Rihanna | ಪಾಪ್ ತಾರೆ ರಿಹಾನ್ನಾ ಕೊರಳಲ್ಲಿ ಗಣೇಶನ ಹಾರ: ನಮ್ಮ ದೇವರಿಗೆ ಅವಮಾನ ಸಲ್ಲದು ಎಂದ ನೆಟ್ಟಿಗರು
Topless Rihanna Lord Ganesha Pendant | ಅಂತರರಾಷ್ಟ್ರೀಯ ಪಾಪ್ ತಾರೆ ರಿಹನ್ನಾ ಮಂಗಳವಾರ ತನ್ನ ಟಾಪ್‌ಲೆಸ್ ಫೋಟೋ ಹಂಚಿಕೊಂಡು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡ ಫೋಟೋವೊಂದರಲ್ಲಿ, ಗಾಯಕಿ ಗುಲಾಬಿ ಬಣ್ಣದ ಚಡ್ಡಿ ಮತ್ತು ವಜ್ರ ಹೊದಿಕೆಯ ಗಣೇಶ ಹಾರವನ್ನು ಧರಿಸಿರುವುದು ಕಂಡುಬಂದಿದೆ.
ಇತ್ತೀಚೆಗೆ ವಿವಾದಗಳ ಸರಮಾಲೆ ಧರಿಸುತ್ತಿರುವ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಮಂಗಳವಾರ ತನ್ನ ಟಾಪ್‌ಲೆಸ್ ಫೋಟೋ ಹಂಚಿಕೊಂಡು (Topless Rihanna) ಮತ್ತೊಂದು ವಿವಾದಕ್ಕೆ ತುತ್ತಾಗಿದ್ದಾರೆ. ತಮ್ಮ ಟ್ವಿಟ್ಟರ್ನಲ್ಲಿ ಅವರು ಹಂಚಿಕೊಂಡಿರುವ ಫೋಟೋವೊಂದರಲ್ಲಿ, ಗಾಯಕಿ ಗುಲಾಬಿ ಬಣ್ಣದ ಚಡ್ಡಿ ಮತ್ತು ವಜ್ರದಿಂದ ಮಾಡಿರುವ ಗಣೇಶನ ಹಾರವನ್ನು (Lord Ganesha Pendant) ಧರಿಸಿರುವುದು ಕಂಡುಬಂದಿದೆ.
ರಿಹನ್ನಾಳ ಈ ಚಿತ್ರ ನೋಡಿ ನೆಟ್ಟಿಗರು ನೆಟ್ಟಗೆ ಆಕೆಯ ಪೋಸ್ಟ್ ಮೇಲೆ ಮುಗಿಬಿದ್ದಿದ್ದಾರೆ. ಹಲವಾರು ನೆಟ್ಟಿಗರು ಪಾಪ್ ತಾರೆಯ ಈ ಅವತಾರ ಕಂಡು ರೊಚ್ಚಿಗೆದ್ದಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನಮ್ಮ ಧರ್ಮವನ್ನು ನಿಮ್ಮ ಸೌಂದರ್ಯವಾಗಿ ಬಳಸುವುದನ್ನು ನಿಲ್ಲಿಸಿ ಎಂದು ನೆಟ್ಟಿಗರು ರಿಹನ್ನಾಳನ್ನು ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸುದ್ದಿಯನ್ನು ಟ್ವೀಟ್ ಮಾಡಿದ್ದ ಅಂತರರಾಷ್ಟ್ರೀಯ ಪಾಪ್ ತಾರೆ ರಿಹನ್ನಾ, ನಾವು ಈ ಪ್ರತಿಭಟನೆಯ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದರು. ಪ್ರತಿಭಟನೆ ನಿರತ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂಬ ಸಿಎನ್ಎನ್ ಸುದ್ದಿಯನ್ನು ಟ್ವೀಟಿಸಿ ರಿಹಾನ್ನಾ #FarmersProtest ಎಂಬ ಹ್ಯಾಷ್ಟ್ಯಾಗ್ ನೊಂದಿಗೆ ಈ ಪ್ರಶ್ನೆಯೆತ್ತಿದ್ದರು.
Published On - 4:18 pm, Tue, 16 February 21