ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ಜಾತಾ ನಡೆಸಲು ಪೊಲೀಸರ ಒಪ್ಪಿಗೆ

|

Updated on: Jan 23, 2021 | 8:02 PM

ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ 11ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿತ್ತು. ಈ ಬೆನ್ನಲ್ಲೇ ರೈತರು ಟ್ರ್ಯಾಕ್ಟರ್​ ಜಾತಾ ನಡೆಸಲು ಒಪ್ಪಿಗೆ ಕೇಳಿದ್ದರು. ಇದಕ್ಕೆ ದೆಹಲಿ ಪೊಲೀಸರು ಸಮ್ಮತಿ ನೀಡಿದ್ದಾರೆ.

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ಜಾತಾ ನಡೆಸಲು ಪೊಲೀಸರ ಒಪ್ಪಿಗೆ
ಪಂಜಾಬ್​ ರೈತರ ಟ್ರ್ಯಾಕ್ಟರ್​ಗಳಲ್ಲಿ ದೆಹಲಿಗೆ ತೆರಳುತ್ತಿರುವುದು
Follow us on

ನವದೆಹಲಿ: ಗಣರಾಜ್ಯೋತ್ಸವದಂದು ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್​ ಪರೇಡ್​ ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 26ರಂದು ಸಾವಿರಾರು ಟ್ರ್ಯಾಕ್ಟರ್​ಗಳು ದೆಹಲಿ ಪ್ರವೇಶಿಸಲಿವೆ.

ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ 11ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿತ್ತು. ಈ ಬೆನ್ನಲ್ಲೇ ರೈತರು ಟ್ರ್ಯಾಕ್ಟರ್​ ಜಾತಾ ನಡೆಸಲು ಒಪ್ಪಿಗೆ ಕೇಳಿದ್ದರು. ಇದಕ್ಕೆ ದೆಹಲಿ ಪೊಲೀಸರು ಸಮ್ಮತಿ ನೀಡಿದ್ದಾರೆ.

ಸಾವಿರಾರು ರೈತರು ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ದೆಹಲಿಗೆ ಟ್ರ್ಯಾಕ್ಟರ್​ ಮೂಲಕ ಬರಲಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಕಠಿಣ ಸಂದೇಶ ರವಾನೆ ಮಾಡಲಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಟ್ರ್ಯಾಕ್ಟರ್​ ಜಾತಾ ಹಿಂಸಾಚಾರಕ್ಕೆ ತಿರುಗುವ ಬಗ್ಗೆ ಕೆಲ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಶಾಂತಿಯುತವಾಗಿ ಈ ಪ್ರತಿಭಟನೆ ನಡೆಯಲಿದೆ ಎನ್ನುವ ಖಾತ್ರಿ ನೀಡಿದ ಮೇಲೆ ಪೊಲೀಸರು ಪ್ರತಿಭಟನೆಗೆ ಒಪ್ಪಿಗೆ ನೀಡಿದ್ದಾರೆ.

ಟ್ರ್ಯಾಕ್ಟರ್ ಪರೇಡ್: ದೆಹಲಿ ಪೊಲೀಸರೇ ನಿರ್ಣಯ ಕೈಗೊಳ್ಳಲಿ ಎಂದ ಸುಪ್ರೀಂ ಕೋರ್ಟ್