AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ಇದೆ ಹಲವು ವಿಶೇಷ! ದೆಹಲಿಯಲ್ಲಿ ಬಿಗಿ ಭದ್ರತೆ

Republic Day 2026: 77ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಿದ್ಧವಾಗಿದೆ. ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಸಮಾರಂಭದ ಅತಿಥಿಗಳಾಗಿ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್‌ ಭಾಗಿಯಾಗಲಿದ್ದಾರೆ. ನವದೆಹಲಿಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಜತೆಗೆ, ಇಡೀ ದೇಶ ಗಣರಾಜ್ಯೋತ್ಸವ ಆಚರಣೆಗೆ ಸನ್ನದ್ಧವಾಗಿದೆ.

ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ಇದೆ ಹಲವು ವಿಶೇಷ! ದೆಹಲಿಯಲ್ಲಿ ಬಿಗಿ ಭದ್ರತೆ
77ನೇ ಗಣರಾಜ್ಯೋತ್ಸವImage Credit source: ANI
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Jan 26, 2026 | 7:14 AM

Share

ನವದೆಹಲಿ, ಜನವರಿ 26: ದೇಶದ ಸಂವಿಧಾನವನ್ನು ಅಂಗೀಕರಿಸಿದ ಸುದಿನ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾಬಲವನ್ನು ಜಗತ್ತಿಗೆ ಪ್ರದರ್ಶಿಸುವ ದಿನ ಮತ್ತೆ ಬಂದಿದೆ. ಗಣರಾಜ್ಯೋತ್ಸವ (Republic Day 2026) ದಿನದ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. 77ನೇ ಗಣರಾಜ್ಯೋತ್ಸವವನ್ನು ಶತಕೋಟಿ ಭಾರತಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ಸಮರ್ಪಿಸಲು ಅಣಿಯಾಗಿದ್ದಾರೆ. ನವದೆಹಲಿಯ ಕರ್ತವ್ಯಪಥ ಕೂಡ ಸಿದ್ಧವಾಗಿದೆ.

77ನೇ ಗಣರಾಜ್ಯೋತ್ಸವ: ಎಷ್ಟೊತ್ತಿಗೆ ಏನೇನು ಕಾರ್ಯಕ್ರಮ?

  • ಬೆಳಗ್ಗೆ 10:03 – ವಾರ್‌ ಮೆಮೋರಿಯಲ್‌ನತ್ತ ಪ್ರಧಾನಿ ಮೋದಿ ಪ್ರಯಾಣ
  • ಬೆಳಗ್ಗೆ 10:05- ನ್ಯಾಷನಲ್‌ ವಾರ್‌ ಮೆಮೋರಿಯಲ್‌ನಲ್ಲಿ ಪ್ರಧಾನಿ ನಮನ
  • ಬೆಳಗ್ಗೆ 10:22 – ಕರ್ತವ್ಯ ಪಥದಲ್ಲಿರುವ ಮುಖ್ಯವೇದಿಕೆಗೆ ಮೋದಿ ಆಗಮನ
  • ಬೆಳಗ್ಗೆ 10:25 – ವೇದಿಕೆಯತ್ತ ಉಪರಾಷ್ಟ್ರಪತಿ ರಾಧಾಕೃಷ್ಣನ್‌ ಆಗಮನ
  • ಬೆಳಗ್ಗೆ 10:25 – ಸ್ವಾಗತ ಸಂಗೀತದ ಮೂಲಕ ಗಣ್ಯರ ಬರಮಾಡಿಕೊಳ್ಳುವಿಕೆ
  • ಬೆಳಗ್ಗೆ 10:27 – ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯೊಂದಿಗೆ ರಾಷ್ಟ್ರಪತಿಗಳ ಆಗಮನ
  • ಬೆಳಗ್ಗೆ 10:30 – ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ & 21 ಕುಶಾಲತೋಪುಗಳ ಗೌರವ
  • ಬೆಳಗ್ಗೆ 10:31 – ಕರ್ತವ್ಯಪಥದಲ್ಲಿ ಭವ್ಯ ಗಣರಾಜ್ಯೋತ್ಸವ ಪರೇಡ್ ಅಧಿಕೃತ ಆರಂಭ
  • ಮಧ್ಯಾಹ್ನ 12:08 – ಗಣರಾಜ್ಯೋತ್ಸವ ಪರೇಡ್ ಪರೇಡ್ ಮುಕ್ತಾಯ

ಗಣರಾಜ್ಯೋತ್ಸವ ಅತಿಥಿ ಯಾರು?

ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಯೂರೋಪಿಯನ್‌ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ ಡೆರ್‌ ಭಾಗಿಯಾಗಲಿದ್ದಾರೆ.

ವಂದೇಮಾತರಂ ಗೀತೆಗೆ 150ನೇ ವರ್ಷಾಚರಣೆ

ಈ ವರ್ಷದ ಗಣರಾಜ್ಯೋತ್ಸವವು ವಂದೇಮಾತರಂ ಗೀತೆಯ 150ನೇ ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಲಿದೆ. ಇನ್ನು, ಪಥಸಂಚಲನದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಸೇನಾಶಕ್ತಿ ಅನಾವರಣಗೊಳ್ಳಲಿದೆ.

ಗಣರಾಜ್ಯೋತ್ಸವ ಪಥಸಂಚಲನದ ವಿಶೇಷಗಳೇನು?

ಈ ಬಾರಿಯ ಪಥಸಂಚಲನದಲ್ಲಿ ಆಪರೇಷನ್‌ ಸಿಂಧೂರ್‌ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿದೆ. ಇದರಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ ವಂದೇ ಮಾತರಂ ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಬಗ್ಗೆ ಪ್ರದರ್ಶನ ನೀಡಲಿದ್ದಾರೆ.

ಮೂವತ್ತು ಸ್ತಬ್ಧಚಿತ್ರಗಳ ಪೈಕಿ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಇದರಲ್ಲಿ ಪ್ರದರ್ಶಿಸಲಿವೆ.

ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 MM ಲೈಟ್ ಫೀಲ್ಡ್‌ ಗನ್‌ಗಳನ್ನು ಬಳಸಿ 21-ಸುತ್ತಿನ ಕುಶಾಲತೋಪು ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು, ಕೃಷಿಕರು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಧನ ಪಡೆದ ಕಂಪನಿಗಳ ಮುಖ್ಯಸ್ಥರು, ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಹೆಜ್ಜೆಹೆಜ್ಜೆಗೂ ಕಣ್ಗಾವಲು ಇರಿಸಲಾಗಿದೆ.

ದೆಹಲಿಯಲ್ಲಿ 7ಸುತ್ತಿನ ಕೋಟೆ ಭದ್ರತೆ

  • 1 ಸಾವಿರಕ್ಕೂ ಹೆಚ್ಚು ಹೈಡೆಫಿನಿಷನ್‌ ಸಿಸಿ ಕ್ಯಾಮರಾ ಅಳವಡಿಕೆ
  • AI ತಂತ್ರಜ್ಞಾನದ ಕಣ್ಗಾವಲು ಇರಿಸುವ ಲೈವ್‌ ಕ್ಯಾಮರಾಗಳು
  • ಮುಖಚಹರೆಗಳನ್ನು ಪತ್ತೆ ಮಾಡುವ ಅತ್ಯಾಧುನಿಕ ಕ್ಯಾಮರಾಗಳು
  • 30ಕ್ಕೂ ಹೆಚ್ಚು ಕಂಟ್ರೋಲ್‌ ರೂಂಗಳಿಂದ ಲೈವ್‌ ಮಾನಿಟರ್‌
  • ದೃಶ್ಯಾವಳಿಗಳ ಮೇಲೆ ನಿಗಾ ಇರಿಸಲು 150ಕ್ಕೂ ಹೆಚ್ಚು ಸಿಬ್ಬಂದಿ
  • ಭದ್ರತಾ ಪಡೆಗಳಿಗೆ AI ತಂತ್ರಜ್ಞಾನದ ಗ್ಲಾಸ್‌ಗಳನ್ನ ನೀಡಲಾಗಿದೆ
  • ಪಥಸಂಚಲನ ಮಾರ್ಗದಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರು
  • ಗುಪ್ತಚರ ಸಿಬ್ಬಂದಿ ಸೇರಿದಂತೆ ಅರೆಸೇನಾಪಡೆ, ಸೇನಾಪಡೆ ಅಲರ್ಟ್

ದೆಹಲಿಯ ಪ್ರಮುಖ ರಸ್ತೆಗಳನ್ನ ಬ್ಲಾಕ್‌ ಮಾಡಲಾಗಿದ್ದು, ಹಲವು ಮಾರ್ಗಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಗಣರಾಜ್ಯೋತ್ಸವಕ್ಕೆ ರಾಷ್ಟ್ರ ರಾಜಧಾನಿ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:14 am, Mon, 26 January 26

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