ಗಾಡ ನಿದ್ರೆಯಲ್ಲಿದ್ದ ವೃದ್ಧ ದಂಪತಿಯನ್ನು ಚಿರ ನಿದ್ರೆಗೆ ಜಾರಿಸಿ.. ಮನೆ ದೋಚಿದ ನರ ಹಂತಕರು
ತಡ ರಾತ್ರಿ ನರ ಹಂತಕರು ಅಡುಗೆ ಕೋಣೆಯ ಬಾಗಿಲು ಮುರಿದು ವೃದ್ಧ ದಂಪತಿ ಮನೆಗೆ ನುಗ್ಗಿದ್ದಾರೆ. ಬಳಿಕ ದಂಪತಿ ಕೊಲೆ ಮಾಡಿ ಮನೆಯನ್ನು ಜಾಲಾಡಿ ಅಲ್ಲಿದ್ದ ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಮನೆಯನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಹೈದರಾಬಾದ್: ಮಲಗಿದ್ದ ದಂಪತಿಯನ್ನು ಹಂತಕರು ಹತ್ಯೆ ಮಾಡಿ ಪರಾರಿಯಾಗಿರುವ ದಾರುಣ ಘಟನೆಯೊಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಕಾಂಚಿಕಾಚೆರ್ಲಾದಲ್ಲಿ (Kanchikacherla) ನಡೆದಿದೆ. ಬಂಡಾರುಪಲ್ಲಿ ನಾಗೇಶ್ವರರಾವ್, ಪ್ರಮಿಳಾ ಕೊಲೆಯಾದ ವೃದ್ಧ ದಂಪತಿ.
ತಡ ರಾತ್ರಿ ನರ ಹಂತಕರು ಅಡುಗೆ ಕೋಣೆಯ ಬಾಗಿಲು ಮುರಿದು ವೃದ್ಧ ದಂಪತಿ ಮನೆಗೆ ನುಗ್ಗಿದ್ದಾರೆ. ಬಳಿಕ ದಂಪತಿ ಕೊಲೆ ಮಾಡಿ ಮನೆಯನ್ನು ಜಾಲಾಡಿ ಅಲ್ಲಿದ್ದ ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಮನೆಯನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ನಂದಿ ಗಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಳ್ಳತನ ಮಾಡಲು ವೃದ್ಧ ದಂಪತಿ ಪ್ರಾಣ ತೆಗೆದಿರುವುದು ಗ್ರಾಮದ ಜನರಲ್ಲಿ ಆತಂಕ, ಭಯ ಹುಟ್ಟುವಂತೆ ಮಾಡಿದೆ.
ವಿಚಾರಣೆ ವೇಳೆ ಹೊರಬಿತ್ತು ಮತ್ತೊಂದು ಸತ್ಯ: ಕೊಲೆ ಆರೋಪಿ ನಡೆಸುತ್ತಿದ್ದನಂತೆ ಖೋಟಾ ನೋಟು ಜಾಲ!
Published On - 2:51 pm, Sun, 27 December 20