾಲಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆರ್‌ಎಸ್‌ಎಸ್ ನಾಗಪುರ ಮಹಾನಗರದ ಸಹಸಂಘ ಚಾಲಕ್ ಶ್ರೀಧರ ಗಾಡ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನಂತರ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವವು ದೇಶದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಇತರ ಹಲವು ವಿಶಿಷ್ಟ ಉಪಕ್ರಮಗಳಿಗೆ ಸಾಕ್ಷಿಯಾಗಲಿದೆ. ಕಳೆದ ವರ್ಷ ಸ್ವಾತಂತ್ರ್ಯದ 75 ನೇ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸಲಾಗಿದ್ದು ಈ ಆಚರಣೆಗಳನ್ನು ಆಧರಿಸಿ, ಈ ವರ್ಷ ಗಣರಾಜ್ಯೋತ್ಸವ ಸಂಭ್ರಮವು ದ್ವಿಗುಣವಾಗಿದೆ.

ರಾಜಪಥ್ ನಿಂದ ಕರ್ತವ್ಯ ಪಥ್ ಆಗಿ ಬದಲಾದ ಮೇಲೆ ನಡೆಯುತ್ತಿರುವ ಮೊದಲ ಗಣರಾಜೋತ್ಸವ ಇದಾಗಿದ್ದು ಹಲವು ವಿಶೇಷತೆಗಳಿಂದ ಕೂಡಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇನಾ ಸಾಧನಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳು ಸೇರಿದಂತೆ ಈಬಾರಿ 17ರಾಜ್ಯಗಳ ಸ್ತಬ್ಧ ಚಿತ್ರಗಳುಪ್ರದರ್ಶನಗೊಳ್ಳಲಿದೆ. ಇನ್ನು ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಹಲವು ರಾಜ್ಯಗಳ ಸ್ಥಳೀಯ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

ಇದನ್ನೂ ಓದಿ: Republic Day 2023 Live Video: ದೆಹಲಿ ಗಣರಾಜ್ಯೋತ್ಸವ ಪರೇಡ್ ಲೈವ್ ವೀಕ್ಷಿಸಲು ಇಲ್ಲಿದೆ ಲಿಂಕ್

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಥಮ ಬಾರಿಗೆ ಪರೇಡ್‌ನಲ್ಲಿ ಬಿಎಸ್‌ಎಫ್ ‘ಮಹಿಳಾ ಪ್ರಹರಿ’ ಒಂಟೆ ದಳದ ಮಹಿಳಾ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಹಾಗೂ ಸ್ಕ್ವಾಡ್ರನ್ ಲೀಡರ್ ಸಿಂಧು ರೆಡ್ಡಿ ನೇತೃತ್ವದಲ್ಲಿ ಭಾರತೀಯ ವಾಯುಪಡೆಯ ಕವಾಯತು ತಂಡ ಭಾಗಿಯಾಗಲಿದೆ. 25-ಪೌಂಡರ್ ಗನ್‌ಗಳನ್ನು ಹೊಂದಿರುವ ವಿಂಟೇಜ್ ಫಿರಂಗಿಗಳ ಬದಲು ಈ ವರ್ಷ 105 ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳಿಂದ 21-ಗನ್ ಸೆಲ್ಯೂಟ್‌ ಮಾಡಲಿದೆ.

ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ “ಡೇರ್‌ಡೆವಿಲ್ಸ್” ಮೋಟಾರ್ ಸೈಕಲ್ ರೈಡರ್ಸ್ ತಂಡದ ನೇತೃತ್ವವನ್ನು ಮೊದಲ ಬಾರಿ ಮಹಿಳಾ ಅಧಿಕಾರಿ ವಹಿಸಲಿದ್ದಾರೆ. 42 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸಮುದ್ರ ವಿಚಕ್ಷಣ ವಿಮಾನವಾಗಿ ಸೇವೆ ಸಲ್ಲಿಸಿದ IL-38 ಇದೇ ಮೊದಲ ಹಾಗೂ ಕಡೆಯ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ. ಪರೇಡ್‌ನಲ್ಲಿ 44 ವಿಮಾನಗಳು ಭಾಗವಹಿಸಲಿವೆ ಇವುಗಳಲ್ಲಿ ಒಂಬತ್ತು ರಫೇಲ್ ಜೆಟ್‌ಗಳು ಸೇರಿದ್ದು, ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್‌ಗಳು ಸಹ ವೈಮಾನಿಕ ಶೋನಲ್ಲಿ ಭಾಗವಹಿಸಲಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:00 am, Thu, 26 January 23