ನಾನು ಮುಗ್ಧ ಎಂದ ಆರ್‌ಜಿ ಕರ್ ಕೊಲೆ ಪ್ರಕರಣ ಆರೋಪಿ, ಭಾವುಕರಾದ ವೈದ್ಯೆಯ ತಂದೆ; ಇಂದು ಕೋರ್ಟ್​ನಲ್ಲಿ ನಡೆದಿದ್ದೇನು?

|

Updated on: Jan 18, 2025 | 6:40 PM

ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ಮುಖ್ಯ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥನೆಂದು ಕೋರ್ಟ್ ಘೋಷಿಸಿದೆ. ಆದರೆ, ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿಲ್ಲ. ಇಂದು ಕೋರ್ಟ್​ನಲ್ಲಿ ವಾದದ ನಡುವೆ ಏನೇನಾಯ್ತು? ಆರೋಪಿ ಹಾಗೂ ಮೃತ ವೈದ್ಯೆಯ ಕುಟುಂಬಸ್ಥರು ನ್ಯಾಯಮೂರ್ತಿಗಳ ಎದುರು ಹೇಳಿದ್ದೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಾನು ಮುಗ್ಧ ಎಂದ ಆರ್‌ಜಿ ಕರ್ ಕೊಲೆ ಪ್ರಕರಣ ಆರೋಪಿ, ಭಾವುಕರಾದ ವೈದ್ಯೆಯ ತಂದೆ; ಇಂದು ಕೋರ್ಟ್​ನಲ್ಲಿ ನಡೆದಿದ್ದೇನು?
Rg Kar
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ 5 ತಿಂಗಳಿಗೂ ಹೆಚ್ಚು ಕಾಲವಾಗಿದೆ. ಈ ಪ್ರಕರಣ ಇಡೀ ದೇಶಾದ್ಯಂತ ಆಘಾತ ಉಂಟುಮಾಡಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ಅಪರಾಧದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಸಂಜಯ್ ರಾಯ್​ನನ್ನು ಅತ್ಯಾಚಾರವನ್ನು ನಿಯಂತ್ರಿಸುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64 ಮತ್ತು ಸಾವು ಮತ್ತು ಕೊಲೆಗೆ ಶಿಕ್ಷೆಯನ್ನು ನೀಡುವ ಕಾಯ್ದೆಯ ಸೆಕ್ಷನ್ 66 ಮತ್ತು 103 (1)ರ ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಲಾಯಿತು. ಕಳೆದ ವರ್ಷ ಆಗಸ್ಟ್ 9ರಂದು ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನ ಮೂರನೇ ಮಹಡಿಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ವೈದ್ಯೆಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಸಂಜಯ್​ನನ್ನು ಬಂಧಿಸಲಾಗಿತ್ತು.

ಇಂದು ಕೋರ್ಟ್​ನಲ್ಲಿ ನಡೆದ ಪರ-ವಿರೋಧಿಗಳ ವಾದ ಹೀಗಿದೆ:

ನ್ಯಾಯಾಧೀಶರು: ಆರೋಪಿಗಳ ಪರವಾಗಿ ಯಾರಾದರೂ ಇದ್ದಾರೆಯೇ?, ಸುಪ್ರೀಂ ಕೋರ್ಟ್‌ನಲ್ಲಿ ಯಾವುದಾದರೂ ತಡೆಯಾಜ್ಞೆ ಇದೆಯೇ?

ಸಂಜಯ್ ಪರ ವಕೀಲರು: ಪಟ್ಟಿ ಇಲ್ಲ.

ನ್ಯಾಯಾಧೀಶರು: ನಿಮ್ಮ ವಿರುದ್ಧದ ಆರೋಪಗಳೆಂದರೆ ನೀವು ಮುಂಜಾನೆ ಆಸ್ಪತ್ರೆಗೆ ಪ್ರವೇಶಿಸಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡಿದ್ದೀರಿ. ನೀವು ಆಕೆಯ ಗಂಟಲನ್ನು ಹಿಡಿದು, ಆಕೆಯ ಮುಖವನ್ನು ಒತ್ತಿದಿರಿ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಯಿತು. ಪರಿಣಾಮವಾಗಿ ಆಕೆ ಸಾವನ್ನಪ್ಪಿದರು. ಸೆಕ್ಷನ್‌ 64 ಮತ್ತು 103 ನೀವು ಆರೋಪಿ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ: ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸಂಜಯ್ ರಾಯ್ ಅಪರಾಧಿ ಎಂದು ಸಾಬೀತು

