ದೆಹಲಿ: ಭಾನುವಾರ ದೆಹಲಿ-ಗುವಾಹಟಿ ವಿಮಾನದಲ್ಲಿ (Delhi-Guwahati flight) ಇಂಧನ ಬೆಲೆ ಏರಿಕೆ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani)ಅವರನ್ನು ಕಾಂಗ್ರೆಸ್ ಮಹಿಳಾ ವಿಭಾಗದ ಕಾರ್ಯಕಾರಿ ಮುಖ್ಯಸ್ಥೆ ನೆಟ್ಟಾ ಡಿಸೋಜಾ (Netta D’Souza) ಪ್ರಶ್ನಿಸಿದ್ದಾರೆ. ಸ್ಮೃತಿ ಇರಾನಿ ಅವರಲ್ಲಿ ಪ್ರಶ್ನೆ ಕೇಳುತ್ತಿರುವ ವಿಡಿಯೊವನ್ನು ಡಿಸೋಜಾ ಟ್ವೀಟ್ ಮಾಡಿದ್ದಾರೆ. ಸಚಿವರನ್ನು ಟ್ಯಾಗ್ ಮಾಡಿರುವ ಟ್ವೀಟ್‌ನಲ್ಲಿ, “ಮೋದಿಯವರ ಸಚಿವೆ ಸ್ಮೃತಿ ಇರಾನಿ ಗುವಾಹಟಿಗೆ ಹೋಗುವ ಮಾರ್ಗದಲ್ಲಿ ಮುಖಾಮುಖಿಯಾದರು. ಎಲ್‌ಪಿಜಿಯ ಏರುತ್ತಿರುವ ಬೆಲೆಗಳ ಬಗ್ಗೆ ಕೇಳಿದಾಗ, ಅವರು ಲಸಿಕೆಗಳು, ಪಡಿತರ ಮತ್ತು ಬಡವರನ್ನೂ ದೂಷಿಸಿದರು.ವಿಡಿಯೊದಲ್ಲಿ ಅವರು ಸಾಮಾನ್ಯ ಜನರ ದುಃಖಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೋಡಿ ಎಂದಿದ್ದಾರೆ. ವಿಡಿಯೊದಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಸ್ಮೃತಿ ಅವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕಿ ನಮ್ಮ ದಾರಿಯನ್ನು ತಡೆಯುತ್ತಿದ್ದಾರೆ ಎಂದು ಮೊದಲಿಗೆ ಸ್ಮೃತಿ ಇರಾನಿ ಹೇಳಿದ್ದಾರೆ. ಅಡುಗೆ ಅನಿಲ ಕೊರತೆ ಹಾಗೂ ಗ್ಯಾಸ್ ರಹಿತ ಸ್ಟೌವ್‌ಗಳ ಬಗ್ಗೆ ಕೇಳಿದ ಪ್ರಶ್ನೆಗೆ, ‘ದಯವಿಟ್ಟು ಸುಳ್ಳು ಹೇಳಬೇಡಿ’ ಎಂದು ಸಚಿವರು ಹೇಳುತ್ತಿರುವುದು ವಿಡಿಯೊದಲ್ಲಿದೆ. ನಂತರ ಆಕೆಯ ಜತೆ ವಾಕ್ ತರ್ಕ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ಕೇಳಿಸುತ್ತದೆ.
Faced Modi Minister @smritiirani ji, enroute to Guwahati.
When asked about Unbearable Rising Prices of LPG, she blamed Vaccines, Raashan & even the poor!
Do watch the video excerpts, on how she reacted to common people’s misery ! ? pic.twitter.com/NbkW2LgxOL
— Netta D’Souza (@dnetta) April 10, 2022
16 ದಿನಗಳಲ್ಲಿ 115 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಲೀಟರ್‌ಗೆ ₹ 10ರಷ್ಟು ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಯಾವುದೇ ಏರಿಕೆಯಾಗಿಲ್ಲ. ದೆಹಲಿಯಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ₹ 105.41 ಕ್ಕೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ ₹ 96.67 ಕ್ಕೆ ಮಾರಾಟವಾಗುತ್ತಿದೆ. ನಾಲ್ಕು ಮಹಾನಗರಗಳ ಪೈಕಿ ಮುಂಬೈನಲ್ಲಿ ಇಂಧನ ಬೆಲೆಗಳು ಅತ್ಯಧಿಕವಾಗಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ ₹ 120.51 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 104.77 ಕ್ಕೆ ಮಾರಾಟವಾಗುತ್ತಿದೆ.
ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳು ಸ್ಥಿರವಾಗಿವೆ. ಇತ್ತೀಚೆಗಷ್ಟೇ ಚುನಾವಣೆ ನಡೆದ ನಾಲ್ಕು ರಾಜ್ಯಗಳನ್ನು ತನ್ನಲ್ಲೇ ಉಳಿಸಿಕೊಂಡಿರುವ ಬಿಜೆಪಿಯ ಚುನಾವಣಾ ತಂತ್ರವಾಗಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ. ರಷ್ಯಾ-ಉಕ್ರೇನ್ ಯುದ್ಧದ ಬೆಲೆ ಏರಿಕೆಗೆ ಕಾರಣವಾಗಿರುವ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಯುಎಸ್, ಯುಕೆ, ಕೆನಡಾ, ಜರ್ಮನಿ ಮತ್ತು ಶ್ರೀಲಂಕಾದಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೇವಲ 5 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಶೇ 50 ರಷ್ಟು ಏರಿಕೆಯಾಗಿದೆ. ಯುದ್ಧದ ನಂತರ ಭಾರತದಲ್ಲಿ ಪೆಟ್ರೋಲ್ ಬೆಲೆಯ ಹೆಚ್ಚಳವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೊವಿಡ್-19 ಹೋಗಿಲ್ಲ, ರೂಪಗಳನ್ನು ಬದಲಾಯಿಸುತ್ತಾ ಮತ್ತೆ ಬರುತ್ತಿದೆ: ಪ್ರಧಾನಿ ಮೋದಿ