ಮುಂಬೈ: ರಿಪಬ್ಲಿಕ್ ಟಿವಿ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರು ತಮ್ಮ ತಾಯಿಯ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ರು.
ಅವರ ಡೆತ್ನೋಟ್ನಲ್ಲಿ ಅರ್ನಬ್ ಗೋಸ್ವಾಮಿ ಸೇರಿ ಹಲವರು ಹಣ ಕೊಡಬೇಕಿತ್ತು. ಈ ಹಣ ವಸೂಲಿಯಾಗದ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಅಂತಾ ಬರೆದಿಟ್ಟಿದ್ರು. ಈ ಪ್ರಕರಣದ ವಿಚಾರಣೆಗಾಗಿ ನಿನ್ನೆ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯನ್ನ ವಶಕ್ಕೆ ಪಡೆದಿದ್ರು. ಅರ್ನಬ್ ಗೋಸ್ವಾಮಿ ಶೈಲಿಯ ಪತ್ರಿಕೋದ್ಯಮವನ್ನ ಟಿವಿ9 ವೈಯಕ್ತಿಕವಾಗಿ ಬೆಂಬಲಿಸೋದಿಲ್ಲ. ಆದ್ರೆ ಪತ್ರಕರ್ತನ ಮೇಲೆ ಆಗಿರೋ ಈ ದಬ್ಬಾಳಿಕೆ ಹಾಗೂ ಅವರನ್ನ ಬಂಧಿಸಿದ ರೀತಿಯನ್ನ ಟಿವಿ9 ಖಂಡಿಸುತ್ತದೆ.
ಇದೇ ವೇಳೆ, ಅರ್ನಬ್ ಗೋಸ್ವಾಮಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯದಲ್ಲಿ ನಡೆಯಲಿದೆ.
ಇದನ್ನೂ ಓದಿ: ಸಮನ್ಸ್ ಇಲ್ಲದೆಯೇ ಸಂಪಾದಕ ಅರ್ನಬ್ ಅರೆಸ್ಟ್
Published On - 7:29 am, Thu, 5 November 20