ನ್ಯಾಯಾಧೀಶರು: ಶಿಕ್ಷೆ 10 ವರ್ಷಗಳಿಗಿಂತ ಕಡಿಮೆಯಿಲ್ಲ. ಇದು ಜೀವಾವಧಿ ಶಿಕ್ಷೆಯಾಗಬಹುದು. ಸೆಕ್ಷನ್ 64 ಬಿಎನ್‌ಎಸ್ ಅಡಿಯಲ್ಲಿ 25 ವರ್ಷಗಳು ಅಥವಾ ಜೀವಾವಧಿ ಶಿಕ್ಷೆಯಾಗಬಹುದು. ಇದು ಮರಣದಂಡನೆಯೂ ಆಗಿರಬಹುದು.

ನ್ಯಾಯಾಧೀಶರು: ನೀವು ಆ ವೈದ್ಯೆಯನ್ನು ಕೊಂದ ರೀತಿಗೆ ಗರಿಷ್ಠ ಶಿಕ್ಷೆ ಮರಣದಂಡನೆಯಾಗಬಹುದು, ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯಾಗಬಹುದು. ಶಿಕ್ಷೆ ಸೋಮವಾರದಂದು ಪ್ರಕಟಿಸಲಾಗುವುದು.

ಸಂಜಯ್: ನನ್ನನ್ನು ಸುಳ್ಳು ಆರೋಪದಿಂದ ಬಂಧಿಸಲಾಗಿದೆ. ನನ್ನ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಇತ್ತು. ಅದು ಕೊಲೆ ನಡೆದ ದಿನ ಗಲಾಟೆಯ ವೇಳೆ ಹರಿದು ಹೋಗಿರಬಹುದು. ಅದು ಏಕೆ ಸಿಗಲಿಲ್ಲ?

ನ್ಯಾಯಾಧೀಶರು: ನಾನು ಅಂದುಕೊಂಡಂತೆ ನೀವು ತಪ್ಪಿತಸ್ಥರು. ಸೋಮವಾರ ನಾನು ನಿಮಗೆ ಮಾತನಾಡಲು ಅವಕಾಶ ನೀಡುತ್ತೇನೆ.

ಸಂಜಯ್: ನಾನು ಬಡವ. ನಾನು ಇದನ್ನು ಮಾಡಲಿಲ್ಲ. ತಪ್ಪು ಮಾಡಿದವರನ್ನು ಬಂಧಿಸಿ. ಮಾಧ್ಯಮಗಳು ಸಹ ಅದನ್ನು ಹೇಳಿವೆ. ನೀವು ಪೊಲೀಸರನ್ನು ನೋಡುತ್ತಾ ಸಹ ಅದನ್ನೇ ಹೇಳಿದ್ದೀರಿ. ಹಾಗಾದರೆ ನನ್ನನ್ನು ಏಕೆ ಬಂಧಿಸುತ್ತಿದ್ದೀರಿ?

ತನಗೆ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಯುತ್ತಿದ್ದಂತೆ ಸಂಜಯ್ ಇಂದು ಬಹಳ ಹತಾಶನಾಗಿ ನ್ಯಾಯಾಧೀಶರ ಎದುರು ಮಾತನಾಡುತ್ತಿದ್ದ. ಆತನನ್ನು ಪೊಲೀಸರು ಹೊರಗೆ ಕರೆದುಕೊಂಡು ಹೋದ ನಂತರವೂ ಆತ ಕಣ್ಣೀರಿಡುತ್ತಿದ್ದ.

ಇದರ ನಡುವೆ ಸಂಜಯ್ ಅಪರಾಧಿ ಎಂದು ಘೋಷಿಸುತ್ತಿದ್ದಂತೆ ಮೃತ ವೈದ್ಯೆಯ ತಂದೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕೋರ್ಟ್​ ಮೇಲೆ ನಾನಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೀರಿ ಎಂದು ಅವರು ಕುಸಿದು, ಕಣ್ಣೀರಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sat, 18 January 25